HCL HCL co-founder Ajay Chowdhury's Just Aspire book released, in the book?HCL : ಎಚ್‌ಸಿಎಲ್‌ ಸಹ ಸಂಸ್ಥಾಪಕ ಅಜಯ್‌ ಚೌಧುರಿ ಬರೆದ ಜಸ್ಟ್‌ ಆಸ್ಪೈರ್‌ ಬಿಡುಗಡೆ, ಪುಸ್ತಕದಲ್ಲೇನಿದೆ?

ವಾಣಿಜ್ಯ

HCL : ಎಚ್‌ಸಿಎಲ್‌ ಸಹ ಸಂಸ್ಥಾಪಕ ಅಜಯ್‌ ಚೌಧುರಿ ಬರೆದ ಜಸ್ಟ್‌ ಆಸ್ಪೈರ್‌ ಬಿಡುಗಡೆ, ಪುಸ್ತಕದಲ್ಲೇನಿದೆ?

HCL ಎಚ್‌ಸಿಎಲ್‌ ಸಹ ಸಂಸ್ಥಾಪಕ ಅಜಯ್‌ ಚೌಧುರಿ ಅವರು ತಮ್ಮ ಜಸ್ಟ್‌ ಆಸ್ಪೈರ್‌ ಕೃತಿಯಲ್ಲಿ ಆತ್ಮಕಥೆಯ ಜತೆಗೆ ಭಾರತದ ಐಟಿ ಹಾರ್ಡ್‌ವೇರ್‌ ಕ್ಷೇತ್ರದ ಬೆಳವಣಿಗೆ ಬಗ್ಗೆ ವಿವರಿಸಿದ್ದಾರೆ.

VISTARANEWS.COM


on

HCL HCL co-founder Ajay Chowdhury's Just Aspire book released, in the book?
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮಾಹಿತಿ ತಂತ್ರಜ್ಞಾನ ದಿಗ್ಗಜ ಎಚ್‌ಸಿಎಲ್‌ನ ಸಹ ಸಂಸ್ಥಾಪಕ, ಪದ್ಮಭೂಷಣ ಡಾ. ಅಜಯ್‌ ಚೌಧುರಿ ತಮ್ಮ ಕೃತಿ ಜಸ್ಟ್‌ ಆಸ್ಪೈರ್‌ (Just Aspire) ಅನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದ್ದಾರೆ. ಉದ್ಯಮಶೀಲತೆ ಮತ್ತು ಭವಿಷ್ಯ (Entrepreneurship and the future) , ತಂತ್ರಜ್ಞಾನದ ಬಗ್ಗೆ ಟಿಪ್ಪಣಿ (Notes on Technology) ಕೃತಿಯಲ್ಲಿ ಅಜಯ್‌ ಚೌಧುರಿ ಅವರು ವಿವರಿಸಿದ್ದಾರೆ.

ಭಾರತದ ಸಾಫ್ಟ್‌ವೇರ್‌ ಕ್ಷೇತ್ರದ ಯಶಸ್ಸಿನ ಬಗ್ಗೆ ನಾರಾಯಣಮೂರ್ತಿ ಮತ್ತು ಅಜೀಂ ಪ್ರೇಮ್‌ಜೀ ಅವರ ಆತ್ಮಕಥನ, ನಂದನ್‌ ನಿಲೇಕಣಿ ಅವರ ಕೃತಿಗಳಲ್ಲಿ ಅಮೂಲ್ಯವಾದ ವಿವರಗಳು ದೊರೆಯುತ್ತವೆ. ಆದರೆ ಭಾರತದ ಐಟಿ ಹಾರ್ಡ್‌ವೇರ್‌ ಮತ್ತು ಮೊಬಿಲಿಟಿ ಇಂಡಸ್ಟ್ರಿ ಬಗ್ಗೆ ಇದುವರೆಗೆ ಬೆಳಕು ಚೆಲ್ಲುವ ಕೃತಿಗಳು ಬಂದಿರಲಿಲ್ಲ. ಈ ದೃಷ್ಟಿಯಿಂದ ನೋಡುವುದಿದ್ದರೆ ಅಜಯ್‌ ಚೌಧುರಿ ಅವರ ( Just Aspire) ಪುಸ್ತಕ ಗಮನ ಸೆಳೆಯುತ್ತದೆ. ಭಾರತದ ಬಿಸಿನೆಸ್‌ ಹಿಸ್ಟರಿಯಲ್ಲಿನ ಮಹತ್ವದ ಗ್ಯಾಪ್‌ ಅನ್ನು ಈ ಪುಸ್ತಕ ಭರ್ತಿಗೊಳಿಸಿದೆ ಎಂದು ಪುಸ್ತಕದ ಬಗ್ಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕೃತಿಯು ಅಜಯ್‌ ಚೌಧುರಿ ಅವರ ವೈಯಕ್ತಿಕ ಜೀವನದ ಬಗ್ಗೆ ಬೆಳಕು ಚೆಲ್ಲುವುದರ ಜತೆಗೆ ಭಾರತದ ಐಟಿ ಮತ್ತು ಹಾರ್ಡ್‌ ವೇರ್‌ ಇಂಡಸ್ಟ್ರಿಯ ಇತಿಹಾಸವನ್ನು ಬಿಂಬಿಸುತ್ತದೆ. ಎಚ್‌ಸಿಎಲ್‌ಗೆ ನಿರ್ಣಾಯಕವಾಗಿದ್ದ, ಎಚ್‌ಪಿ ಜತೆಗೆ ಭಾರತದಲ್ಲಿ ಪರ್ಸನಲ್‌ ಕಂಪ್ಯೂಟರ್‌ ವಿತರಣೆಗೆ ಮಾಡಿಕೊಂಡ ಒಪ್ಪಂದ, ನೋಕಿಯಾ ಜತೆಗೆ ಮೊಬೈಲ್‌ ಹ್ಯಾಂಡ್‌ ಸೆಟ್‌ ವಿತರಣೆಗೆ ಮಾಡಿದ್ದ ಐತಿಹಾಸಿಕ ಒಪ್ಪಂದದ ವಿವರಗಳನ್ನು ಕೃತಿ ಒಳಗೊಂಡಿದೆ. ತಮ್ಮ ಸ್ನೇಹಿತ, ಗೆಳೆಯ ಶಿವ್‌ ನಡಾರ್‌ (ಎಚ್‌ಸಿಎಲ್‌ ಸ್ಥಾಪಕ) ಬಗ್ಗೆ ಕೃತಿಯಲ್ಲಿ ವಿವರಿಸಿದ್ದಾರೆ.

