ಬೆಂಗಳೂರು: ಬೆಂಗಳೂರಿನಲ್ಲಿ ಬುಧವಾರ ಬಂಗಾರದ ದರದಲ್ಲಿ 160 ರೂ. ಹೆಚ್ಚಳವಾಗಿದೆ. 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 60,160 ರೂ.ಗೆ ವೃದ್ಧಿಸಿದೆ. (Gold rate today) ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ 150 ರೂ. ಹೆಚ್ಚಳವಾಗಿದ್ದು, 55,150 ರೂ.ಗೆ ಏರಿಕೆಯಾಗಿದೆ. ಪ್ರತಿ ಕೆಜಿ ಬೆಳ್ಳಿಯ ದರ 76,000 ರೂ.ನಷ್ಟಿತ್ತು.
ಭಾರತದಲ್ಲಿ ಕಳೆದ 1965ರಿಂದೀಚೆಗೆ ಬಂಗಾರದ ದರದ ಟ್ರೆಂಡ್ ಹೀಗಿತ್ತು:
ವರ್ಷ | 24 ಕ್ಯಾರಟ್ ಬಂಗಾರದ ದರ (10 ಗ್ರಾಮ್‌ಗೆ, ರೂ.ಗಳಲ್ಲಿ) |
1965 | 71 |
1970 | 184 |
1975 | 540 |
1980 | 1,330 |
1985 | 2,130 |
1990 | 3,200 |
1995 | 4,680 |
2000 | 4,400 |
2005 | 7,000 |
2010 | 18,500 |
2015 | 26,343 |
2020 | 48,651 |
2022 | 52,670 |
2023 | 61,225 |
ಭಾರತೀಯರು ವಿಶ್ವದಲ್ಲಿಯೇ ಅತಿ ಹೆಚ್ಚು ಬಂಗಾರವನ್ನು ಬಳಸುತ್ತಾರೆ. ಒಟ್ಟು ಆಮದಿನಲ್ಲಿ ಇದರ ಮೌಲ್ಯ ಗಮನಾರ್ಹ. ಸುರಕ್ಷಿತ ಹೂಡಿಕೆಯ ಸಾಧನವಾಗಿ ಬಂಗಾರವನ್ನು ಭಾರತೀಯರು ಬಯಸುತ್ತಾರೆ.
ಬಂಗಾರದ ಮೇಲಿನ ಹೂಡಿಕೆಯ ಆಯ್ಕೆಗಳು ಈಗ ವಿಕಾಸವಾಗಿದೆ. ಮನೆಯಲ್ಲಿಯೇ ಕುಳಿತುಕೊಂಡು ಚಿನ್ನದಲ್ಲಿ ಹೂಡಿಕೆ ಮಾಡಬಹುದು. ನೀವು ಜ್ಯುವೆಲ್ಲರಿ ಮಳಿಗೆಗೆ ಹೋಗಿ ಚಿನ್ನದ ನಾಣ್ಯಗಳು ಅಥವಾ ಚಿನ್ನವನ್ನು ಕೊಳ್ಳಬಹುದು. ಅಥವಾ ಆನ್‌ಲೈನ್‌ನಲ್ಲಿ ನೀವಿರುವಲ್ಲಿಂದಲೇ ವೆಬ್ ಪೋರ್ಟಲ್ ಮೂಲಕ ಡಿಜಿಟಲ್ ಬಂಗಾರದಲ್ಲಿ ಹೂಡಿಕೆ ಮಾಡಬಹುದು. ಅನೇಕ ಮಂದಿಗೆ ಡಿಜಿಟಲ್ ಬಂಗಾರದ ಬಗ್ಗೆ ತಿಳಿದಿಲ್ಲ. (ವಿಸ್ತಾರ Money Guide) ಹೀಗಾಗಿ ಭೌತಿಕ ಚಿನ್ನವನ್ನು ಖರೀದಿಸುತ್ತಾರೆ. ಹಾಗಾದರೆ ಏನಿದು?
