Site icon Vistara News

GST Fraud | 15 ವಿಮೆ ಕಂಪನಿಗಳಿಂದ 824 ಕೋಟಿ ರೂ. ಜಿಎಸ್‌ಟಿ ವಂಚನೆ ಬಯಲು

gst

gst

ನವ ದೆಹಲಿ: ಐಸಿಐಸಿಐ ಪ್ರುಡೆನ್ಷಿಯಲ್‌ ಸೇರಿದಂತೆ 15 ವಿಮೆ ಸಂಸ್ಥೆಗಳು 824 ಕೋಟಿ ರೂ. ಜಿಎಸ್‌ಟಿ ( GST Fraud) ವಂಚನೆ ಮಾಡಿರುವುದು ಬಯಲಾಗಿದೆ.

ಹಲವಾರು ಇಂಟರ್‌ಮೀಡಿಯೇಟರಿ ಮಾರ್ಕೆಟಿಂಗ್‌ ಕಂಪನಿಗಳು, ಎನ್‌ಬಿಎಫ್‌ಸಿಗಳು ಮತ್ತು ಬ್ಯಾಂಕ್‌ಗಳು ಜಿಎಸ್‌ಟಿ ವಂಚಿಸಿರುವುದು ಬಯಲಾಗಿದೆ. ಈ ಕಂಪನಿಗಳು ಸರಕುಗಳು ಮತ್ತು ಸೇವೆಗಳ ಪೂರೈಕೆ ಮಾಡದಿದ್ದರೂ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಪಡೆದ ಆರೋಪ ಎದುರಿಸುತ್ತಿವೆ.

ಐಸಿಐಸಿಐ ಪ್ರುಡೆನ್ಷಿಯಲ್‌ ಕೂಡ ಸರಕು, ಸೇವೆಗಳನ್ನು ಒದಗಿಸದೆಯೆ, ಅಕ್ರಮವಾಗಿ ಟ್ಯಾಕ್ಸ್‌ ಕ್ರೆಡಿಟ್‌ ಪಡೆದಿರುವ ಬಗ್ಗೆ ತನಿಖೆ ಮುಂದುವರಿದಿದೆ.

Exit mobile version