ಜಬಲ್ಪುರದದಲ್ಲಿ ಕಳೆದ ಬಾಲ್ಯದ ದಿನಗಳಿಂದ ಎಚ್‌ಸಿಎಲ್‌ನಿಂದ ನಿವೃತ್ತರಾಗುವ ತನಕದ ತಮ್ಮ ಬದುಕಿನ ಯಶೋಗಾಥೆಯನ್ನು, ಏಳು ಬೀಳುಗಳನ್ನು ಅಜಯ್‌ ಚೌಧುರಿ ಬರೆದಿದ್ದಾರೆ. ಪ್ರಸ್ತುತ EPIC Foundation ಎಂಬ ಎನ್‌ಜಿಒ ನಡೆಸುತ್ತಿದ್ದಾರೆ. ಎಲೆಕ್ಟ್ರಾನಿಕ್‌ ಸಿಸ್ಟಮ್‌ ಡಿಸೈನ್ ಕ್ಷೇತ್ರದಲ್ಲಿ ಇದು ಸೇವೆ ಸಲ್ಲಿಸುತ್ತಿರುವ ಸಂಸ್ಥೆಯಾಗಿದೆ.

ಇದನ್ನೂ ಓದಿ: HCL Tech : ಎಚ್‌ಸಿಎಲ್‌ ಟೆಕ್ನಾಲಜೀಸ್‌ಗೆ 3,983 ಕೋಟಿ ರೂ. ಲಾಭ, ಪ್ರತಿ ಷೇರಿಗೆ 18 ರೂ. ಡಿವಿಡೆಂಡ್‌ ಘೋಷಣೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ದೇಶ

Tata Motors: ಟಾಟಾ ಮೋಟಾರ್ಸ್‌ನಿಂದ ಹೊಸ ಮೈಲುಗಲ್ಲು; 333 ಪೇಟೆಂಟ್‌ಗಳಿಗೆ ಅನುಮೋದನೆ

Tata Motors: ಟಾಟಾ ಮೋಟರ್ಸ್ ಕಂಪನಿಯು ದಾಖಲೆಯ ಅತ್ಯಧಿಕ 333 ಪೇಟೆಂಟ್‌ಗಳಿಗೆ ಅನುಮೋದನೆ ಪಡೆದುಕೊಂಡಿದ್ದು, ಇಲ್ಲಿಯವರೆಗೆ ಒಟ್ಟು 850ಕ್ಕೂ ಹೆಚ್ಚು ಪೇಟೆಂಟ್‌ಗಳಿಗೆ ಅನುಮೋದನೆ ಪಡೆದಂತಾಗಿದೆ. ಹೊಸ ಹೊಸ ಉತ್ಪನ್ನಗಳು, ಪ್ರಕ್ರಿಯೆ ನಾವೀನ್ಯತೆಗಳು, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್, ಸಸ್ಟೇನೇಬಿಲಿಟಿ ಅಂಡ್ ಸೇಫ್ಟಿ (CESS) ಯಂತಹ ಪ್ರಮುಖ ಆಟೋಮೋಟಿವ್ ಟ್ರೆಂಡ್‌ಗಳಲ್ಲಿನ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತಾದ ವಿಸ್ತಾರವಾದ ಕ್ಷೇತ್ರಗಳಲ್ಲಿ ಆವಿಷ್ಕಾರ ತರುವ ನಿಟ್ಟಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

VISTARANEWS.COM


on

Tata Motors gets approval for 333 patents
Koo

ಬೆಂಗಳೂರು: ಭಾರತದ ಮುಂಚೂಣಿಯಲ್ಲಿರುವ ಆಟೋಮೋಬೈಲ್ ಕಂಪನಿ ಟಾಟಾ ಮೋಟಾರ್ಸ್ (Tata Motors) ಇಂಟೆಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR)ನಲ್ಲಿ ಮತ್ತೊಂದು ಮಹತ್ವದ ಹೊಸ ಮೈಲುಗಲ್ಲು ಸ್ಥಾಪಿಸಿದೆ.

2024ನೇ ಹಣಕಾಸು ಸಾಲಿನಲ್ಲಿ ಸಂಸ್ಥೆಯು ದಾಖಲೆಯ 222 ಪೇಟೆಂಟ್‌ಗಳು ಮತ್ತು 117 ಡಿಸೈನ್ ಅರ್ಜಿಗಳನ್ನು ಸಲ್ಲಿಸಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತ್ಯಧಿಕ ಎನಿಸಿದೆ. ಹೊಸ ಹೊಸ ಉತ್ಪನ್ನಗಳು, ಪ್ರಕ್ರಿಯೆ ನಾವೀನ್ಯತೆಗಳು, ಕನೆಕ್ಟಿವಿಟಿ, ಎಲೆಕ್ಟ್ರಿಫಿಕೇಶನ್, ಸಸ್ಟೇನೇಬಿಲಿಟಿ ಅಂಡ್ ಸೇಫ್ಟಿ (CESS) ಯಂತಹ ಪ್ರಮುಖ ಆಟೋಮೋಟಿವ್ ಟ್ರೆಂಡ್‌ಗಳಲ್ಲಿನ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಕಂಡುಕೊಳ್ಳುವ ಕುರಿತಾದ ವಿಸ್ತಾರವಾದ ಕ್ಷೇತ್ರಗಳಲ್ಲಿ ಆವಿಷ್ಕಾರ ತರುವ ನಿಟ್ಟಿನಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಇದನ್ನೂ ಓದಿ: Lok Sabha Election 2024: ಆರತಕ್ಷತೆಯಲ್ಲಿ ವಧು-ವರರಿಂದ ಮತದಾನ ಜಾಗೃತಿ

ಇದಲ್ಲದೇ, ಪವರ್ ಟ್ರೇನ್, ಬಾಡಿ & ಟ್ರಿಮ್, ಸಸ್ಪೆನ್ಷನ್, ಬ್ರೇಕ್ಸ್, ಎಚ್‌.ವಿ.ಎ.ಸಿ. (HVAC) ಮತ್ತು ಮಾಲಿನ್ಯ ನಿಯಂತ್ರಣ ಸೇರಿದಂತೆ ವಿವಿಧ ವಾಹನ ಸಿಸ್ಟಂಗಳನ್ನೂ ಈ ಅರ್ಜಿಗಳು ಒಳಗೊಂಡಿವೆ. ಇದೇ ವೇಳೆ ಟಾಟಾ ಮೋಟರ್ಸ್ ದಾಖಲೆಯ ಅತ್ಯಧಿಕ 333 ಪೇಟೆಂಟ್‌ಗಳಿಗೆ ಅನುಮೋದನೆ ಪಡೆದುಕೊಂಡಿರುವುದು ಹೆಗ್ಗಳಿಕೆಯಾಗಿದೆ. ಈ ಮೂಲಕ ಟಾಟಾ ಮೋಟರ್ಸ್ ಇಲ್ಲಿವರೆಗೆ ಒಟ್ಟು 850ಕ್ಕೂ ಹೆಚ್ಚು ಪೇಟೆಂಟ್‌ಗಳಿಗೆ ಅನುಮೋದನೆ ಪಡೆದಂತಾಗಿದೆ.

