Site icon Vistara News

GST collection : ಜುಲೈನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ, ದೇಶದಲ್ಲೇ ಕರ್ನಾಟಕ ನಂ.2

Vistara Editorial, Government should conduct exam without any lapse

ನವ ದೆಹಲಿ: ಕಳೆದ ಜುಲೈ ತಿಂಗಳಿನಲ್ಲಿ 1.6 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು, ಪದ್ಧತಿ ಜಾರಿಯಾದಂದಿನಿಂದ 5ನೇ ಬಾರಿಗೆ (GST collection July 2023) 1.6 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹ ಆದಂತಾಗಿದೆ. 2023ರ ಜುಲೈನಲ್ಲಿ 1,65,105 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

ಕರ್ನಾಟಕ 2023ರ ಜುಲೈನಲ್ಲಿ 11,505 ಕೋಟಿ ರೂ. ಜಿಎಸ್‌ಟಿ ಸಂಗ್ರಹಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ( 9795 ಕೋಟಿ ರೂ.) 17% ಏರಿಕೆ ದಾಖಲಿಸಿದೆ. ಮಹಾರಾಷ್ಟ್ರ ಬಿಟ್ಟರೆ ಅತಿ ಹೆಚ್ಚು ಜಿಎಸ್‌ಟಿ ಸಂಗ್ರಹಿಸಿದ ರಾಜ್ಯ ಕರ್ನಾಟಕ ಆಗಿದೆ.

ಇದರಲ್ಲಿ 29,773 ಕೋಟಿ ರೂ. ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ 37,623 ಕೋಟಿ ರೂ, ಐಜಿಎಸ್‌ಟಿ 85,930 ಕೋಟಿ ರೂ. ಮತ್ತು ಸೆಸ್‌ 11,779 ಕೋಟಿ ರೂ.ಗಳಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 11% ಏರಿಕೆಯಾಗಿದೆ. ಸರಕುಗಳ ಆಮದು ವಿಭಾಗದಿಂದ 840 ಕೋಟಿ ರೂ. ಸಂಗ್ರಹವಾಗಿದೆ. 11,779 ಕೋಟಿ ರೂ. ಸೆಸ್‌ ಸಂಗ್ರಹವಾಗಿದೆ.

ದೇಶೀಯ ವರ್ಗಾವಣೆಗಳ ಮೂಲಕ ಸಿಗುವ ಆದಾಯದಲ್ಲಿ 15% ಹೆಚ್ಚಳವಾಗಿದೆ. ಜೂನ್‌ ತಿಂಗಳಿನಲ್ಲಿ 1,61,487 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿತ್ತು. ಹೀಗಿದ್ದರೂ ಏಪ್ರಿಲ್‌ನಲ್ಲಿ ಸಂಗ್ರಹವಾಗಿದ್ದ ದಾಖಲೆಯ 1.87 ಲಕ್ಷ ಕೋಟಿ ರೂ.ಗಳ ದಾಖಲೆಯ ಮಟ್ಟಕ್ಕಿಂತ ಕೆಳಕ್ಕಿಳಿದಿದೆ. ಮೇನಲ್ಲಿ 1,57,090 ಕೋಟಿ ರೂ. ಸಂಗ್ರಹವಾಗಿತ್ತು.

ಇದನ್ನೂ ಓದಿ : GST Collection: ಜೂನ್‌ನಲ್ಲಿ 1.61 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹ; ಕರ್ನಾಟಕದ ಕೊಡುಗೆಯೂ ಏರಿಕೆ

ಆನ್‌ಲೈನ್‌ ಗೇಮಿಂಗ್‌ ಮೇಲೆ ಜಿಎಸ್‌ಟಿ ಹೇಗೆ ಅನ್ವಯಿಸಲಿದೆ ಎಂಬುದನ್ನು ಜಿಎಸ್‌ಟಿ ಮಂಡಳಿ ಸ್ಪಷ್ಟಪಡಿಸುವ ನಿರೀಕ್ಷೆ ಇದೆ. ಆಗಸ್ಟ್‌ 2ರಂದು ಜಿಎಸ್‌ಟಿ ಮಂಡಳಿಯ ಸಭೆ ನಡೆಯಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಕಳೆದ ಜುಲೈ 11ರಂದು ಆನ್‌ಲೈನ್‌ ಗೇಮಿಂಗ್‌, ರೇಸಿಂಗ್‌, ಕ್ಯಾಸಿನೊ ಮೇಲೆ 28% ಜಿಎಸ್‌ಟಿಯನ್ನು ವಿಧಿಸಲಾಗಿತ್ತು.

ರಾಜ್ಯ2023 ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ (ಕೋಟಿ ರೂ.ಗಳಲ್ಲಿ)
ಮಹಾರಾಷ್ಟ್ರ26,064 ಕೋಟಿ ರೂ.
ಕರ್ನಾಟಕ11,505 ಕೋಟಿ ರೂ.
ತಮಿಳುನಾಡು‌10,022 ಕೋಟಿ ರೂ.
ಗುಜರಾತ್‌9,787 ಕೋಟಿ ರೂ.
ಉತ್ತರಪ್ರದೇಶ8802 ಕೋಟಿ ರೂ.

Exit mobile version