Site icon Vistara News

ಸಂಭವನೀಯ ಸೈಬರ್‌ ದಾಳಿ ಬಗ್ಗೆ ಗೂಗಲ್‌ ಕ್ರೋಮ್‌ ಬಳಕೆದಾರರಿಗೆ ಸರ್ಕಾರ ಎಚ್ಚರಿಕೆ

google

ನವದೆಹಲಿ: ಗೂಗಲ್‌ ಕ್ರೋಮ್‌ ವೆಬ್‌ ಬ್ರೌಸರ್‌ ಬಳಕೆದಾರರಿಗೆ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ (CERT-in) ಉನ್ನತ ಮಟ್ಟದ ಎಚ್ಚರಿಕೆಯನ್ನು ನೀಡಿದೆ.

ಗೂಗಲ್‌ ಕ್ರೋಮ್‌ನ 97.0.4692.71. ಆವೃತ್ತಿಯನ್ನು ಬಳಸುವ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದರಲ್ಲಿ ಹಲವು ಬಾರಿ ಸೈಬರ್ ಭದ್ರತೆ ಕುರಿತ ನಿಯಮಗಳು ಉಲ್ಲಂಘನೆಯಾಗಿದೆ.‌

ಇತ್ತೀಚೆಗೆ ಮೈಕ್ರೊಸಾಫ್ಟ್‌ ವಿಂಡೋಸ್‌ನಲ್ಲಿ ಕೂಡ ಸೈಬರ್‌ ದಾಳಿ ನಡೆದಿರುವ ಬಗ್ಗೆ ವರದಿಯಾಗಿತ್ತು. ಸೈಬರ್‌ ದಾಳಿಕೋರರು ಬಳಕೆದಾರರ ಅನುಮತಿ ಇಲ್ಲದೆ ನಿರ್ದಿಷ್ಟ ಕಂಪ್ಯೂಟರ್‌ ಸಿಸ್ಟಮ್‌ ಮೇಲೆ ದಾಳಿ ನಡೆಸಬಹುದು. ಅಂದರೆ ಬಳಕೆದಾರರ ಅನುಮತಿ ಇಲ್ಲದೆ ಗೂಗಲ್‌ ಕ್ರೋಮ್‌ ಒಎಸ್‌ ನಲ್ಲಿ ಕೋಡ್‌ ಅಥವಾ ಕಮಾಂಡ್‌ ನೀಡಬಹುದು.

Exit mobile version