ಇದು ಎಂಜಿನಿಯರಿಂಗ್ ಪರಿಣತಿ, ಕ್ಲೀನ್ ಪವರ್‌ಟ್ರೇನ್‌ಗಳು, ವಿನ್ಯಾಸ ಸಂಪರ್ಕ ಮತ್ತು ಸ್ಮಾರ್ಟ್ ಸುರಕ್ಷತೆ ವೈಶಿಷ್ಟ್ಯಗಳಿಗೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಮೂಲಕ ನೈಜ-ವಿಶ್ವದ ಅಗತ್ಯತೆಗಳಿಗೆ ಅನುಗುಣವಾಗಿ ನಾವೀನ್ಯತೆಗಳನ್ನು ಅಳವಡಿಕೆ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ. ಗ್ರಾಹಕರ ಹಿತರಕ್ಷಣೆ ಮತ್ತು ಪರಿಸರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತಿರುವ ಟಾಟಾ ಮೋಟರ್ಸ್, ಇದಕ್ಕೆ ಪೂರಕವಾಗಿ ಉದ್ದೇಶಿತ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ. ಇದರ ಪರಿಣಾಮ ಕಂಪನಿಯು ಕಾರ್ಯದಕ್ಷತೆ, ಹಸಿರು ಮತ್ತು ಸುರಕ್ಷಿತ ವಾಹನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಇದನ್ನೂ ಓದಿ: World Malaria Day: ಮಲೇರಿಯಾ ಮತ್ತು ಡೆಂಗ್ಯು ನಡುವಿನ ವ್ಯತ್ಯಾಸ ಏನು? ಗುರುತಿಸುವುದು ಹೇಗೆ?

ಈ ಮೂಲಕ ಬಳಕೆದಾರರು ಮತ್ತು ಉದ್ಯಮದ ಪರಿವರ್ತನೆಗೆ ಪ್ರಯೋಜನವಾಗುವಂತೆ ಕಾರ್ಯನಿರ್ವಹಿಸುತ್ತಿದೆ. 2024 ನೇ ಹಣಕಾಸು ಸಾಲಿನಲ್ಲಿ ಟಾಟಾ ಮೋಟರ್ಸ್ ತನ್ನ ಇಂಟಲೆಕ್ಚುವಲ್ ಪ್ರಾಪರ್ಟಿ ರೈಟ್ಸ್ (IPR) ಪರಿಣತಿಗಾಗಿ ಐದು ಪ್ರತಿಷ್ಠಿತ ಪ್ರಶಸ್ತಿಗಳನ್ನು ಹಾಗೂ ಜಾಗತಿಕ ಮಾನ್ಯತೆಯನ್ನು ಗಳಿಸಿದೆ.

ಇದನ್ನೂ ಓದಿ: DC vs GT: ಕೊಹ್ಲಿಯಂತೆ ಅದ್ಭುತ ಫೀಲ್ಡಿಂಗ್​ ನಡೆಸಿ ಡೆಲ್ಲಿಗೆ ಗೆಲುವು ತಂದ ಟ್ರಿಸ್ಟಾನ್ ಸ್ಟಬ್ಸ್

ಈ ಕುರಿತು ಮಾತನಾಡಿದ ಟಾಟಾ ಮೋಟರ್ಸ್‌ನ ಅಧ್ಯಕ್ಷ & ಚೀಫ್ ಟೆಕ್ನಾಲಾಜಿ ಆಫೀಸರ್ ರಾಜೇಂದ್ರ ಪೇಟ್ಕರ್, ಟಾಟಾ ಮೋಟರ್ಸ್‌ ದಾಖಲೆ ಸಂಖ್ಯೆಯ ಪೇಟೆಂಟ್‌ಗಳನ್ನು ಸಲ್ಲಿಸಿ ಮತ್ತು ಮಂಜೂರು ಪಡೆಯುವುದರೊಂದಿಗೆ ನಾವು ಆಟೋಮೋಟಿವ್ ಶ್ರೇಷ್ಠತೆಯನ್ನು ಮರುವ್ಯಾಖ್ಯಾನಿಸುವುದನ್ನು ಮುಂದುವರಿಸುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನಗಳು, ಹಸಿರು ವಾಹನಗಳು ಮತ್ತು ಗ್ರಾಹಕ ಕೇಂದ್ರಿತ ವಿಧಾನವು ನಮ್ಮನ್ನು ಉದ್ಯಮದಲ್ಲಿ ಮುಂಚೂಣಿಯಲ್ಲಿರಿಸಿದೆ. ಚಲನಶೀಲತೆ ವಿಕಸನಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟರ್ಸ್ ಮುಂಚೂಣಿಯಲ್ಲಿದೆ. ಈ ಮೂಲಕ ಎಲ್ಲರಿಗೂ ಸ್ಮಾರ್ಟ್, ಹೆಚ್ಚು ಸಂಪರ್ಕದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದೆ ಎಂದು ತಿಳಿಸಿದ್ದಾರೆ.

Continue Reading

ದೇಶ

ICICI Bank: ಐಸಿಐಸಿಐ ಬ್ಯಾಂಕ್‌ ಗ್ರಾಹಕರೇ ಎಚ್ಚರ; 17 ಸಾವಿರ ಜನರ ಕಾರ್ಡ್‌ ಮಾಹಿತಿ ಸೋರಿಕೆ!

ICICI Bank: ಐಸಿಐಸಿಐ ಬ್ಯಾಂಕ್‌ನ ಸುಮಾರು 17 ಸಾವಿರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯು ಬ್ಯಾಂಕ್‌ನ ಐ ಮೊಬೈಲ್‌ ಪೇ ಎಂಬ ಅಪ್ಲಿಕೇಷನ್‌ನಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದೆ. ಇದರಿಂದಾಗಿ ಕ್ರೆಡಿಟ್‌ ಕಾರ್ಡ್‌ ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದ್ದು, ಸಾವಿರಾರು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.

