Site icon Vistara News

Canara Bank : ಸಣ್ಣ ಉಳಿತಾಯಗಾರರಿಗೆ ಸಿಹಿ ಸುದ್ದಿ, ಕೆನರಾ ಬ್ಯಾಂಕ್‌ ಎಫ್‌ಡಿ ಬಡ್ಡಿ ದರ ಏರಿಕೆ

canara bank

canara bank

ನವ ದೆಹಲಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ (Canara Bank) 2 ಕೋಟಿ ರೂ.ಗಿಂತ ಕೆಳಗಿನ ನಿಶ್ಚಿತ ಠೇವಣಿಗಳಿಗೆ (fixed deposits) ಬಡ್ಡಿ ದರವನ್ನು ಏರಿಸಿದೆ. ಪರಿಷ್ಕೃತ ದರ 2023ರ ಮಾರ್ಚ್‌ 5ರಿಂದ ಜಾರಿಯಾಗಲಿದೆ ಎಂದು ಬ್ಯಾಂಕಿನ ವೆಬ್‌ಸೈಟ್‌ ತಿಳಿಸಿದೆ. ರಿಸರ್ವ್‌ ಬ್ಯಾಂಕಿನ ಹಣಕಾಸು ನೀತಿ ಸಭೆ ಏ.5-6ರಂದು ನಡೆಯುತ್ತಿದ್ದು, ಇದಕ್ಕೂ ಮುನ್ನ ಕೆನರಾ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ. 2023ರ ಏಪ್ರಿಲ್‌ 6ರಂದು ರೆಪೊ ದರ ಘೋಷಣೆಯಾಗಲಿದೆ.

ಪರಿಷ್ಕೃತ ಬಡ್ಡಿ ದರ ಎಷ್ಟು?

ಕೆನರಾ ಬ್ಯಾಂಕ್‌ನ ಪರಿಷ್ಕೃತ ಬಡ್ಡಿ ದರ ಇಂತಿದೆ. ಬ್ಯಾಂಕ್‌ 7 ದಿನಗಳಿಂದ 10 ವರ್ಷದ ತನಕದ ಅವಧಿಯ ಠೇವಣಿಗಳಿಗೆ 4%ರಿಂದ 7.25% ತನಕ ಬಡ್ಡಿ ನೀಡಲಿದೆ. ಹಿರಿಯ ನಾಗರಿಕರಿಗೆ 4%ರಿಂದ 7.75% ತನಕ ಬಡ್ಡಿ ದರ ಪರಿಷ್ಕರಣೆಯಾಗಿದೆ.

ಟರ್ಮ್‌ ಡೆಪಾಸಿಟ್ಸಾಮಾನ್ಯ ನಾಗರಿಕರುಹಿರಿಯ ನಾಗರಿಕರು
ಶೇಕಡಾವಾರು ಬಡ್ಡಿ ದರಶೇಕಡಾವಾರು ಬಡ್ಡಿ ದರ
7-45 ದಿನಗಳು44
46ರಿಂದ 90 ದಿನಗಳು5.255.25
91ರಿಂದ 179 ದಿನಗಳು5.55.5
180 ದಿನಗಳಿಂದ 269 ದಿನಗಳು6.256.75
270ರಿಂದ 1 ವರ್ಷದೊಳಗೆ6.57
1 ವರ್ಷ ಮಾತ್ರ77.5
444 ದಿನಗಳು7.257.75
1ವರ್ಷ ಮೇಲ್ಪಟ್ಟು, 2 ವರ್ಷದೊಳಗೆ6.97.4
2 ವರ್ಷಮತ್ತು 3 ವರ್ಷಕ್ಕಿಂತ ಕೆಳಗೆ6.857.35
3 ವರ್ಷಮೇಲ್ಪಟ್ಟು ಮತ್ತು 5 ವರ್ಷಕ್ಕಿಂತ ಕೆಳಗೆ6.87.3
5 ವರ್ಷ ಮೇಲ್ಪಟ್ಟು ಮತ್ತು 10 ವರ್ಷದೊಳಗೆ6.77.2

ಅವಧಿಗೆ ಮುನ್ನ ಠೇವಣಿಯನ್ನು ಹಿಂತೆಗೆದುಕೊಂಡರೆ 1.00%ರಷ್ಟು ದಂಡ ಅನ್ವಯವಾಗಲಿದೆ. ಅವಧಿ ಮುಗಿದರೂ ಹಿಂತೆಗೆದುಕೊಳ್ಳದಿದ್ದರೆ ಅನ್‌ ಕ್ಲೇಮ್ಡ್‌ ಮೊತ್ತವಾಗಲಿದೆ. ಉಳಿತಾಯ ಖಾತೆಗೆ ಸಿಗುವ ಬಡ್ಡಿ ಸಿಗಲಿದೆ.

Exit mobile version