Site icon Vistara News

GST | ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಎರಡನೇ ಗರಿಷ್ಠ ಮೊತ್ತದ ದಾಖಲೆ

gst

gst

ನವ ದೆಹಲಿ: ಕಳೆದ ಅಕ್ಟೋಬರ್‌ನಲ್ಲಿ ಜಿಎಸ್‌ಟಿ (GST) ಸಂಗ್ರಹವು 1.52 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ಮಂಗಳವಾರ ತಿಳಿಸಿದೆ.

ಜಿಎಸ್‌ಟಿ ಜಾರಿಯಾದಂದಿನಿಂದ ಇದು ಎರಡನೇ ಗರಿಷ್ಠ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರೂ.ಗೆ ವೃದ್ಧಿಸಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ 1.30 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.

2022ರ ಅಕ್ಟೋಬರ್‌ನಲ್ಲಿ 1,51,718 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದರಲ್ಲಿ ಕೇಂದ್ರೀಯ ಜಿಎಸ್‌ಟಿ 26,039 ಕೋಟಿ ರೂ, ರಾಜ್ಯ ಜಿಎಸ್‌ಟಿ 33,396 ಕೋಟಿ ರೂ, ಸಂಯೋಜಿತ ಜಿಎಸ್‌ಟಿ 81,778 ಕೋಟಿ ರೂ. ಇದೆ. ಸೆಸ್‌ ಆಗಿ 10,505 ಕೋಟಿ ರೂ. ಸಂಗ್ರಹವಾಗಿದೆ.

Exit mobile version