ಸಣ್ಣದಾಗಿ ಬಿಸಿನೆಸ್ ಆರಂಭಿಸಲು ಬಯಸುವವರಿಗೆ ದಾರಿಗಳು ನೂರಾರು. ( Hardware Business ) ಅದರಲ್ಲಿ ಹಾರ್ಡ್‌ವೇರ್ ಬಿಸಿನೆಸ್ ಕೂಡ ಒಳ್ಳೆಯದು ಅಂತ ಹೇಳಬಹುದು. ಹಾಗಾದರೆ ಹಾರ್ಡ್‌ವೇರ್ ವ್ಯಾಪಾರ ಮಾಡಲು ಎಷ್ಟು ಬಂಡವಾಳ ಬೇಕು? ಎಷ್ಟು ಲಾಭ ಸಿಗುತ್ತದೆ? ವಿವರಗಳನ್ನು ವಿಸ್ತಾರ ಬಿಸಿನೆಸ್ & ಪ್ರಾಪರ್ಟಿ ಚಾನೆಲ್‌ನ ವಿಡಿಯೊದಲ್ಲಿ ತಿಳಿಯೋಣ. ಲಿಂಕ್ ಕೆಳಗಿದೆ.
ಯಾವುದೇ ಹಾರ್ಡ್‌ವೇರ್ ಅಂಗಡಿಯಲ್ಲಿ ನಿರ್ಮಾಣ ಕ್ಷೇತ್ರಕ್ಕೆ ಸಂಬಂಧಿಸಿದ ವಸ್ತುಗಳು ಮಾರಾಟಕ್ಕಿಡಲಾಗುತ್ತದೆ. ಮನೆಗಳಲ್ಲಿ ದಿನ ನಿತ್ಯದ ಉಪಯೋಗಕ್ಕೆ ಬಳಕೆಯಾಗುವ ಸ್ಪಾನರ್‌ಗಳು, ನಟ್, ಬೋಲ್ಟ್, ಸ್ಕ್ರೂಗಳು, ಹ್ಯಾಂಡಲ್‌ಗಳು ಮಾರಾಟವಾಗುತ್ತವೆ. ಪವರ್ ಟೂಲ್‌ಗಳು, ಎಲೆಕ್ಟ್ರಿಕಲ್ ಸಪ್ಲೈಸ್, ಪೈಪ್‌ಗಳು, ಪೇಂಟ್‌ಗಳು, ಸೇಫ್ಟಿ ಅಪಾರೆಲ್ಸ್, ಗಮ್ ಟೇಪ್‌ಗಳು, ಪ್ಲಂಬಿಂಗ್ ಸಲಕರಣೆಗಳು, ಪ್ಯಾಕೇಜಿಂಗ್ ಮೆಟೀರಿಯಲ್, ಟೆಸ್ಟಿಂಗ್ ಡಿವೈಸ್, ಅಳತೆ ಮಾಡಲು ಬಳಸುವ ಟೇಪ್‌ಗಳು, ಕಟ್ಟಿಂಗ್ ಪ್ಲೇರ್, ಹ್ಯಾಂಡ್ ಟೂಲ್‌ಗಳು ಸಿಗುತ್ತವೆ. ಮನೆ, ಕಚೇರಿ, ಕಾರ್ಖಾನೆ, ಶಾಲೆ, ಆಸ್ಪತ್ರೆ, ಕ್ರೀಡಾಂಗಣ, ವಾಣಿಜ್ಯ ಸಂಕೀರ್ಣಗಳು, ಅಂಗಡಿಗಳು ಹೀಗೆ ಎಲ್ಲ ವಿಧದ ಕಟ್ಟಡ ನಿರ್ಮಾಣಗಳಿಗೆ ಹಾರ್ಡ್‌ವೇರ್ ಬೇಕೇಬೇಕು. ಹೀಗಾಗಿ ಭಾರತದಲ್ಲಿ ಹಾರ್ಡ್‌ವೇರ್ ಬಿಸಿನೆಸ್ ದಿನೇದಿನೆ ಬೆಳೆಯುತ್ತಿದೆ. ಭಾರತದಲ್ಲಿ ಸುಮಾರು 10-15 ಲಕ್ಷ ರೂ.ಗೆ ಹಾರ್ಡ್ ವೇರ್ ಬಿಸಿನೆಸ್ ಶುರು ಮಾಡಬಹುದು.