VISTARANEWS.COM


on

ICICI Bank
Koo

ಮುಂಬೈ: ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾದ ಐಸಿಐಸಿಐ ಬ್ಯಾಂಕ್‌ನ (ICICI Bank) ಮೊಬೈಲ್‌ ಬ್ಯಾಂಕಿಂಗ್‌ ಅಪ್ಲಿಕೇಷನ್‌ನಲ್ಲಿ (Mobile Banking Application) ತಾಂತ್ರಿಕ ತೊಂದರೆ ಎದುರಾಗಿದೆ. ಅಷ್ಟೇ ಅಲ್ಲ, ಸುಮಾರು 17 ಸಾವಿರ ಗ್ರಾಹಕರ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಮಾಹಿತಿ ಬಹಿರಂಗವಾಗಿದೆ ಎಂಬ ಕುರಿತು ದೂರುಗಳು ವ್ಯಕ್ತವಾಗಿವೆ. ಇದರಿಂದಾಗಿ ಐಸಿಐಸಿಐ ಬ್ಯಾಂಕ್‌ನ ಲಕ್ಷಾಂತರ ಗ್ರಾಹಕರು (ICICI Bank Custormers) ಆತಂಕಕ್ಕೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಐಸಿಐಸಿಐ ಬ್ಯಾಂಕ್‌ನ ಐ ಮೊಬೈಲ್‌ ಪೇ ಎಂಬ ಅಪ್ಲಿಕೇಶನ್‌ನಲ್ಲಿ (App) ಭಾರಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದರಿಂದಾಗಿ ಸಾವಿರಾರು ಗ್ರಾಹಕರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ. ಟೆಕ್ನೊಫಿನೋ ಸಂಸ್ಥೆಯ ಸಂಸ್ಥಾಪಕ ಸುಮಂತಾ ಮಂಡಲ್‌ ಅವರು ತಾಂತ್ರಿಕ ದೋಷ ಹಾಗೂ ಮಾಹಿತಿ ಸೋರಿಕೆ ಕುರಿತು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಿದ್ದು, ಆರ್‌ಬಿಐ ಕೂಡಲೇ ಈ ಸಮಸ್ಯೆ ಬಗೆಹರಿಸಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.

“ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರುವ ಸಾವಿರಾರು ಗ್ರಾಹಕರಿಗೆ ತೊಂದರೆಯಾಗಿದೆ. ಅದರಲ್ಲೂ, ಐ ಮೊಬೈಲ್‌ ಪೇ ಅಪ್ಲಿಕೇಷನ್‌ನಲ್ಲಿ ಭಾರಿ ದೋಷ ಕಾಣಿಸಿಕೊಂಡಿದೆ. ಕ್ರೆಡಿಟ್‌ ಕಾರ್ಡ್‌ ನಂಬರ್‌, ಎಕ್ಸ್‌ಪೈರಿ ಡೇಟ್‌, ಸಿವಿವಿ ಸೇರಿ ಎಲ್ಲ ಮಾಹಿತಿಯು ಅಪ್ಲಿಕೇಷನ್‌ನಲ್ಲಿ ಬಹಿರಂಗವಾಗಿ ಕಾಣಿಸುತ್ತಿದೆ. ಅಂತಾರಾಷ್ಟ್ರೀಯ ಟ್ರಾನ್ಸ್ಯಾಕ್ಷನ್‌ ಸೆಟಿಂಗ್ಸ್‌ ಕೂಡ ಬದಲಾಯಿಸಬಹುದಾಗಿದೆ. ಇದರಿಂದಾಗಿ ಅಂತಾರಾಷ್ಟ್ರೀಯ ಟ್ರಾನ್ಸ್ಯಾಕ್ಷನ್‌ ಮಾಡಲು ಬೇರೆಯವರ ಕ್ರೆಡಿಟ್‌ ಕಾರ್ಡ್‌ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳಬಹುದಾಗಿದೆ” ಎಂದು ಅವರು ದೂರಿದ್ದಾರೆ.

ಐಸಿಐಸಿಐ ಬ್ಯಾಂಕ್‌ ಹೇಳುವುದೇನು?

ತಾಂತ್ರಿಕ ದೋಷವಾಗಿದೆಯೋ, ಯಾರಾದರೂ ಹ್ಯಾಕ್‌ ಮಾಡಿದ್ದಾರೋ ಎಂಬ ಕುರಿತು ಅನುಮಾನ ವ್ಯಕ್ತವಾಗುತ್ತಲೇ ಈ ಕುರಿತು ಐಸಿಐಸಿಐ ಬ್ಯಾಂಕ್‌ ಸ್ಪಷ್ಟನೆ ನೀಡಿದೆ. “ಹೊಸದಾಗಿ ನೀಡಲಾದ 17 ಸಾವಿರ ಕ್ರೆಡಿಟ್‌ ಕಾರ್ಡ್‌ಗಳ ಮಾಹಿತಿಯು ಬಹಿರಂಗವಾಗಿದೆ. ಇದು ತಾಂತ್ರಿಕ ದೋಷದಿಂದ ಉಂಟಾಗಿರುವ ಸಾಧ್ಯತೆ ಇದೆ. ಐಸಿಐಸಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹೊಂದಿರುವವರ ಪೈಕಿ ಶೇ.0.1ರಷ್ಟು ಗ್ರಾಹಕರಿಗೆ ತೊಂದರೆಯಾಗಿದೆ. ಆದರೆ, ಗ್ರಾಹಕರ ಹಿತದೃಷ್ಟಿಯಿಂದಾಗಿ ಕೂಡಲೇ ಎಲ್ಲ ಕಾರ್ಡ್‌ಗಳನ್ನು ಬ್ಲಾಕ್‌ ಮಾಡಿದ್ದೇವೆ. ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದ್ದು, ಶೀಘ್ರವೇ ಬಗೆಹರಿಸಲಾಗತ್ತದೆ. ಯಾರದರೂ ಹಣ ಕಳೆದುಕೊಂಡಿದ್ದರೆ ಕಸ್ಟಮರ್‌ ಕೇರ್‌ಗೆ ಕರೆ ಮಾಡಿ” ಎಂಬುದಾಗಿ ಬ್ಯಾಂಕ್‌ ಮನವಿ ಮಾಡಿದೆ.

ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

Continue Reading

ವಾಣಿಜ್ಯ

Reliance Smart Bazar: ರಿಲಯನ್ಸ್ ಸ್ಮಾರ್ಟ್ ಬಜಾರ್ ಗ್ರಾಹಕರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ; ಯಾವೆಲ್ಲ ವಸ್ತುಗಳಿಗೆ ಹೆಚ್ಚಿನ ಬೇಡಿಕೆ?

