Site icon Vistara News

GST Collection : ಮೇನಲ್ಲಿ 1.57 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ಕರ್ನಾಟಕದಲ್ಲಿ ಎಷ್ಟು?

GST Collection

#image_title

ನವ ದೆಹಲಿ: ಭಾರತದ ಜಿಎಸ್‌ಟಿ ಸಂಗ್ರಹ ಮೇನಲ್ಲಿ 1,57,090 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ 12% ಹೆಚ್ಚಳವಾಗಿದೆ ಎಂದು ಹಣಕಾಸು ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿದ ಅಂಕಿ ಅಂಶಗಳು ತಿಳಿಸಿದೆ. (GST) ಭಾರತ ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿತ್ತು. ಇದರೊಂದಿಗೆ ಸತತ 14 ತಿಂಗಳಿಗೆ ಸರಾಸರಿ 1.4 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾದಂತಾಗಿದೆ.

ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ 5ನೇ ಸಲ ಮಾಸಿಕ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹವಾಗಿದೆ. ಕಳೆದ ಮೇನಲ್ಲಿ ಸಂಗ್ರಹವಾಗಿರುವ ಜಿಎಸ್‌ಟಿಯಲ್ಲಿ ಸಿಜಿಎಸ್‌ಟಿ 28,411 ಕೋಟಿ ರೂ, ಎಸ್‌ಜಿಎಸ್‌ಟಿ 35,828 ಕೋಟಿ ರೂ, ಐಜಿಎಸ್‌ ಟಿ 81,368 ಕೋಟಿ ರೂ, ಸೆಸ್‌ 11,489 ಕೋಟಿ ರೂ. ಸಂಗ್ರಹವಾಗಿದೆ.

ಕರ್ನಾಟಕದಲ್ಲಿ 2023ರ ಮೇನಲ್ಲಿ 10,317 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಏಪ್ರಿಲ್‌ನಲ್ಲಿ 9,232 ಕೋಟಿ ರೂ. ಸಂಗ್ರಹವಾಗಿತ್ತು. ಆಮದು ಮಾಡುವ ಸರಕುಗಳಿಂದ ಜಿಎಸ್‌ಟಿ ಸಂಗ್ರಹದಲ್ಲಿ 12% ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಮೇನಲ್ಲಿ 23,536 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ತಮಿಳುನಾಡಿನಲ್ಲಿ 8953 ಕೋಟಿ ರೂ. ಸಂಗ್ರಹವಾಗಿತ್ತು. ಕೇರಳದಲ್ಲಿ 2297 ಕೋಟಿ ರೂ, ಪಶ್ಚಿಮ ಬಂಗಾಳದಲ್ಲಿ 5162 ಕೋಟಿ ರೂ, ಗುಜರಾತ್‌ನಲ್ಲಿ 9800 ಕೋಟಿ ರೂ, ಉತ್ತರಪ್ರದೇಶದಲ್ಲಿ 7468 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು.

ಕಳೆದ ಏಪ್ರಿಲ್‌ನಲ್ಲಿ ದಾಖಲೆಯ 1.87 ಲಕ್ಷ ಕೋಟಿ ರೂ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹ (GST) ಆಗಿದೆ ಎಂದು ಹಣಕಾಸು ಸಚಿವಾಲಯದ ಅಂಕಿ ಅಂಶಗಳು ( GST Collection) ತಿಳಿಸಿತ್ತು. 2023ರ ಏಪ್ರಿಲ್‌ನಲ್ಲಿ 1,87,035 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. 38,440 ಕೋಟಿ ರೂ. ಸಿಜಿಎಸ್‌ಟಿ, 47,412 ಕೋಟಿ ರೂ. ಎಸ್‌ಜಿಎಸ್‌ಟಿ, 89,158 ಕೋಟಿ ರೂ. ಐಜಿಎಸ್‌ಟಿ ಸಂಗ್ರಹವಾಗಿತ್ತು. ಸರಕುಗಳ ಆಮದು ಮೇಲೆ 34,972 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಇದು ಇದುವರೆಗಿನ ಗರಿಷ್ಠ ಮಾಸಿಕ ಜಿಎಸ್‌ಟಿ ಸಂಗ್ರಹವಾಗಿದೆ.

ಜಿಎಸ್‌ಟಿ ದಾಖಲೆಯ ಸಂಗ್ರಹಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರು. ತೆರಿಗೆ ದರ ಇಳಿಕೆಯ ಹೊರತಾಗಿಯೂ ತೆರಿಗೆ ಸಂಗ್ರಹ ಹೆಚ್ಚುತ್ತಿರುವುದು, ಜಿಎಸ್‌ಟಿ ಪದ್ಧತಿಯ ಯಶಸ್ಸನ್ನು ಬಿಂಬಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್‌ ಮಾಡಿದ್ದರು.

Exit mobile version