Site icon Vistara News

Gold smuggling : ಬ್ಯಾಂಕಾಕ್‌, ದುಬೈನಿಂದ ಮುಂಬಯಿಗೆ ಗೋಲ್ಡ್‌ ಕ್ಯಾಪ್ಸೂಲ್‌ ಕಳ್ಳಸಾಗಣೆ, 11 ಅರೆಸ್ಟ್

gold bars

ಮುಂಬಯಿ: ಬ್ಯಾಂಕಾಕ್‌ ಮತ್ತು ದುಬೈನಿಂದ ಮುಂಬಯಿಗೆ ಚಿನ್ನದ ಕ್ಯಾಪ್ಸೂಲ್‌ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ 11 ಮಂದಿಯನ್ನು ಮುಂಬಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬಂಧಿಸಲಾಗಿದೆ. (Gold smuggling) ಬಂಧಿತರಲ್ಲಿ ಇಬ್ಬರು ಏರ್‌ಪೋರ್ಟ್‌ನ ವಾಣಿಜ್ಯ ಸಂಕೀರ್ಣಗಳಲ್ಲಿ ಕೆಲಸ ಮಾಡುತ್ತಿದ್ದರು. ಒಟ್ಟು 3.3 ಕೆ.ಜಿ ಬಂಗಾರವನ್ನು ಜಪ್ತಿ ಮಾಡಲಾಗಿದೆ.

ಕ್ಯಾಪ್ಸೂಲ್‌ಗಳಲ್ಲಿ (cylindrical capsules) ಚಿನ್ನವನ್ನು ಪೇಸ್ಟ್‌ನಂತೆ ತುಂಬಿಸಿ ದುಬೈ-ಬ್ಯಾಂಕಾಕ್‌ನಿಂದ ಮುಂಬಯಿಗೆ ಕಳ್ಳ ಸಾಗಣೆ ಮಾಡುತ್ತಿದ್ದರು. ಪ್ರತಿಯೊಂದು ಕ್ಯಾಪ್ಸೂಲ್‌ನಲ್ಲೂ ಅರ್ಧ ಕೆ.ಜಿ ಚಿನ್ನ ಇರುತ್ತಿತ್ತು. ಮುಂಬಯಿ ಏರ್‌ ಪೋರ್ಟ್‌ಗೆ ಬಂದ ಬಳಿಕ ಏರ್‌ಪೋರ್ಟ್‌ನ ಸಿಬ್ಬಂದಿಯೇ ಸಹಕರಿಸುತ್ತಿದ್ದರು. ಏರ್‌ಪೋರ್ಟ್‌ನ ಡ್ಯೂಟಿ-ಫ್ರೀ ಶಾಪ್‌ನಲ್ಲಿ (duty-free shop) ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನೂ ಬಂಧಿಸಲಾಗಿದೆ.

ರಮೇಶ್‌ ಸುನ್ಕೆ (60), ಸಚಿನ್‌ ಜುಲುಮ್‌ (38), ನವೀನ್‌ ಅಚಂಟಾನಿ (31), ಶುಭಮ್‌ ಕದಮ್‌ (24), ರಾಹುಲ್‌ ಭಟಿಜಾ (30), ವಿಕ್ರಮ್‌ ಖತ್ರಿ (43), ಜೀತು ಛಪ್ರು (37), ವಾಸುದೇವ್‌ ಪೆರ್ವಾನಿ (68), ಮುಕೇಶ್‌ ವಾಲ್ಮೀಕಿ (43), ಮಂಗೇಶ್‌ ಪಾಟೀಲ್‌ (54), ಕೃಷ್ಣ ಗೌಡ ( 45) ಇದ್ದಾರೆ.

ಇದನ್ನೂ ಓದಿ:Gold import : ಚಿನ್ನದ ದರ ಇಳಿಯಲಿದೆಯೇ? ರಿಯಾಯಿತಿ ಸುಂಕದಲ್ಲಿ 140 ಟನ್‌ ಬಂಗಾರ ಆಮದಿಗೆ ಚಿಂತನೆ

ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ಪ್ರಕಾರ ಕೋವಿಡ್‌ ಪೂರ್ವ ಮಟ್ಟಕ್ಕೆ ಹೋಲಿಸಿದರೆ ಚಿನ್ನದ ಕಳ್ಳ ಸಾಗಣೆಯಲ್ಲಿ 33% ಹೆಚ್ಚಳವಾಗಿದೆ. (world gold council) ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 4.24 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್‌ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದವರು ಭದ್ರತಾ ಪಡೆಯ ಕೈಗೆ ಸಿಕ್ಕಿ ಬಿದ್ದಿದ್ದರು. ಡಬ್ಲ್ಯುಜಿಸಿ ಪ್ರಕಾರ 2022ರಲ್ಲಿ 160 ಟನ್‌ ಬಂಗಾರ ಕಳ್ಳ ಸಾಗಣೆಯಾಗಿತ್ತು.

ಚಿನ್ನದ ಮೇಲಿನ ಆಮದು ಸುಂಕವನ್ನು ಏರಿಸಿದ ಬಳಿಕ ಕಳ್ಳ ಸಾಗಣೆ ಪ್ರಮಾಣವೂ ಏರಿಕೆಯಾಗಿದೆ ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ ವರದಿ ತಿಳಿಸಿದೆ. ಆಮದು ಸುಂಕ 12.5% ಜತೆಗೆ 3% ಹೆಚ್ಚುವರಿ ಜಿಎಸ್‌ಟಿ ಅನ್ವಯಿಸುತ್ತದೆ. ಜತೆಗೆ ಚಿನ್ನದ ದರ 10 ಗ್ರಾಮ್‌ಗೆ 60,000 ರೂ. ದಾಟಿದೆ. ಇವೆಲ್ಲದರ ಪರಿಣಾಮ ಚಿನ್ನದ ಕಳ್ಳ ಸಾಗಣೆ 15%ರಿಂದ 20%ಕ್ಕೆ ಏರಿಕೆಯಾಗಿದೆ.

ದುಬೈನಿಂದ ಭಾರತಕ್ಕೆ ಬರುವಾಗ ಎಷ್ಟು ಚಿನ್ನ ತರಬಹುದು?

ಸಿಬಿಐಸಿ ಪ್ರಕಾರ ಪ್ರಯಾಣಿಕರು ದುಬೈನಿಂದ ಭಾರತಕ್ಕೆ ಬರುವಾಗ 20 ಗ್ರಾಮ್‌ ಚಿನ್ನಾಭರಣವನ್ನು ಕಾನೂನುಬದ್ಧವಾಗಿಯೇ ತರಬಹುದು. ಅದರ ಮೌಲ್ಯ 50,000 ರೂ. ಮೀರುವಂತಿಲ್ಲ. ದುಬೈನಿಂದ ಮಹಿಳೆಯರು 40 ಗ್ರಾಮ್‌ ಬಂಗಾರವನ್ನು ತರಬಹುದು. ಆದರೆ ಇದರ ಮೌಲ್ಯ 1,00,000 ರೂ. ಮೀರುವಂತಿಲ್ಲ. ಈ ಮಿತಿಯನ್ನು ಮೀರಿ ಬಂಗಾರ ತರಬೇಕಿದ್ದರೆ ಕಸ್ಟಮ್ಸ್‌ ಸುಂಕ ನೀಡಬೇಕು.

Exit mobile version