Reliance Smart Bazar: ರಿಲಯನ್ಸ್ ರೀಟೇಲ್‌ನ ಸ್ಮಾರ್ಟ್ ಬಜಾರ್ (Reliance Smart Bazar)ನ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ರಿಲಯನ್ಸ್ ರೀಟೇಲ್ ದಿನಸಿ ಮೂಲಕ ಬರುವ ಆದಾಯ ಪ್ರಮಾಣ ಶೇ. 31ರಷ್ಟು ಹೆಚ್ಚಾಗಿದೆ. ಸ್ಮಾರ್ಟ್- ಸ್ಮಾರ್ಟ್ ಬಜಾರ್‌ನಿಂದ ನಡೆದ ಫುಲ್ ಪೈಸಾ ವಸೂಲ್ ಸೇಲ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 21ರಷ್ಟು ಮಾರಾಟ ಹೆಚ್ಚಾಗಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಾರಾಟ ಬಹಳ ಹೆಚ್ಚಿರುತ್ತದೆ. ಆದರೆ ಹೋಳಿ ಹಬ್ಬದ ಮುಂಚಿನ ಮಾರಾಟವು ದೀಪಾವಳಿ ಸಂದರ್ಭವನ್ನು ಸಹ ಮೀರಿಸಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Reliance Smart Bazar
Koo

ಮುಂಬೈ: ರಿಲಯನ್ಸ್ ರೀಟೇಲ್‌ನ ಸ್ಮಾರ್ಟ್ ಬಜಾರ್ (Reliance Smart Bazar)ನ ಗ್ರಾಹಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ ಎಂಬ ಅಂಶ ಇತ್ತೀಚಿನ ರಿಲಯನ್ಸ್ ಇಂಡಸ್ಟ್ರೀಸ್ ತ್ರೈಮಾಸಿಕ ಫಲಿತಾಂಶದಲ್ಲಿ ಗೋಚರವಾಗಿದೆ. ರಿಲಯನ್ಸ್ ರೀಟೇಲ್ ದಿನಸಿ ಮೂಲಕ ಬರುವ ಆದಾಯ ಪ್ರಮಾಣ ಶೇ. 31ರಷ್ಟು ಹೆಚ್ಚಾಗಿದೆ. ಸ್ಮಾರ್ಟ್- ಸ್ಮಾರ್ಟ್ ಬಜಾರ್‌ನಿಂದ ನಡೆದ ಫುಲ್ ಪೈಸಾ ವಸೂಲ್ ಸೇಲ್‌ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ. 21ರಷ್ಟು ಮಾರಾಟ ಹೆಚ್ಚಾಗಿದೆ. ಸಾಮಾನ್ಯವಾಗಿ ದೀಪಾವಳಿ ಸಂದರ್ಭದಲ್ಲಿ ಮಾರಾಟ ಬಹಳ ಹೆಚ್ಚಿರುತ್ತದೆ. ಆದರೆ ಹೋಳಿ ಹಬ್ಬದ ಮುಂಚಿನ ಮಾರಾಟವು ದೀಪಾವಳಿ ಸಂದರ್ಭವನ್ನು ಸಹ ಮೀರಿಸಿದೆ.

ಅಂದ ಹಾಗೆ ರಿಲಯನ್ಸ್ ಇಂಡಸ್ಟ್ರೀಸ್‌ನಿಂದ ನಾಲ್ಕನೇ ತ್ರೈಮಾಸಿಕ ಫಲಿತಾಂಶ ಈಚೆಗಷ್ಟೇ ಹೊರಬಂದಿದ್ದು, ಕಂಪನಿಯ ರೀಟೇಲ್ ವ್ಯವಹಾರದ ಅಂಗವಾದ ರಿಲಯನ್ಸ್ ರೀಟೇಲ್ ಬೆಳವಣಿಗೆ ಬಗ್ಗೆ ಹೂಡಿಕೆದಾರರಲ್ಲಿ ಹಾಗೂ ಗ್ರಾಹಕರಲ್ಲಿ ಕುತೂಹಲ ಮೂಡಿಸುವಂಥ ಬೆಳವಣಿಗೆಗಳು ಕಂಡುಬಂದಿವೆ. ರಿಲಯನ್ಸ್ ರೀಟೇಲ್ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಆದ ಜಿಯೋಮಾರ್ಟ್ ತನ್ನ ಮಾರ್ಕೆಟ್ ಪ್ಲೇಸ್ ಕೊಡುಗೆಗಳನ್ನು ವಿಸ್ತರಿಸಿದ್ದು, ಒಂದು ವರ್ಷದಲ್ಲಿ ಮಾರಾಟಗಾರರ ನೆಲೆ ಶೇ. 94ರಷ್ಟು ಹೆಚ್ಚಾಗಿದೆ.

ದಿನಸಿ ವಿಭಾಗದಲ್ಲಿ ಆರ್ಡರ್ ಮೌಲ್ಯವು ವೃದ್ಧಿಸಿದೆ. ಕ್ಯಾಟಲಾಗ್ (ಲಭ್ಯ ಇರುವ ವಸ್ತುಗಳ ಪಟ್ಟಿ) ವಿಸ್ತರಣೆಯು ಮುಂದುವರಿದಿದ್ದು, ಇ-ಕಾಮರ್ಸ್ ಪ್ಲಾಟ್ ಫಾರ್ಮ್ ತಿಳಿಸಿರುವಂತೆ, ವರ್ಷದಿಂದ ವರ್ಷಕ್ಕೆ ಆಯ್ಕೆಗಳ ಸಂಖ್ಯೆಯಲ್ಲಿ ಶೇ. 32ರಷ್ಟು ಹೆಚ್ಚಾಗಿದೆ. ಸರಾಸರಿ ಆರ್ಡರ್ ಮೌಲ್ಯವು ವರ್ಷದಿಂದ ವರ್ಷಕ್ಕೆ ಶೇ. 30ರಷ್ಟು ಹೆಚ್ಚಾಗಿದ್ದು, ಪ್ರತಿ ಆರ್ಡರ್‌ಗೆ ಸರಾಸರಿ ಯೂನಿಟ್ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇ. 37ರಷ್ಟು ಹೆಚ್ಚಾಗಿದೆ. ಎಲೆಕ್ಟ್ರಾನಿಕ್ಸ್, ದಿನಸಿ, ಫ್ಯಾಷನ್ ಈ ವಿಭಾಗದಲ್ಲಿ ಗ್ರಾಹಕರ ಬೇಡಿಕೆ ಹೆಚ್ಚಾಗಿದೆ. ಇನ್ನು ಖರೀದಿ ಆಯ್ಕೆ ಕೂಡ ದೊಡ್ಡ ಪ್ರಮಾಣದಲ್ಲಿ ವೃದ್ಧಿಸಿದೆ ಎನ್ನುವುದು ವಿಶೇಷ.

