Site icon Vistara News

GST | ಸೆಪ್ಟೆಂಬರ್ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆಗೆ ಗಡುವು ಮುಂದೂಡಿಕೆ

gst

gst

ನವ ದೆಹಲಿ: ಸರ್ಕಾರ ಸೆಪ್ಟೆಂಬರ್‌ ತಿಂಗಳಿನ ಜಿಎಸ್‌ಟಿ (GST) ರಿಟರ್ನ್‌ ಸಲ್ಲಿಕೆಗೆ ನಿಗದಿಪಡಿಸಿದ್ದ ಗಡುವನ್ನು ಅಕ್ಟೋಬರ್‌ 21ಕ್ಕೆ ಮುಂದೂಡಿದೆ.

ಈ ಹಿಂದಿನ ಸೂಚನೆಯ ಪ್ರಕಾರ ಅಕ್ಟೋಬರ್‌ 21 ಕೊನೆಯ ದಿನಾಂಕವಾಗಿತ್ತು. (ಗುರುವಾರ) ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಒಂದು ದಿನ ಮುಂದೂಡಲಾಯಿತು. ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಈ ಬಗ್ಗೆ ಟ್ವೀಟ್‌ ಮಾಡಿದೆ.

2022ರ ಸೆಪ್ಟೆಂಬರ್‌ ತಿಂಗಳಿನ ಜಿಎಸ್‌ಟಿಆರ್-‌3ಬಿ ರಿಟರ್ನ್‌ ಅನ್ನು ಸಲ್ಲಿಸಲು ನಿಗದಿತ ಗಡುವನ್ನು ಮುಂದೂಡಲು ಜಿಎಸ್‌ಟಿ ಸಮಿತಿ ಅನುಮೋದಿಸಿದೆ ಎಂದು ತಿಳಿಸಿದೆ.

Exit mobile version