ಬೆಂಗಳೂರು: ಬೆಂಗಳೂರಿನಲ್ಲಿ ಸೋಮವಾರ ಬಂಗಾರದ ದರದಲ್ಲಿ ಅಲ್ಪ ಏರಿಕೆಯಾಗಿದ್ದರೂ, ಇತ್ತೀಚೆಗೆ ಇಳಿಮುಖವಾಗಿದ್ದ ಸ್ವರ್ಣ ದರ ಮತ್ತೆ ಏರುಗತಿಗೆ ತಿರುಗಿದೆ. ಸೋಮವಾರ ಬೆಳ್ಳಿ ದರ ಯಥಾಸ್ಥಿತಿಯಲ್ಲಿತ್ತು. 24 ಕ್ಯಾರಟ್‌ನ 10 ಗ್ರಾಮ್ ಚಿನ್ನದ ದರ 56,950 ರೂ.ಗೆ ಚೇತರಿಸಿತ್ತು. (10 ರೂ. ) 22 ಕ್ಯಾರಟ್‌ನ 10 ಗ್ರಾಮ್ ಬಂಗಾರದ ದರ 52,210 ರೂ.ಗೆ ಸುಧಾರಿಸಿತ್ತು.
ಆದರೆ ಬಂಗಾರದ ದರದಲ್ಲಿ ಭಾನುವಾರ 830 ರೂ. ಏರಿಕೆಯಾಗಿ ( Gold rate ) 24 ಕ್ಯಾರಟ್‌ನ ಪ್ರತಿ ಹತ್ತು ಗ್ರಾಮ್ ಚಿನ್ನದ ದರ 56,940 ರೂ.ಗೆ ವೃದ್ಧಿಸಿತ್ತು. 22 ಕ್ಯಾರಟ್ ಚಿನ್ನದ ದರದಲ್ಲಿ 750 ರೂ. ವೃದ್ಧಿಸಿ, 52,200 ರೂ.ಗೆ ಹೆಚ್ಚಳವಾಗಿತ್ತು. ಬೆಂಗಳೂರಿನಲ್ಲಿ ಸೋಮವಾರ ಪ್ರತಿ ಕೆ.ಜಿ ಬೆಳ್ಳಿ ದರ (silver price) 68,700 ರೂ.ಗಳ ಯಥಾಸ್ಥಿತಿಯಲ್ಲಿತ್ತು.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪ್ರತಿ ಔನ್ಸ್ (28 ಗ್ರಾಮ್) ಬಂಗಾರದ ದರ 1636 ಡಾಲರ್‌ಗೆ ಕುಸಿದಿತ್ತು. ಆದರೆ ಈಗ 1950 ಡಾಲರ್‌ಗಳ ಎತ್ತರಕ್ಕೆ ಜಿಗಿದಿದೆ. 2,000 ಡಾಲರ್‌ಗೆ ಏರಿದರೂ ಅಚ್ಚರಿ ಇಲ್ಲ ಎಂದು ವರದಿಯಾಗಿದೆ. ಕೆಲ ವರದಿಗಳ ಪ್ರಕಾರ 2,078 ಡಾಲರ್‌ಗಳ ದಾಖಲೆಯ ಎತ್ತರಕ್ಕೆ ಏರಲಿದೆ. ಹೀಗಾಗಿ ಈ ವರ್ಷ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರ 62,000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
2023ರ ಜನವರಿಯಲ್ಲಿ ಸೆಂಟ್ರಲ್ ಬ್ಯಾಂಕ್‌ಗಳು ಒಟ್ಟಾಗಿ 31 ಟನ್ ಬಂಗಾರವನ್ನು ಖರೀದಿಸಿವೆ. ಕಳೆದ 10 ತಿಂಗಳಿನಿಂದ ಸತತವಾಗಿ ಸರಾಸರಿ 20-60 ಟನ್ ಚಿನ್ನವನ್ನು ಖರೀದಿಸಿವೆ. ಟರ್ಕಿಯ ಸೆಂಟ್ರಲ್ ಬ್ಯಾಂಕ್ ಆಫ್ ಟರ್ಕಿ ಜನವರಿಯಲ್ಲಿ 23 ಟನ್ ಚಿನ್ನವನ್ನು ಖರೀದಿಸಿದ್ದು, ಇದರ ಒಟ್ಟು ಸಂಗ್ರಹ 565 ಟನ್‌ಗೆ ಏರಿಕೆಯಾಗಿದೆ. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಕೂಡ 15 ಟನ್ ಬಂಗಾರವನ್ನು ಕೊಂಡುಕೊಂಡಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಉಜ್ಬೆಕಿಸ್ತಾನವು 12 ಟನ್ ಚಿನ್ನವನ್ನು ಮಾರಿದೆ.