Site icon Vistara News

ಅಡುಗೆ ಎಣ್ಣೆ ದರದಲ್ಲಿ ವಾರದೊಳಗೆ 10 ರೂ. ಕಡಿತಕ್ಕೆ ಕಂಪನಿಗಳಿಗೆ ಸರ್ಕಾರ ಮನವಿ

eadible oil

ನವ ದೆಹಲಿ: ಜಾಗತಿಕ ಮಟ್ಟದಲ್ಲಿ ದರಗಳು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಖಾದ್ಯ ತೈಲ ಉತ್ಪಾದಕರಿಗೆ ರಿಟೇಲ್‌ ದರದಲ್ಲಿ ೧೦ ರೂ. ತನಕ ಕಡಿತಗೊಳಿಸಲು ಮನವಿ ಮಾಡಿದೆ.

ಇನ್ನೊಂದು ವಾರದೊಳಗೆ ಎಂಆರ್‌ಪಿ ದರ ಕಡಿತಗೊಳಿಸಲು ಹಾಗೂ ಏಕರೂಪಗೊಳಿಸಲು ಕಂಪನಿಗಳಿಗೆ ಸೂಚಿಸಲಾಗಿದೆ.

ಭಾರತ ತನ್ನ ಅಗತ್ಯದ ೬೦%ಕ್ಕೂ ಹೆಚ್ಚು ಪಾಲನ್ನು ಆಮದು ಮೂಲಕ ಭರಿಸುತ್ತಿದೆ. ಖಾದ್ಯ ತೈಲ ಉತ್ಪಾದಕರು ಕಳೆದ ತಿಂಗಳು ಲೀಟರ್‌ಗೆ ೧೦-೧೫ ರೂ. ತನಕ ದರವನ್ನು ಕಡಿತಗೊಳಿಸಿದ್ದರು. ಆದರೆ ಜಾಗತಿಕ ಮಟ್ಟದಲ್ಲಿ ಮತ್ತಷ್ಟು ದರ ಇಳಿದಿರುವ ಹಿನ್ನೆಲೆಯಲ್ಲಿ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು, ಎಲ್ಲ ಖಾದ್ಯ ತೈಲ ಸಂಘಟನೆಗಳು ಮತ್ತು ಪ್ರಮುಖ ಉತ್ಪಾದಕರ ಸಭೆ ಕರೆದು ಮತ್ತಷ್ಟು ದರ ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ.

ಕಳೆದ ಒಂದು ವಾರದಲ್ಲಿಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರ ೧೦% ಇಳಿಕೆಯಾಗಿದೆ. ಹೀಗಾಗಿ ಗ್ರಾಹಕರಿಗೂ ಇದನ್ನು ವರ್ಗಾಯಿಸಬೇಕು ಎಂದು ಪಾಂಡೆ ತಿಳಿಸಿದ್ದಾರೆ.

ಪ್ರಮುಖ ಖಾದ್ಯ ತೈಲ ಕಂಪನಿಗಳು ಮುಂದಿನ ವಾರದಿಂದ ಎಂಆರ್‌ಪಿ ದರದಲ್ಲಿ ೧೦ ರೂ. ತನಕ ಕಡಿತಗೊಳಿಸುವ ಭರವಸೆ ನೀಡಿವೆ. ತಾಳೆ ಎಣ್ಣೆ, ಸೋಯಾಬೀನ್‌, ಸೂರ್ಯಕಾಂತಿ ಎಣ್ಣೆ ದರದಲ್ಲಿ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಇತರ ಅಡುಗೆ ಅನಿಲಗಳ ದರ ಕೂಡ ತಗ್ಗುವ ಸಾಧ್ಯತೆ ಇದೆ.

ಪ್ರಸ್ತುತ ದೇಶಾದ್ಯಂತ ಒಂದೇ ಬ್ರ್ಯಾಂಡ್‌ನ ಅಡುಗೆ ಎಣ್ಣೆ ದರ ನಾನಾ ವಲಯಗಳಲ್ಲಿ ಭಿನ್ನವಾಗಿವೆ. ೩-೪ ರೂ. ವ್ಯತ್ಯಾಸ ಕಂಡು ಬರುತ್ತಿದೆ. ಇದನ್ನು ಏಕರೂಪಗೊಳಿಸುವಂತೆ ಮನವಿ ಮಾಡಲಾಗಿದೆ.

೨೦೨೨ ಜುಲೈ ೬ಕ್ಕೆ ಖಾದ್ಯ ತೈಲಗಳ ಸರಾಸರಿ ರಿಟೇಲ್‌ ದರ

Exit mobile version