ಭೌತಿಕ ಚಿನ್ನ ಮತ್ತು ಡಿಜಿಟಲ್ ಬಂಗಾರ ಒಬ್ಬ ಹೂಡಿಕೆದಾರನಿಗೆ, ಆತನ ಬೇಡಿಕೆಗೆ ತಕ್ಕಂತೆ ಉತ್ತಮ ಆಯ್ಕೆಯನ್ನು ನೀಡುತ್ತದೆ. ಬಳಕೆಯ ಉದ್ದೇಶಕ್ಕಾಗಿ ಭೌತಿಕ ರೂಪದ ಬಂಗಾರವನ್ನು, ಅಂದರೆ ಒಡವೆಗಳನ್ನು ಖರೀದಿಸುವುದು ಸೂಕ್ತ. ಆದರೆ ಹೂಡಿಕೆಯ ಉದ್ದೇಶಕ್ಕಾಗಿ ಬಂಗಾರದ ನಾಣ್ಯ, ಗಟ್ಟಿಗಳು ಅಥವಾ ಡಿಜಿಟಲ್ ಬಂಗಾರವನ್ನು ಖರೀದಿಸಬಹುದು. ಡಿಜಿಟಲ್ ಚಿನ್ನದಲ್ಲಿ ಕೆಲವೊಂದು ವೆಚ್ಚಗಳನ್ನು ಉಳಿಸಬಹುದು. ಸ್ಟೋರೇಜ್ ಅಗತ್ಯ ಇರುವುದಿಲ್ಲ. ನಗದೀಕರಣ ಸುಲಭ ಎನ್ನುತ್ತಾರೆ ಎಸ್‌ಎಜಿ ಇನ್ಫೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಅಮಿತ್ ಗುಪ್ತಾ.
100 ರೂ.ಗಳಿಂದಲೂ ಡಿಜಿಟಲ್ ಚಿನ್ನ ಖರೀದಿಸಿ: ಡಿಜಿಟಲ್ ಬಂಗಾರಕ್ಕೆ ನಿಯಂತ್ರಕ ವ್ಯವಸ್ಥೆ ಇರುವುದಿಲ್ಲ. ಆದರೆ ಡಿಜಿಟಲ್ ಚಿನ್ನವನ್ನು ಖರೀದಿಸುವುದು ಸುಲಭ. ಕನಿಷ್ಠ 100 ರೂ.ಗಳಿಂದಲೂ ಕೊಳ್ಳಬಹುದು. ಇದು 24K 999 ಪರಿಶುದ್ಧತೆಯ ಚಿನ್ನ ಆಗಿದೆ. NABL BIS ಪ್ರಾಮಾಣೀಕೃತ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು. ಇದರ ಖರೀದಿಗೆ ಸಂಬಂಧಿಸಿ ಲಾಕ್ ಇನ್ ಅವಧಿ ಇರುವುದಿಲ್ಲ. ಯಾವುದೇ ಸಂದರ್ಭದಲ್ಲಿ ಡಿಜಿಟಲ್ ಬಂಗಾರವನ್ನು ವಿತ್‌ಡ್ರಾ ಮಾಡಿಕೊಳ್ಳಬಹುದು. ನಿಮ್ಮ ಹೂಡಿಕೆಯ ಮೌಲ್ಯಕ್ಕೆ ಅನುಗುಣವಾಗಿ ನಗದು ಅಥವಾ ತತ್ಸಮಾನ ಬಂಗಾರವನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು.
ಡಿಜಿಟಲ್ ಗೋಲ್ಡ್ ಖರೀದಿ ಎಲ್ಲಿ: ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುವ ಹಲವು ಪ್ಲಾಟ್‌ಫಾರ್ಮ್‌ಗಳು ಇವೆ. ಎಂಎಂಟಿಸಿ, ಫೋನ್‌ಪೇ, ಗುಲ್ಲಾಕ್, ಪೇಟಿಎಂ, ಟಾಟಾ ಸಮೂಹದ ತನಿಷ್ಕ್, ಪಿಸಿ ಜ್ಯುವೆಲರ್ಸ್ ಡಿಜಿಟಲ್ ಚಿನ್ನವನ್ನು ಮಾರಾಟ ಮಾಡುತ್ತವೆ.