ಬೆಂಗಳೂರು: ಚಿನ್ನದ ದರದಲ್ಲಿ ೫4೦ ರೂ. ಏರಿಕೆಯಾಗಿದ್ದು ಬೆಂಗಳೂರಿನಲ್ಲಿ ಭಾನುವಾರ ೨೪ ಕ್ಯಾರಟ್‌ನ ಪ್ರತಿ ೧೦ ಗ್ರಾಮ್ ಬಂಗಾರದ ದರ ೪೬,೯೫೦ ರೂ.ಗೆ ಏರಿಕೆಯಾಗಿದೆ.
ಆಭರಣ ಚಿನ್ನ ಅಥವಾ ೨೪ ಕ್ಯಾರಟ್ ಬಂಗಾರದ ದರದಲ್ಲಿ ೫೦೦ ರೂ. ಏರಿಕೆಯಾಗಿದ್ದು, ೪೬೯೫೦ ರೂ.ಗೆ ವೃದ್ಧಿಸಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೪೦೦ ರೂ. ಇಳಿಕೆಯಾಗಿದ್ದು, ೬೧,೨೦೦ ರೂ.ಗೆ ತಗ್ಗಿದೆ. ಪ್ಲಾಟಿನಮ್ ದರದಲ್ಲಿ ೨೦ ರೂ. ತಗ್ಗಿದ್ದು, ೧೦ ಗ್ರಾಮ್ ದರ ೨೨,೪೧೦ ರೂ. ಆಗಿದೆ.
ಚಿನ್ನದ ದರದಲ್ಲಿ ಕಳೆದ ಎರಡು ದಿನಗಳಲ್ಲಿ ಒಟ್ಟು ೯೬೦ ರೂ. ಏರಿಕೆಯಾಗಿದೆ. ಅಂತಾರಾಷ್ಟ್ರೀಯ ದರ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ.