ನವದೆಹಲಿ: ಕಳೆದ ಮೇನಲ್ಲಿ ಜಿಎಸ್‌ಟಿ ಸಂಗ್ರಹ 1.4 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 97,821 ಕೋಟಿ ರೂ. ಸಂಗ್ರಹವಾಗಿದ್ದು ಈ ವರ್ಷ ಶೇ.44ರಷ್ಟು ಏರಿಕೆಯಾಗಿದೆ.
ಜಿಎಸ್‌ಟಿ ಆರಂಭವಾದ ಬಳಿಕ 4ನೇ ಬಾರಿಗೆ ಮಾಸಿಕ ಜಿಎಸ್‌ಟಿ ಸಂಗ್ರಹ 1.4 ಲಕ್ಷ ಕೋಟಿ ರೂ.ಗೆ ವೃದ್ಧಿಸಿದೆ. ಸತತ ಮೂರನೇ ತಿಂಗಳು ಈ ಮೈಲುಗಲ್ಲು ದಾಖಲಾಗಿದೆ. ಸರಕುಗಳ ಆಮದಿನಿಂದ ಬರುವ ಕಂದಾಯದಲ್ಲೂ ಮೇನಲ್ಲಿ ಹೆಚ್ಚಳವಾಗಿದೆ.
ಜಿಎಸ್‌ಟಿ ಸಂಗ್ರಹದಲ್ಲಿ ಹೆಚ್ಚಳವಾಗಿರುವುದರಿಂದ ಸರಕಾರಕ್ಕೆ ಇತ್ತೀಚಿನ ತೆರಿಗೆ ಕಡಿತದಿಂದ ಉಂಟಾಗುವ ಕೊರತೆಯನ್ನು ಪರಿಹರಿಸಲು ಅನುಕೂಲವಾಗಲಿದೆ.
ಮೇ ತಿಂಗಳಿನ ಜಿಎಸ್‌ಟಿ ಸಂಗ್ರಹದಲ್ಲಿ ಸಿಜಿಎಸ್‌ಟಿ ಪಾಲು 25,036 ಕೋಟಿ ರೂ, ಎಸ್‌ಜಿಎಸ್‌ಟಿ 32,001 ಕೋಟಿ ರೂ, ಮತ್ತು ಐಜಿಎಸ್‌ಟಿ 73,345 ಕೋಟಿ ರೂ.ಗಳಾಗಿದೆ. ಕೇಂದ್ರ ಮತ್ತು ರಾಜ್ಯಗಳ ಒಟ್ಟು ಆದಾಯ ಅನುಕ್ರಮವಾಗಿ 52,960 ಕೋಟಿ ರೂ. ಮತ್ತು 55,124 ಕೋಟಿ ರೂ.ಗಳಾಗಿದೆ.