Site icon Vistara News

HAL in Malaysia| ಮಲೇಷ್ಯಾದಲ್ಲಿ ಎಚ್‌ಎಎಲ್‌ ಕಚೇರಿ ತೆರೆಯಲು ಒಪ್ಪಂದ

HAL

ಬೆಂಗಳೂರು: ಸಾರ್ವಜನಿಕ ವಲಯದ ಎಚ್‌ಎಎಲ್‌, ಮಲೇಷ್ಯಾದಲ್ಲಿ (ಕೌಲಾಲಂಪುರ) ತನ್ನ ಕಚೇರಿಯನ್ನು ತೆರೆಯಲು ಎಂಒಯುಗೆ ಸಹಿ ಹಾಕಿದೆ. (HAL in Malaysia) ರಕ್ಷಣಾ ಇಲಾಖೆ ಕಾರ್ಯದರ್ಶಿ ಡಾ. ಅಜಯ್‌ ಕುಮಾರ್‌ ಸಮ್ಮುಖದಲ್ಲಿ ಎಚ್‌ಎಎಲ್‌ ಮತ್ತು ಮಲೇಷ್ಯಾದ ಸರ್ಕಾರಿ ಅಧಿಕಾರಿಗಳು ಎಂಒಯುಗೆ ಸಹಿ ಹಾಕಿದರು.

ಮಲೇಷ್ಯಾದಲ್ಲಿ ಕಚೇರಿ ತೆರೆಯುವುದರಿಂದ ಎಚ್‌ಎಎಲ್‌ಗೆ ತನ್ನ ವಹಿವಾಟು ವಿಸ್ತರಣೆಗೆ ಅನುಕೂಲವಾಗಲಿದೆ. ಫೈಟರ್‌ ಲೀಡ್ಿನ್‌ ಟ್ರೈನರ್‌ (FLIT) ಸೇರಿದಂತೆ ರಾಯಲ್‌ ಮಲೇಷಿಯನ್‌ ಏರ್‌ಫೋರ್ಸ್‌ಗೆ ಅವಶ್ಯವಿರುವ ಸಾಧನಗಳನ್ನು ಮಾರಾಟ ಮಾಡಲು ಹೆಚ್ಚಿನ ಅವಕಾಶಗಳು ದೊರೆಯಲಿವೆ. ಎಚ್‌ಎಎಲ್‌ ಬೆಂಗಳೂರಿನಲ್ಲಿ ಪ್ರಧಾಕ ಕಚೇರಿಯನ್ನು ಹೊಂದಿದೆ. Su-30 MKM ಇತ್ಯಾದಿಗಳನ್ನು ಮಲೇಷ್ಯಾ ವಾಯುಪಡೆಗೆ ಮಾರಾಟ ಮಾಡಲು ಹಾದಿ ಸುಗಮವಾಗಲಿದೆ.

ರಷ್ಯಾ ಮೂಲದ Su-30 ಏರ್‌ ಕ್ರಾಫ್ಟ್‌ನ ಉತ್ಪಾದನೆಯಲ್ಲಿ ಎಚ್‌ಎಎಲ್‌ ಮುಂಚೂಣಿಯಲ್ಲಿದೆ. ಇತರ ಯುದ್ಧ ವಿಮಾನಗಳನ್ನು ಮೇಲ್ದರ್ಜೆಗೇರಿಸಲೂ ಎಚ್‌ಎಎಲ್‌ ಸಹಕರಿಸಲಿದೆ. ಅದಕ್ಕೆ ಅಗತ್ಯವಿರುವ ತಂತ್ರಜ್ಞಾನವನ್ನು ಒದಗಿಸಲಿದೆ. ಮಲೇಷ್ಯಾದಲ್ಲಿ ಭಾರತೀಯ ಹೈಕಮೀಶನರ್‌ ಆಗಿರುವ ಬಿ.ಎನ್‌ ರೆಡ್ಡಿ, ಹೆಚ್ಚುವರಿ ಕಾರ್ಯದಶಿ (ರಕ್ಷಣಾ ಉತ್ಪಾದನೆ) ಸಂಜಯ್‌ ಜಾಜು ಉಪಸ್ಥಿತರಿದ್ದರು.

Exit mobile version