ಬೆಂಗಳೂರು: ಚಿನ್ನದ ದರದಲ್ಲಿ 380 ರೂ. ಏರಿಕೆಯಾಗಿದ್ದು, ಪ್ರತಿ 10 ಗ್ರಾಮ್‌ಗೆ 57,160 ರೂ.ಗೆ ವೃದ್ಧಿಸಿದೆ. (24 ಕ್ಯಾರಟ್) ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ದರದಲ್ಲಿ (Gold rate) 350 ರೂ. ಹೆಚ್ಚಳವಾಗಿದ್ದು, 52,400 ರೂ.ಗೆ ಏರಿಕೆಯಾಗಿದೆ.
1 ಕೆ.ಜಿ ಬೆಳ್ಳಿಯ ದರದಲ್ಲಿ 1,000 ರೂ. ಏರಿಕೆಯಾಗಿದ್ದು, 74,500 ರೂ.ಗೆ ವೃದ್ಧಿಸಿದೆ. ಕಳೆದ ಕೆಲವು ದಿನಗಳಿಂದ ಉಭಯ ಲೋಹಗಳ ದರಗಳು ಮಂದಗತಿಯಲ್ಲಿತ್ತು.
ಈ ವರ್ಷ ಚಿನ್ನದ ದರ ಏರುಗತಿಯಲ್ಲಿ ಮುಂದುವರಿಯಲಿದೆ. ಅಮೆರಿಕದಲ್ಲಿ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಇದರ ಪರಿಣಾಮ ಹೂಡಿಕೆದಾರರು ಬಂಗಾರದಲ್ಲಿ ಹೂಡಿಕೆ ಹೆಚ್ಚಿಸುವ ಸಾಧ್ಯತೆ ಇದೆ. ಹೀಗಾಗಿ ದರ ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.