ನವ ದೆಹಲಿ: ಜಿಎಸ್‌ಟಿ ತೆರಿಗೆದಾರರು ತಮ್ಮ ಪೂರೈಕೆದಾರರು ಕಳೆದ ಸಾಲಿನ ತೆರಿಗೆ ಬಾಕಿಯನ್ನು ಸೆಪ್ಟೆಂಬರ್ 30ರೊಳಗೆ ಪಾವತಿಸದಿದ್ದರೆ, ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್ ಅನ್ನು ರಿವರ್ಸ್ ಮಾಡಲು ಅವಕಾಶ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ (GST Rules) ತಿಳಿಸಿದೆ.
ಪೂರೈಕೆದಾರರು ತೆರಿಗೆಯನ್ನು ಪಾವತಿಸಿದ ಬಳಿಕ ಜಿಎಸ್‌ಟಿ ತೆರಿಗೆದಾರರು ತಮ್ಮ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ರಿಕ್ಲೇಮ್ ಮಾಡಿಕೊಳ್ಳಬಹುದು ಎಂದು ಹಣಕಾಸು ಸಚಿವಾಲಯದ ಹೊಸ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಹಣಕಾಸು ಸಚಿವಾಲಯವು ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ನಿಯಮಾವಳಿಗೆ 37ಎ ಎಂಬ ಹೊಸ ನಿಯಮವನ್ನು ಸೇರಿಸಿದ್ದು, ಜಾರಿಗೆ ಬಂದಿದೆ. ಕಂಪನಿಗಳು ಈ ಬದಲಾವಣೆಯನ್ನು ಗಮನಿಸಿಕೊಂಡು ಬಿಸಿನೆಸ್ ಪದ್ಧತಿಯನ್ನು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.