Site icon Vistara News

GST rate hike| ಜುಲೈ 18ರಿಂದ ಎಲ್ಲ ಹೋಟೆಲ್‌ ರೂಮ್‌ ಬಾಡಿಗೆ ದುಬಾರಿ

hotel service

ನವ ದೆಹಲಿ: ಮುಂದಿನ ವಾರದಿಂದಲೇ ರಜಾ ದಿನಗಳನ್ನು ಯಾವುದಾದರೂ ಹೋಟೆಲ್‌ನಲ್ಲು ಕಳೆಯಲು ಹೋಗುವುದಿದ್ದರೆ ನೀವು ಗಮನಿಸಲೇಬೇಕಾದ ಸುದ್ದಿಯಿದು. ಜುಲೈ ೧೮ರಿಂದ ದಿನಕ್ಕೆ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ಹೋಟೆಲ್‌ ರೂಮ್‌ ಬಾಡಿಗೆಯ ಮೇಲೆ ಜಿಎಸ್‌ಟಿ ಅನ್ವಯವಾಗಲಿದೆ.

ಜಿಎಸ್‌ಟಿ ಮಂಡಳಿ ಚಂಡೀಗಢದಲ್ಲಿ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದೆ. ಈ ಹಿಂದೆ ೧೦೦೦ ರೂ.ಗಿಂತ ಕಡಿಮೆ ಬಾಡಿಗೆಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿತ್ತು. ಹೀಗಾಗಿ ಯಾವುದೇ ಹೋಟೆಲ್‌ನಲ್ಲಿ ತಂಗಿದರೂ, ಜಿಎಸ್‌ಟಿ ಅನ್ವಯವಾಗಲಿದೆ. ಅದರ ಪ್ರಕಾರ ೧,೦೦೦ ರೂ.ಗಿಂತ ಕಡಿಮೆ ಬಾಡಿಗೆಯ ಹೋಟೆಲ್‌ ರೂಮ್‌ ವೆಚ್ಚಕ್ಕೆ ೧೨% ಜಿಎಸ್‌ಟಿ ಕೊಡಬೇಕಾಗುತ್ತದೆ. ಈ ಬಗ್ಗೆ ಸರ್ಕಾರ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ. ಅಂದರೆ ೧೦೦೦ ರೂ. ಕೊಡುತ್ತಿದ್ದಲ್ಲಿ, ಸೋಮವಾರದಿಂದ ೧,೨೦೦ ರೂ. ಕೊಡಬೇಕಾಗುತ್ತದೆ.

ಹೋಟೆಲ್‌, ಗೆಸ್ಟ್‌ ಹೌಸ್‌, ಕ್ಲಬ್‌, ಲಾಡ್ಜಿಂಗ್‌ ಸಂಕೀರ್ಣಗಳಲ್ಲಿ ೭,೫೦೦ ರೂ.ಗಿಂತ ಕಡಿಮೆ ಬಾಡಿಗೆಗೆ ೧೨% ಜಿಎಸ್‌ಟಿ ಇರುತ್ತದೆ. ೧,೦೦೦ ರೂ. ಒಳಗಿನ ಬಾಡಿಗೆಗೆ ವಿನಾಯಿತಿ ಜುಲೂ ೧೮ರಿಂದ ರದ್ದಾಗಲಿದೆ. ದಿನಕ್ಕೆ ೭,೫೦೧ ರೂ. ಮತ್ತು ಹೆಚ್ಚಿನ ಬಾಡಿಗೆಗೆ ೧೮% ಜಿಎಸ್‌ಟಿ ಇರುತ್ತದೆ.

ಯಾರಿಗೆ ವಿನಾಯಿತಿ?

ಹೀಗಿದ್ದರೂ, ವಾರ್ಷಿಕ ೨೦ ಲಕ್ಷ ರೂ.ಗಿಂತ ಕಡಿಮೆ ಆದಾಯವಿರುವ ‌ಸಣ್ಣ ಹೋಟೆಲ್ ಗಳಿಗೆ ಈ ಜಿಎಸ್‌ಟಿ ಅನ್ವಯವಾಗುವುದಿಲ್ಲ. ಏಕೆಂದರೆ ಅವುಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ.

Exit mobile version