‘ಹೋಲಿ ರೆಡಿ’ ಹಾಗೂ ‘ರಿಪಬ್ಲಿಕ್ ಡೇ’ ಇಂಥ ಸಂದರ್ಭದಲ್ಲಿ ಗ್ರಾಹಕರು ಹೆಚ್ಚು ಖರೀದಿಸಿದ್ದು, ಸೆಷನ್‌ಗಳು ಕೂಡ ಜಾಸ್ತಿಯಿದೆ ಮತ್ತು ಗ್ರಾಸ್ ಮರ್ಕಂಡೈಸ್ ವ್ಯಾಲ್ಯೂ ಹೆಚ್ಚಿದೆ. ಖರೀದಿ ಅನುಭವವನ್ನು ಉತ್ತಮಗೊಳಿಸುವುದಕ್ಕಾಗಿ ʼಬೈ ಎಗೇಯ್ನ್‌ʼ ಎಂಬ ಆಯ್ಕೆ ನೀಡಲಾಗಿದ್ದು, ಉತ್ಪನ್ನಗಳಿಗೆ ಗ್ರಾಹಕರು ರೇಟಿಂಗ್ ಸಹ ನೀಡಬಹುದು.

ರಿಲಯನ್ಸ್ ರೀಟೇಲ್ ದಿನಸಿಯ ಹೊಸ ವಾಣಿಜ್ಯ ಸೆಗ್‌ಮೆಂಟ್‌ ಗಮನಾರ್ಹವಾದ ಬೆಳವಣಿಗೆಯನ್ನು ದಾಖಲಿಸಿದೆ. ಮೆಟ್ರೋ ಕಿರಾಣಾ ಉತ್ಸವದಂಥ ಉಪಕ್ರಮಗಳು ಇದಕ್ಕೆ ಕೊಡುಗೆ ನೀಡಿವೆ. ಹೋಟೆಲ್-ರೆಸ್ಟೋರೆಂಟ್-ಕೆಫೆ ಈ ಸೆಗ್‌ಮೆಂಟ್‌ನಲ್ಲಿ ಮಾಡಿಕೊಂಡ ಸಾಂಸ್ಥಿಕ ಸಹಭಾಗಿತ್ವವು ವೈವಿಧ್ಯಮಯ ಆದಾಯ ಮೂಲದ ಹರಿವಿಗೆ ಕಾರಣವಾಗಿವೆ.

ರಿಲಯನ್ಸ್ ರೀಟೇಲ್ ಫಲಿತಾಂಶ ಘೋಷಣೆ ವೇಳೆ ಕಂಪನಿಯ ಸಿಎಫ್ಒ ದಿನೇಶ್ ತಲುಜಾ ಮಾತನಾಡಿ, ʼʼದೇಶದಲ್ಲಿ ನಾವು ತುಂಬ ಆಳವಾಗಿ ಪ್ರಾದೇಶಿಕವಾದ ಮಳಿಗೆಗಳ ಜಾಲವನ್ನು ಕಟ್ಟುತ್ತಿದ್ದೇವೆʼʼ ಎಂದು ಹೇಳಿದರು. ರೀಟೇಲ್ ವಿಭಾಗದಲ್ಲಿ ರಿಲಯನ್ಸ್ ಗಟ್ಟಿ ಹೆಜ್ಜೆಗಳನ್ನು ಈ ಮಾತುಗಳು ಪ್ರತಿಬಿಂಬಿಸುತ್ತವೆ.

ಇದನ್ನೂ ಓದಿ: Kotak Bank: ಆರ್‌ಬಿಐ ನಿರ್ಬಂಧದ ಬೆನ್ನಲ್ಲೇ ಕೊಟಕ್‌ ಬ್ಯಾಂಕ್‌ ಷೇರು ಭಾರಿ ಕುಸಿತ; ಹೂಡಿಕೆದಾರರಿಗೆ ನಷ್ಟ!

ರಿಲಯನ್ಸ್ ರೀಟೇಲ್ ನಾಲ್ಕನೇ ತ್ರೈಮಾಸಿಕದಲ್ಲಿ 2,698 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ಅವಧಿಗೆ ಹೋಲಿಸಿದರೆ ಇದು ಶೇ 11.7ರಷ್ಟು ಹೆಚ್ಚಾಗಿದೆ. 2020ರಲ್ಲಿ ರಿಲಯನ್ಸ್ ರೀಟೇಲ್‌ನ ಇ-ಟೇಲ್ ಅಂಗವಾಗಿ ಜಿಯೋಮಾರ್ಟ್ ಅಸ್ತಿತ್ವಕ್ಕೆ ಬಂತು. ಇದೀಗ ಭಾರತದ ದೇಶೀಯ ಅತಿದೊಡ್ಡ ಇ-ಮಾರ್ಕೆಟ್ ಪ್ಲೇಸ್‌ಗಳಲ್ಲಿ ಒಂದು ಎನಿಸಿಕೊಂಡಿದೆ.

Continue Reading

ಫ್ಯಾಷನ್

Ethnic Collection: ‘ಹೀರಾಮಂಡಿ’ ವೆಬ್ ಸೀರಿಸ್‌ ಪ್ರೇರಿತ ಸಾಂಪ್ರದಾಯಿಕ ಫ್ಯಾಷನ್ ಕಲೆಕ್ಷನ್‌ ಬಿಡುಗಡೆ ಮಾಡಿದ ಅಜಿಯೋ

Ethnic Collection: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

VISTARANEWS.COM


on

Ethnic Collection
Koo

ಮುಂಬೈ: ನೆಟ್‌ಫ್ಲಿಕ್ಸ್‌ (Netflix) ಹಾಗೂ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಅವರ ‌ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ (Heeramandi: The Diamond Bazaar) ವೆಬ್‌ ಸೀರಿಸ್‌ನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ದಿರಿಸುಗಳ (Ethnic Collection) ಎಕ್ಸ್‌ಕ್ಲೂಸಿವ್ ಸಂಗ್ರಹದ ಅನಾವರಣವನ್ನು ಭಾರತದ ಪ್ರೀಮಿಯರ್ ಫ್ಯಾಷನ್ ಇ-ಟೇಲರ್ ಆದ ಅಜಿಯೋ ಬುಧವಾರ ಘೋಷಿಸಿದೆ. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ (AJIO’s House of Ethnics) ಅಡಿಯಲ್ಲಿ ಇದನ್ನು ಆರಂಭಿಸಲಾಗಿದೆ. ನೆಟ್‌ಫ್ಲಿಕ್ಸ್‌ನ ಈ ಸರಣಿಯಿಂದ ಪ್ರೇರಣೆಗೊಂಡ 250 ಸ್ಟೈಲ್‌ನ ಸಾಂಪ್ರದಾಯಿಕ ದಿರಿಸುಗಳ ಈ ಸೀಮಿತ ಅವಧಿಯ ಸಂಗ್ರಹವು ಗ್ರಾಹಕರಿಗೆ ಒದಗಿಸಲಿದೆ. ಇಂದಿನಿಂದ (ಏಪ್ರಿಲ್ 25) ಗ್ರಾಹಕರು ಖರೀದಿಸಬಹುದು.

ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಈ ಸೀರಿಸ್‌ನಲ್ಲಿ ಬಳಸಲಾದ ಬಣ್ಣಗಳು, ಸಿಲೌಟ್‌ಗಳು, ಬಟ್ಟೆಗಳು ಮತ್ತು ಅಲಂಕಾರಗಳಿಂದ ಈ ಬಹು ನಿರೀಕ್ಷಿತ ಸಂಗ್ರಹವು ಪ್ರೇರಣೆ ಪಡೆದಿದೆ. ಈ ಸಂಗ್ರಹದ ಶ್ರೇಣಿಯಲ್ಲಿ ಬಟ್ಟೆಗಳಿಗೆ ಶುದ್ಧ ರೇಷ್ಮೆ, ಟಿಶ್ಯೂ, ಜಾರ್ಜೆಟ್‌ ಮತ್ತು ಬ್ರೋಕೇಡ್‌ಗಳನ್ನು ಬಳಸಲಾಗಿದೆ. ಇವುಗಳಲ್ಲಿ ಬಹಳ ಕೌಶಲದಿಂದ ರೂಪಿಸಿದ ಡಬ್ಕಾ ಕೈ ಕಸೂತಿ, ಪಾರ್ಸಿ ಕಸೂತಿ, ಬೀಡ್ ವರ್ಕ್ ಮತ್ತು ಇದೇ ಸೀರಿಸ್‌ನಿಂದ ಸ್ಫೂರ್ತಿಗೊಂಡ ಡಿಜಿಟಲ್ ಪ್ರಿಂಟ್ಸ್ ಇವೆ.

ಇದು ಮಹಿಳಾ ಕೇಂದ್ರಿತ ಸಂಗ್ರಹವಾಗಿದ್ದು, ಶರಾರಾ, ಕುರ್ತಾ ಸೂಟ್ ಸೆಟ್, ಲೆಹೆಂಗಾ ಮತ್ತು ಸೀರೆಗಳನ್ನು ಒಳಗೊಂಡಿದೆ. ಇವುಗಳ ಬೆಲೆ 4,000 ರೂ.ಯೊಂದ ಆರಂಭಗೊಂಡು 1,50,000 ರೂ. ತನಕ ಇರುತ್ತದೆ. ಇದನ್ನು ಸಂಜಯ್ ಲೀಲಾ ಬನ್ಸಾಲಿ ಅವರ ತಂಡ ವಿನ್ಯಾಸ ಮಾಡಿದೆ. ಅಜಿಯೋ ಹಾಗೂ ನೆಟ್‌ಫ್ಲಿಕ್ಸ್ ಮಧ್ಯೆ ಈ ಪಾಲುದಾರಿಕೆಯ ಕಲ್ಪನೆ ಮೂಡಿರುವ ಬಗೆಯೂ ಆಸಕ್ತಿದಾಯಕ. ಇದರಿಂದಾಗಿ ಅಭಿಮಾನಿಗಳು ನೆಟ್‌ಫ್ಲಿಕ್ಸ್ ಸೀರಿಸ್‌ನಿಂದ ಪ್ರೇರಣೆಗೊಂಡ ವಿಶಿಷ್ಟ ಸ್ಟೈಲ್ ಹೊಂದಬಹುದು.

ಅಜಿಯೋದ ಸಿಇಒ ವಿನೀತ್ ನಾಯರ್ ಅವರು ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಸೃಷ್ಟಿಯಲ್ಲಿ ಫ್ಯಾಷನ್ ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ. ಇದರ ಥೀಮ್ ಭಾರತೀಯ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಲ್ಲಿ ಆಳವಾಗಿ ಬೇರೂರಿರುತ್ತದೆ. ಆದ್ದರಿಂದ ನಾವು ʼಹೀರಾಮಂಡಿʼಗಾಗಿ ನೆಟ್‌ಫ್ಲಿಕ್ಸ್‌ನೊಂದಿಗೆ ಈ ಸಹಯೋಗದ ಬಗ್ಗೆ ಯೋಚಿಸಿದಾಗ ಅದು ಬಹಳಷ್ಟು ಅರ್ಥಪೂರ್ಣ ಎನಿಸಿತು. ಅಜಿಯೋದ ಹೌಸ್ ಆಫ್ ಎಥ್ನಿಕ್ಸ್ ಈ ಸೀಮಿತ ಆವೃತ್ತಿಯ ಸಂಗ್ರಹಕ್ಕೆ ಪರಿಪೂರ್ಣ ಲಾಂಚ್‌ಪ್ಯಾಡ್ ಆಗಿದೆ. ಗ್ರಾಹಕರು ಆರಾಧಿಸುವ ಫ್ಯಾಷನ್‌ ಕೈಗೆಟುಕುವಂತೆ ಮಾಡುತ್ತದೆ. ನಿಮ್ಮ ಕನಸಿನ ಬಾಲಿವುಡ್-ಪ್ರೇರಿತ ಲುಕ್ ಪಡೆಯುವುದಕ್ಕೆ ಇದು ಸಹಾಯ ಮಾಡುತ್ತದೆʼʼ ಎಂದು ಹೇಳಿದ್ದಾರೆ.

ʼಹೀರಾಮಂಡಿ: ಡೈಮಂಡ್ ಬಜಾರ್ʼ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚೊಚ್ಚಲ ವೆಬ್ ಸೀರಿಸ್‌. ಇದು 2024ರಲ್ಲಿ ಬಹು ನಿರೀಕ್ಷಿತ ಸರಣಿಗಳಲ್ಲಿ ಒಂದಾಗಿದೆ. ಸ್ವಾತಂತ್ರ್ಯಪೂರ್ವ ಭಾರತಲ್ಲಿ ನಡೆಯುವ ಘಟನೆ ಇದಾಗಿದೆ. ಅಂತಿಮ ಎಳೆಯನ್ನು ತವೈಫ್‌ಗಳ ಕಲೆಯನ್ನು ಹಿಡಿದಿಟ್ಟುಕೊಳ್ಳುವ (ಮುಜ್ರಾ) ಪರೀಕ್ಷೆಗೆ ಒಳಪಡಿಸಲಾಗಿದೆ.

