Site icon Vistara News

GST Collection : ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ, ಗ್ರೇಟ್‌ ನ್ಯೂಸ್‌ ಎಂದ ಪ್ರಧಾನಿ ಮೋದಿ

GST Collection

#image_title

ನವ ದೆಹಲಿ: ಕಳೆದ ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST) ಆಗಿದೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ( GST Collection) ತಿಳಿಸಿವೆ. 2023ರ ಏಪ್ರಿಲ್‌ನಲ್ಲಿ 1,87,035 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. 38,440 ಕೋಟಿ ರೂ. ಸಿಜಿಎಸ್‌ಟಿ, 47,412 ಕೋಟಿ ರೂ. ಎಸ್‌ಜಿಎಸ್‌ಟಿ, 89,158 ಕೋಟಿ ರೂ. ಐಜಿಎಸ್‌ಟಿ ಸಂಗ್ರಹವಾಗಿತ್ತು. ಸರಕುಗಳ ಆಮದು ಮೇಲೆ 34,972 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದು ಇದುವರೆಗಿನ ಗರಿಷ್ಠ ಮಾಸಿಕ ಜಿಎಸ್‌ಟಿ ಸಂಗ್ರಹವಾಗಿದೆ.

ಜಿಎಸ್‌ಟಿ ದಾಖಲೆಯ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆರಿಗೆ ದರ ಇಳಿಕೆಯ ಹೊರತಾಗಿಯೂ ತೆರಿಗೆ ಸಂಗ್ರಹ ಹೆಚ್ಚುತ್ತಿರುವುದು, ಜಿಎಸ್‌ಟಿ ಪದ್ಧತಿಯ ಯಶಸ್ಸನ್ನು ಬಿಂಬಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆ 2022ರ ಏಪ್ರಿಲ್‌ನಲ್ಲಿ ಮಾಸಿಕ 1,67,540 ಕೋಟಿ ರೂ. ಗರಿಷ್ಠ ಜಿಎಸ್‌ಟಿ ಸಂಗ್ರಹವಾಗಿತ್ತು.

ಕರ್ನಾಟಕದದಲ್ಲಿ 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹ:

ಕರ್ನಾಟಕದಲ್ಲಿ ಕಳೆದ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, 23% ಹೆಚ್ಚಳವಾಗಿದೆ. 2022ರ ಏಪ್ರಿಲ್‌ನಲ್ಲಿ 11,264 ಕೋಟಿ ರೂ. ಸಂಗ್ರಹವಾಗಿತ್ತು.

ಜಿಎಸ್‌ಟಿ ಸಂಗ್ರಹ ಹೆಚ್ಚಳಕ್ಕೆ ಕಾರಣವೇನು?

ಕೋವಿಡ್‌ ಬಿಕ್ಕಟ್ಟು ಉಪಶಮನವಾದ ಬಳಿಕ ಆರ್ಥಿಕ ಚಟುವಟಿಕೆಗಳು ಗಣನೀಯ ಚೇತರಿಸಿರುವುದು.

ಇ-ಇನ್‌ ವಾಯ್ಸಿಂಗ್‌, ಇ-ವೇ ಬಿಲ್‌, ಡೇಟಾ ಅನಾಲಿಟಿಕ್ಸ್‌, ಆಡಿಟ್‌ ಸೇರಿದಂತೆ ತೆರಿಗೆ ಸೋರಿಕೆ ತಡೆಗೆ ಕೈಗೊಂಡಿರುವ ಕ್ರಮಗಳು.

ಆಟೊಮೊಬೈಲ್‌, ಕನ್‌ಸ್ಯೂಮರ್‌ ಡ್ಯೂರೆಬಲ್ಸ್‌, ಎಫ್‌ಎಂಸಿಜಿ, ಐಟಿ, ಇ-ಕಾಮರ್ಸ್‌ ವಲಯದಲ್ಲಿ ಹೆಚ್ಚಿನ ಜಿಎಸ್‌ಟಿ ಸಂಗ್ರಹ

ಏಪ್ರಿಲ್‌ನಲ್ಲಿ ಭಾರತದ ಆರ್ಥಿಕತೆಗೆ ಗುಡ್‌ ನ್ಯೂಸ್:

2023ರ ಏಪ್ರಿಲ್‌ ನಲ್ಲಿ ಜಿಎಸ್‌ಟಿ ಸಂಗ್ರಹ ಮೊದಲ ಬಾರಿಗೆ ದಾಖಲೆಯ 1.87 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಏರ್‌ ಟ್ರಾಫಿಕ್‌ ಏಪ್ರಿಲ್‌ 30ರಂದು ಕೋವಿಡ್‌ ಪೂರ್ವ ಸರಾಸರಿಯ ಮಟ್ಟ ಮೀರಿದೆ. ಭಾನುವಾರ ಒಂದೇ ದಿನ 4.56 ಲಕ್ಷ ಜನ ವಿಮಾನ ಪ್ರಯಾಣ ನಡೆಸಿದ್ದಾರೆ.

ಎಸ್&ಪಿ ಗ್ಲೋಬಲ್‌ ಇಂಡಿಯಾ ಮಾನ್ಯುಫಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ ಪ್ರಕಾರ ಏಪ್ರಿಲ್‌ನಲ್ಲಿ ಉತ್ಪಾದನೆ ಚೇತರಿಸಿದೆ. ಸೂಚ್ಯಂಕವು 56.4ರಿಂದ 57.2ಕ್ಕೆ ಏರಿದೆ.

Exit mobile version