ಬೆಂಗಳೂರು: ಮಾಹಿತಿ ತಂತ್ರಜ್ಞಾನ ದಿಗ್ಗಜ ಎಚ್‌ಸಿಎಲ್‌ನ ಸಹ ಸಂಸ್ಥಾಪಕ, ಪದ್ಮಭೂಷಣ ಡಾ. ಅಜಯ್ ಚೌಧುರಿ ತಮ್ಮ ಕೃತಿ ಜಸ್ಟ್ ಆಸ್ಪೈರ್ (Just Aspire) ಅನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಉದ್ಯಮಶೀಲತೆ ಮತ್ತು ಭವಿಷ್ಯ (Entrepreneurship and the future) , ತಂತ್ರಜ್ಞಾನದ ಬಗ್ಗೆ ಟಿಪ್ಪಣಿ (Notes on Technology) ಕೃತಿಯಲ್ಲಿ ಅಜಯ್ ಚೌಧುರಿ ಅವರು ವಿವರಿಸಿದ್ದಾರೆ.
ಭಾರತದ ಸಾಫ್ಟ್‌ವೇರ್ ಕ್ಷೇತ್ರದ ಯಶಸ್ಸಿನ ಬಗ್ಗೆ ನಾರಾಯಣಮೂರ್ತಿ ಮತ್ತು ಅಜೀಂ ಪ್ರೇಮ್‌ಜೀ ಅವರ ಆತ್ಮಕಥನ, ನಂದನ್ ನಿಲೇಕಣಿ ಅವರ ಕೃತಿಗಳಲ್ಲಿ ಅಮೂಲ್ಯವಾದ ವಿವರಗಳು ದೊರೆಯುತ್ತವೆ. ಆದರೆ ಭಾರತದ ಐಟಿ ಹಾರ್ಡ್‌ವೇರ್ ಮತ್ತು ಮೊಬಿಲಿಟಿ ಇಂಡಸ್ಟ್ರಿ ಬಗ್ಗೆ ಇದುವರೆಗೆ ಬೆಳಕು ಚೆಲ್ಲುವ ಕೃತಿಗಳು ಬಂದಿರಲಿಲ್ಲ. ಈ ದೃಷ್ಟಿಯಿಂದ ನೋಡುವುದಿದ್ದರೆ ಅಜಯ್ ಚೌಧುರಿ ಅವರ ( Just Aspire) ಪುಸ್ತಕ ಗಮನ ಸೆಳೆಯುತ್ತದೆ. ಭಾರತದ ಬಿಸಿನೆಸ್ ಹಿಸ್ಟರಿಯಲ್ಲಿನ ಮಹತ್ವದ ಗ್ಯಾಪ್ ಅನ್ನು ಈ ಪುಸ್ತಕ ಭರ್ತಿಗೊಳಿಸಿದೆ ಎಂದು ಪುಸ್ತಕದ ಬಗ್ಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕೃತಿಯು ಅಜಯ್ ಚೌಧುರಿ ಅವರ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲುವುದರ ಜತೆಗೆ ಭಾರತದ ಐಟಿ ಮತ್ತು ಹಾರ್ಡ್ ವೇರ್ ಇಂಡಸ್ಟ್ರಿಯ ಇತಿಹಾಸವನ್ನು ಬಿಂಬಿಸುತ್ತದೆ. ಎಚ್‌ಸಿಎಲ್‌ಗೆ ನಿರ್ಣಾಯಕವಾಗಿದ್ದ, ಎಚ್‌ಪಿ ಜತೆಗೆ ಭಾರತದಲ್ಲಿ ಪರ್ಸನಲ್ ಕಂಪ್ಯೂಟರ್ ವಿತರಣೆಗೆ ಮಾಡಿಕೊಂಡ ಒಪ್ಪಂದ, ನೋಕಿಯಾ ಜತೆಗೆ ಮೊಬೈಲ್ ಹ್ಯಾಂಡ್ ಸೆಟ್ ವಿತರಣೆಗೆ ಮಾಡಿದ್ದ ಐತಿಹಾಸಿಕ ಒಪ್ಪಂದದ ವಿವರಗಳನ್ನು ಕೃತಿ ಒಳಗೊಂಡಿದೆ. ತಮ್ಮ ಸ್ನೇಹಿತ, ಗೆಳೆಯ ಶಿವ್ ನಡಾರ್ (ಎಚ್‌ಸಿಎಲ್ ಸ್ಥಾಪಕ) ಬಗ್ಗೆ ಕೃತಿಯಲ್ಲಿ ವಿವರಿಸಿದ್ದಾರೆ.
ಜಬಲ್ಪುರದದಲ್ಲಿ ಕಳೆದ ಬಾಲ್ಯದ ದಿನಗಳಿಂದ ಎಚ್‌ಸಿಎಲ್‌ನಿಂದ ನಿವೃತ್ತರಾಗುವ ತನಕದ ತಮ್ಮ ಬದುಕಿನ ಯಶೋಗಾಥೆಯನ್ನು, ಏಳು ಬೀಳುಗಳನ್ನು ಅಜಯ್ ಚೌಧುರಿ ಬರೆದಿದ್ದಾರೆ. ಪ್ರಸ್ತುತ EPIC Foundation ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಕ್ಷೇತ್ರದಲ್ಲಿ ಇದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದೆ.
ಇದನ್ನೂ ಓದಿ: HCL Tech : ಎಚ್‌ಸಿಎಲ್ ಟೆಕ್ನಾಲಜೀಸ್‌ಗೆ 3,983 ಕೋಟಿ ರೂ. ಲಾಭ, ಪ್ರತಿ ಷೇರಿಗೆ 18 ರೂ. ಡಿವಿಡೆಂಡ್ ಘೋಷಣೆ