ನೆಟ್‌ಫ್ಲಿಕ್ಸ್‌ನ ಏಪ್ಯಾಕ್ ಮಾರ್ಕೆಟಿಂಗ್ ಪಾಲುದಾರಿಕೆಯ ಹಿರಿಯ ನಿರ್ದೇಶಕಿ ಶಿಲ್ಪಾ ಸಿಂಗ್ ಮಾತನಾಡಿ, “ಸಂಜಯ್ ಲೀಲಾ ಬನ್ಸಾಲಿ ಅವರ ಕಥೆಗಳಲ್ಲಿನ ವೇಷಭೂಷಣಗಳು ಮುಖ್ಯ ಪಾತ್ರ ವಹಿಸುತ್ತವೆ. ಕಥಾಹಂದರಕ್ಕೆ ಇನ್ನಷ್ಟು ಗಟ್ಟಿತನವನ್ನು ಸೇರಿಸುತ್ತವೆ. ʼಹೀರಾಮಂಡಿ: ಡೈಮಂಡ್ ಬಜಾರ್ʼ ಹಿಂದೆಂದೂ ನೋಡಿರದ ಕೆಲವು ಸಾಂಪ್ರದಾಯಿಕ ಶೈಲಿಗಳು ಮತ್ತು ಫ್ಯಾಷನ್‌ಗಳನ್ನು ಹೊಂದಿರುತ್ತದೆ. ʼಹೀರಾಮಂಡಿʼಯಿಂದ ಪ್ರೇರಿತವಾದ ಅಜಿಯೋ ಹೌಸ್ ಆಫ್ ಎಥ್ನಿಕ್ಸ್‌ನಿಂದ ಹೊಸ ಮತ್ತು ವಿಶೇಷ ಸಂಗ್ರಹವನ್ನು ಈ ಸಹಯೋಗವು ತರುತ್ತದೆʼʼ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Mens Neck Chains Fashion: ಹುಡುಗರ ಕ್ರೇಜಿ ಫ್ಯಾಷನ್‌ಗೆ ಬಂತು ಫಂಕಿ ನೆಕ್‌ ಚೈನ್ಸ್‌

ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಬಿಬಾ (BIBA), ಇಂಡಿ ಪಿಕ್ಸ್, ನೈರಿಕಾ (Nyrika), ಆರ್ಕೆ ರಿತು ಕುಮಾರ್, ಸತ್ಯ ಪಾಲ್, ರಿ-ವಾಹ್, ಗ್ಲೋಬಲ್ ದೇಸಿ, ಗುಲ್ಮೊಹರ್ ಜೈಪುರ್, ಸೋಚ್ ಮತ್ತು ಫ್ಯಾಬಿಂಡಿಯಾದಂತಹ ಉನ್ನತ ಸಾಂಪ್ರದಾಯಿಕ ದಿರಿಸುಗಳ ಬ್ರಾಂಡ್‌ಗಳನ್ನು ಹೊಂದಿರುವ ಕ್ಯುರೇಟೆಡ್ ಸ್ಟೋರ್ ಆಗಿದೆ. 3 ಲಕ್ಷಕ್ಕೂ ಹೆಚ್ಚು ಸ್ಟೈಲ್‌ಗಳೊಂದಿಗೆ ಅಜಿಯೋ ಹೌಸ್ ಆಫ್ ಎಥ್ನಿಕ್ಸ್ ಸಾಂಪ್ರದಾಯಿಕ ದಿರಿಸುಗಳ ಫ್ಯಾಷನ್‌ಗಾಗಿ ಭಾರತದ ಆದ್ಯತೆಯ ತಾಣವಾಗಿದೆ. ʼಹೀರಾಮಂಡಿ: ದಿ ಡೈಮಂಡ್ ಬಜಾರ್ʼ ಮೇ 1ರಂದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಆಗಲಿದೆ.

Continue Reading
Advertisement
deadly murder
Latest18 mins ago

Deadly Murder: ಬರ್ಗರ್‌ ತಿಂದನೆಂದು ಸ್ನೇಹಿತನನ್ನೇ ಗುಂಡಿಟ್ಟು ಕೊಂದ!

Chemistry paper leak case
ಕೋರ್ಟ್19 mins ago

Chemistry paper leak : ದ್ವಿತೀಯ ಪಿಯು ರಸಾಯನಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ; 17 ಆರೋಪಿಗಳು ಖುಲಾಸೆ

Ranji Trophy
ಪ್ರಮುಖ ಸುದ್ದಿ41 mins ago

Ranji Trophy : ರಣಜಿ ಟ್ರೋಫಿ ಆಡುವವರಿಗೆ ಇನ್ನು ಮುಂದೆ ಒಂದು ಕೋಟಿ ರೂ. ವೇತನ!

Fire Tragedy
ದೇಶ58 mins ago

Fire Tragedy: ಹೋಟೆಲ್‌ನಲ್ಲಿ ಭೀಕರ ಅಗ್ನಿ ದುರಂತ; 6 ಮಂದಿ ಸಾವು

World Malaria Day April 25
ಆರೋಗ್ಯ1 hour ago

World Malaria Day: ಮಲೇರಿಯಾದಿಂದ ಮಕ್ಕಳನ್ನು ರಕ್ಷಿಸಿಕೊಳ್ಳುವುದು ಹೇಗೆ?

Bismah Maroof
ಕ್ರೀಡೆ1 hour ago

Bismah Maroof : ಹೆಣ್ಣು ಮಗುವಿನ ಸಮೇತ ಆಡಲು ಹೋಗುತ್ತಿದ್ದ ಪಾಕಿಸ್ತಾನದ ಮಹಿಳಾ ಕ್ರಿಕೆಟರ್ ನಿವೃತ್ತಿ

Modi in Karnataka Pm Modi to visit Karnataka on April 28 and 29 Raichur conference maybe cancelled
Lok Sabha Election 20241 hour ago

Modi in Karnataka: ಏಪ್ರಿಲ್‌ 28 – 29ರಂದು ರಾಜ್ಯಕ್ಕೆ ಮೋದಿ; ರಾಯಚೂರು ಸಮಾವೇಶ ರದ್ದು?

Lok Sabha Election
ಕರ್ನಾಟಕ1 hour ago

Lok Sabha Election: ನಾಳೆ ಮೊದಲ ಹಂತದ ಮತದಾನ; ಬೆಂಗಳೂರಿನಲ್ಲಿ ಏನಿರತ್ತೆ? ಏನಿರಲ್ಲ?

KKR vs PBKS
ಕ್ರೀಡೆ1 hour ago

KKR vs PBKS: ಪಂಜಾಬ್​ಗೆ ಮಸ್ಟ್​ ವಿನ್​ ಗೇಮ್; ಕೆಕೆಆರ್​ ಎದುರಾಳಿ

IPL 2024
ಕ್ರೀಡೆ1 hour ago

IPL 2024 : ಸಾಯಿ ಕಿಶೋರ್ ನಿಂದನೆ; ರಸಿಕ್ ಸಲಾಂಗೆ ಪಾಠ ಕಲಿಸಿದ ಜಯ್​ ಶಾ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Neha Murder Case in hubblli
ಹುಬ್ಬಳ್ಳಿ2 hours ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 hours ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ5 hours ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20247 hours ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ2 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು3 days ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ3 days ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು3 days ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು3 days ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

ಟ್ರೆಂಡಿಂಗ್‌