Site icon Vistara News

ಸ್ಟಾರ್ಟಪ್‌ ಉದ್ದಿಮೆ ಅಭಿವೃದ್ಧಿ: ಗುಜರಾತ್‌ ನಂ.1, ಕರ್ನಾಟಕ ನಂ.2

start up

ನವ ದೆಹಲಿ: ಸ್ಟಾರ್ಟಪ್‌ಗಳಿಗೆ ಅಗತ್ಯವಾಗುವ ಮೂಲಸೌಕರ್ಯ ಮತ್ತು ವಾತಾವರಣವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಗುಜರಾತ್‌, ಕರ್ನಾಟಕ ಮತ್ತು ಮೇಘಾಲಯ ಮುಂಚೂಣಿಯಲ್ಲಿವೆ ಎಂದು ಕೈಗಾರಿಕೆ ಮತ್ತು ವ್ಯಾಪಾರ ಅಭಿವೃದ್ಧಿ ಇಲಾಖೆ (DPIIT) ತಿಳಿಸಿದೆ.

ಡಿಪಿಐಐಟಿ ರಾಜ್ಯಗಳ ಸ್ಟಾರ್ಟಪ್‌ ranking ಅನ್ನು ಪ್ರಕಟಿಸಿದ್ದು, ಗುಜರಾತ್‌ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಸತತ ಮೂರು ವರ್ಷಗಳಿಂದ ಗುಜರಾತ್‌ ಅಗ್ರ ಸ್ಥಾನದಲ್ಲಿದೆ.

ಕೇರಳ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಕೂಡ ಸ್ಟಾರ್ಟಪ್‌ಗಳ ಅಭಿವೃದ್ಧಿಯನ್ನು ಉತ್ತಮ ಪ್ರಗತಿಯನ್ನು ಸಾಧಿಸಿವೆ.

” ಕಳೆದ ೬ ವರ್ಷಗಳಲ್ಲಿ ಭಾರತ ಜಗತ್ತಿನಲ್ಲಿಯೇ ಮೂರನೇ ಅತಿ ದೊಡ್ಡ ಸ್ಟಾರ್ಟಪ್‌ ತಾಣ ಎನಿಸಿದೆ. ಆದರೆ ಭಾರತ ಮೊದಲ ಸ್ಥಾನ ಗಳಿಸುವ ಎಲ್ಲ ಅರ್ಹತೆ ಹೊಂದಿದೆʼʼ ಎಂದು ವಾಣಿಜ್ಯ ಸಚಿವ ಪಿಯೂಷ್‌ ಗೋಯೆಲ್‌ ತಿಳಿಸಿದ್ದಾರೆ.

ಭಾರತದಲ್ಲಿ ೭೦,೮೦೯ ಸ್ಟಾರ್ಟಪ್‌

ಭಾರತದಲ್ಲಿ ಒಟ್ಟು ೭೦,೮೦೯ ಸ್ಟಾರ್ಟಪ್‌ಗಳು ಇವೆ. ಇದರಲ್ಲಿ ೧೨,೦೦೦ಕ್ಕೂ ಹೆಚ್ಚು ಸ್ಟಾರ್ಟಪ್‌ಗಳು ಸರ್ಕಾರದ ಇ-ಮಾರ್ಕೆಟ್‌ ವ್ಯವಸ್ಥೆಯಲ್ಲಿ ನೋಂದಣಿಯಾಗಿವೆ. ಹುರಾನ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಪ್ರಕಾರ ಭಾರತದಲ್ಲಿ ಮುಂದಿನ ೨-೪ ವರ್ಷಗಳಲ್ಲಿ ೧೨೨ ಹೊಸ ಯುನಿಕಾರ್ನ್‌ಗಳು ಅಭಿವೃದ್ಧಿಯಾಗಲಿವೆ. ಯುನಿಕಾರ್ನ್‌ ಎಂದರೆ ೧೦೦ ಕೋಟಿ ಡಾಲರ್‌ ಮೌಲ್ಯದ (ಅಂದಾಜು ೭,೮೦೦ ಕೋಟಿ ರೂ.) ಸ್ಟಾರ್ಟಪ್.‌ ಭಾರತದಲ್ಲಿ ಈಗ ೧೦೩ ಯುನಿಕಾರ್ನ್‌ಗಳಿವೆ.

Exit mobile version