ಬೆಂಗಳೂರು: ಬಂಗಾರದ ದರದಲ್ಲಿ ಮಂಗಳವಾರ 330 ರೂ. ಹೆಚ್ಚಳವಾಗಿದೆ.
24 ಕ್ಯಾರಟ್ನ 10 ಗ್ರಾಮ್ ಚಿನ್ನದ ದರದಲ್ಲಿ 330 ರೂ. ಏರಿಕೆಯಾಗಿದ್ದು, 50,780 ರೂ.ಗೆ ವೃದ್ಧಿಸಿದೆ. 22 ಕ್ಯಾರಟ್ನ 10 ಗ್ರಾಮ್ ಬಂಗಾರದ ದರದಲ್ಲಿ 300 ರೂ. ಏರಿಕೆಯಾಗಿದ್ದು, 46,550 ರೂ.ಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಕೆ.ಜಿಗೆ 1,100 ರೂ. ಏರಿಕೆಯಾಗಿದ್ದು, 65,600 ರೂ.ಗೆ ವೃದ್ಧಿಸಿದೆ.
ಅಂತಾರಾಷ್ಟ್ರೀಯ ದರವನ್ನು ಆಧರಿಸಿ ಭಾರತದಲ್ಲಿ ಬಂಗಾರ ಮತ್ತು ಬೆಳ್ಳಿಯ ದರಗಳು ನಿಗದಿಯಾಗುತ್ತವೆ.