Site icon Vistara News

ಬೆಂಗಳೂರಿನಲ್ಲಿ ಮತ್ತೆ ಏರುಗತಿಯಲ್ಲಿ ಬಂಗಾರದ ದರ, 440 ರೂ. ಹೆಚ್ಚಳ, ಬೆಳ್ಳಿ 900 ರೂ. ದುಬಾರಿ

gold

Beautifully crafted traditional Indian gold jewellery for women. The ornaments are known as bangles worn to hands and made up of 22 carat gold.

ಬೆಂಗಳೂರು: ಚಿನ್ನದ ಪ್ರೇಮಿಗಳಿಗೆ ಬಂಗಾರದ ದರ ಮತ್ತೆ ತುಟ್ಟಿಯಾಗಿದೆ. ಬೆಂಗಳೂರಿನಲ್ಲಿ ಚಿನ್ನದ ದರದಲ್ಲಿ ಶನಿವಾರ ದಿಢೀರ್‌ 440 ರೂ. ಏರಿಕೆಯಾಗಿದೆ. 24 ಕ್ಯಾರಟ್‌ ಬಂಗಾರದ ದರ 50,950 ರೂ.ಗೆ ಜಿಗಿದಿದೆ. ಶುಕ್ರವಾರ 50,510 ರೂ. ಇತ್ತು.
22 ಕ್ಯಾರಟ್‌ ಚಿನ್ನದ ದರದಲ್ಲಿ 440 ರೂ. ಹೆಚ್ಚಳವಾಗಿದ್ದು 46,000ರೂ.ಗೆ ವೃದ್ಧಿಸಿದೆ. 1 ಕೆ.ಜಿ ಬೆಳ್ಳಿಯ ದರದಲ್ಲಿ 900 ರೂ. ಜಿಗಿದಿದ್ದು, 65,900 ರೂ.ಗೆ ಹೆಚ್ಚಳವಾಗಿದೆ. ಆದರೆ ಪ್ಲಾಟಿನಮ್‌ ದರದಲ್ಲಿ 10 ಗ್ರಾಮ್‌ ಗೆ 50 ರೂ.ಗಳಾಗಿದೆ.
ಚಿನ್ನ, ಬೆಳ್ಳಿ, ಪ್ಲಾಟಿನಮ್‌ ದರಗಳು ಅಂತಾರಾಷ್ಟ್ರೀಯ ದರಗಳನ್ನು ಆಧರಿಸಿ ವ್ಯತ್ಯಾಸವಾಗುತ್ತವೆ. ಈ ಅಮೂಲ್ಯ ಲೋಹಗಳ ಆಮದನ್ನು ಅವಲಂಬಿಸಿರುವುದು ಇದಕ್ಕೆ ಕಾರಣ. ಡಾಲರ್‌ ಎದುರು ರೂಪಾಯಿ ಮೌಲ್ಯದ ಏರಿಳಿತ ಕೂಡ ಪ್ರಭಾವ ಬೀರುತ್ತದೆ.

Exit mobile version