Site icon Vistara News

GST Rate| ಐಸ್‌ಕ್ರೀಮ್‌ ಪಾರ್ಲರ್‌ಗೆ 18% ಜಿಎಸ್‌ಟಿ ಅನ್ವಯ: ಕೇಂದ್ರ ಸ್ಪಷ್ಟನೆ

icecream

ನವ ದೆಹಲಿ: ಐಸ್‌ಕ್ರೀಮ್‌ ಪಾರ್ಲರ್‌ನಲ್ಲಿ ಮಾರಾಟವಾಗುವ ಐಸ್‌ ಕ್ರೀಮ್‌ಗಳಿಗೆ ೧೮% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿ (ಸಿಬಿಐಸಿ) ಸ್ಪಷ್ಟಪಡಿಸಿದೆ.

ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಸೇರಿದಂತೆ ೧೮% ಜಿಎಸ್‌ಟಿ ಅನ್ವಯವಾಗುತ್ತದೆ ಎಂದು ಸಿಬಿಐಸಿ ತಿಳಿಸಿದೆ. ಈ ಹಿಂದೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಇಲ್ಲದೆಯೇ ೫% ಜಿಎಸ್‌ಟಿ ಅನ್ವಯವಾಗುತ್ತಿದ್ದ ಪಾರ್ಲರ್‌ಗಳು ಜಿಎಸ್‌ಟಿಯನ್ನು ಪೂರ್ಣವಾಗಿ ಪಾವತಿಸಿದೆ ಎಂದು ಪರಿಗಣಿಸಲಾಗುವುದು ಎಂದು ತಿಳಿಸಿದೆ. ೨೦೨೧ರ ಅಕ್ಟೋಬರ್‌ ೬ರಿಂದ ಅನ್ವಯವಾಗುವಂತೆ ಈ ಬದಲಾವಣೆ ಜಾರಿಯಾಗಿದೆ ಎಂದು ತಿಳಿಸಿದೆ.

ಐಸ್‌ಕ್ರೀಂ ಪಾರ್ಲರ್‌ಗಳು ರೆಸ್ಟೊರೆಂಟ್‌ ವರ್ಗಕ್ಕೆ ಬರುವುದಿಲ್ಲ. ಹೀಗಾಗಿ ಅಲ್ಲಿ ಮಾರಾಟವಾಗುವ ಐಸ್‌ಕ್ರೀಂ ಉತ್ಪನ್ನಗಳಿಗೆ ೧೮% ಜಿಎಸ್‌ಟಿ ದರ ಅನ್ವಯವಾಗುತ್ತದೆ ಎಂದು ಸಿಬಿಐಸಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ರೆಸ್ಟೊರೆಂಟ್‌ನಲ್ಲಿ ಸೇವೆಗೆ ೫% ಜಿಎಸ್‌ಟಿ ಇರುತ್ತದೆ. ಆದರೆ ಅದಕ್ಕೆ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಇರುವುದಿಲ್ಲ. ಇದರೊಂದಿಗೆ ಆಹಾರ ಮತ್ತು ಪಾನೀಯಗಳ ಮೇಲಿನ ಜಿಎಸ್‌ಟಿ ಗೊಂದಲವನ್ನು ಬಗೆಹರಿಸಿದಂತಾಗಿದೆ ಎನ್ನುತ್ತಾರೆ ತಜ್ಞರು.

Exit mobile version