ನವ ದೆಹಲಿ: ಭಾರತವು ಕಚ್ಚಾ ತಾಳೆ ಎಣ್ಣೆ ಮತ್ತು ಚಿನ್ನ, ಬೆಳ್ಳಿ ಮತ್ತು ತಾಳೆ ಎಣ್ಣೆಯ ಆಮದು ಮೂಲ ದರದಲ್ಲಿ ಏರಿಕೆ ಮಾಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಹೆಚ್ಚಳವಾಗಿರುವುದು (Gold import price) ಇದಕ್ಕೆ ಕಾರಣ.
ಸರ್ಕಾರ ಖಾದ್ಯ ತೈಲ, ಚಿನ್ನ ಮತ್ತು ಬೆಳ್ಳಿಯ ಆಮದು ಮೂಲ ದರವನ್ನು ಪ್ರತಿ ಪಾಕ್ಷಿಕಕ್ಕೊಮ್ಮೆ ಪರಿಷ್ಕರಿಸುತ್ತದೆ. ಆಮದುದಾರರು ನೀಡಬೇಕಾದ ತೆರಿಗೆಯು ಇದರ ಆಧಾರದಲ್ಲಿ ನಿಗದಿಯಾಗುತ್ತದೆ.
ಖಾದ್ಯ ತೈಲ ಮತ್ತು ಬೆಳ್ಳಿಯನ್ನು ಅತಿ ಹೆಚ್ಚು ಆಮದು ಮಾಡುವ ದೇಶ ಭಾರತವಾಗಿದೆ. ಚಿನ್ನದ ಆಮದಿನಲ್ಲಿ ಎರಡನೇ ಸ್ಥಾನದಲ್ಲಿದೆ. ಕಚ್ಚಾ ತಾಳೆ ಎಣ್ಣೆಯ ಹಳೆ ಆಮದು ಮೂಲ ದರ ಪ್ರತಿ ಟನ್ನಿಗೆ 971 ಡಾಲರ್ ಆಗಿದ್ದರೆ, ಪರಿಷ್ಕೃತ ದರ 977 ಡಾಲರ್ ಆಗಿದೆ. ಚಿನ್ನದ ಆಮದು ಮೂಲ ದರ ಟನ್ನಿಗೆ 565 ಡಾಲರ್‌ನಿಂದ 582 ಡಾಲರ್‌ಗೆ ಏರಿಕೆಯಾಗಿದೆ.