Site icon Vistara News

GST Collection | ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, 11% ಏರಿಕೆ

GST Fraud

ನವ ದೆಹಲಿ: ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ ಎಂದು ಹಣಕಾಸು ಇಲಾಖೆ ಗುರುವಾರ ತಿಳಿಸಿದೆ. ಅಕ್ಟೋಬರ್‌ನಲ್ಲಿ 1.52 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

2022ರ ನವೆಂಬರ್‌ನಲ್ಲಿ ಜಿಎಸ್‌ಟಿ ಸಂಗ್ರಹ 1,45,867 ಕೋಟಿ ರೂ.ಗಳಾಗಿತ್ತು. ಇದರಲ್ಲಿ ಸಿಜಿಎಸ್‌ಟಿ 25,681 ಕೋಟಿ ರೂ, ಎಸ್‌ಜಿಎಸ್‌ಟಿ 32,651 ಕೋಟಿ ರೂ, ಐಜಿಎಸ್‌ಟಿ 77,103 ಕೋಟಿ ರೂ.ನಷ್ಟಿತ್ತು.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಂಗ್ರಹದಲ್ಲಿ 11% ಹೆಚ್ಚಳವಾಗಿದೆ. (1,31,526 ಕೋಟಿ ರೂ.) ಸತತ 9 ತಿಂಗಳಿನಿಂದ ಜಿಎಸ್‌ಟಿ 1.40 ಲಕ್ಷ ಕೋಟಿ ರೂ.ಗಳ ಮಟ್ಟಕ್ಕಿಂತ ಮೇಲಿದೆ. ಜಿಎಸ್‌ಟಿ ಮಂಡಳಿಯ 48ನೇ ಸಭೆ ಡಿಸೆಂಬರ್‌ 17ಕ್ಕೆ ನಡೆಯಲಿದೆ.

Exit mobile version