ಬೆಂಗಳೂರು: ಚಿನ್ನದ ದರದಲ್ಲಿ ಗುರುವಾರ ೨೭೦ ರೂ. ಏರಿಕೆಯಾಗಿದ್ದು ಬೆಂಗಳೂರಿನಲ್ಲಿ (Gold price) ೨೪ ಕ್ಯಾರಟ್ನ ಪ್ರತಿ ೧೦ ಗ್ರಾಮ್ ಬಂಗಾರದ ದರ ೫೧,೩೩೦ ರೂ.ಗೆ ಏರಿಕೆಯಾಗಿದೆ.
ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೨೫೦ ರೂ. ಏರಿಕೆಯಾಗಿದ್ದು, ೪೭,೩೦೦ ರೂ.ಗೆ ವೃದ್ಧಿಸಿದೆ. ಬೆಳ್ಳಿಯ ದರದಲ್ಲಿ ಪ್ರತಿ ಕೆ.ಜಿಗೆ ೨೦೦ ರೂ. ಏರಿಕೆಯಾಗಿದ್ದು, ೬೦,೯೦೦ ರೂ.ಗೆ ಏರಿಕೆಯಾಗಿದೆ. ಪ್ಲಾಟಿನಮ್ ದರದಲ್ಲಿ ೪೦ ರೂ. ಹೆಚ್ಚಳವಾಗಿದ್ದು, ೧೦ ಗ್ರಾಮ್ ದರ ೨೨,೪೮೦ ರೂ.ಗೆ ಜಿಗಿದಿದೆ.
ಅಂತಾರಾಷ್ಟ್ರೀಯ ದರ ಮತ್ತು ಡಾಲರ್ ಎದುರು ರೂಪಾಯಿಯ ಮೌಲ್ಯವನ್ನು ಆಧರಿಸಿ ಬಂಗಾರದ ದರದಲ್ಲಿ ಏರಿಳಿತವಾಗುತ್ತದೆ.