Site icon Vistara News

HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ನಿಶ್ಚಿತ ಠೇವಣಿಯ ಬಡ್ಡಿ ದರ ಏರಿಕೆ, ಹಿರಿಯ ನಾಗರಿಕರಿಗೆ 7.75%

hdfc bank

ನವ ದೆಹಲಿ: ದೇಶದ ಪ್ರಮುಖ ಖಾಸಗಿ ಬ್ಯಾಂಕ್‌ ಎಚ್‌ಡಿಎಫ್‌ಸಿ ನಿಶ್ಚಿತ ಠೇವಣಿಗೆ ನೀಡುವ (Fixed deposit) ಬಡ್ಡಿ ದರವನ್ನು ಏರಿಸಿದೆ.

ಜನವರಿ 24ರಿಂದಲೇ ಪರಿಷ್ಕೃತ ಬಡ್ಡಿ ದರ ಅನ್ವಯವಾಗಲಿದೆ. ಬ್ಯಾಂಕ್‌ ಈಗ 7 ದಿನಗಳಿಂದ 10 ವರ್ಷದ ತನಕದ ಅವಧಿಯ ನಿಶ್ಚಿತ ಠೇವಣಿಗೆ ಬಡ್ಡಿ ದರವನ್ನು ಸಾರ್ವಜನಿಕರಿಗೆ ೩.೦೦%ರಿಂದ ೭.೦೦% ತನಕ ಏರಿಸಿದೆ. ಹಿರಿಯ ನಾಗರಿಕರಿಗೆ 5 ವರ್ಷಗಳ ಅವಧಿಯ ಠೇವಣಿಗೆ 7.75%ರ ಗರಿಷ್ಠ ಬಡ್ಡಿ ದರವನ್ನು ನಿಗದಿಪಡಿಸಿದೆ.

ಎಚ್‌ಡಿಎಫ್‌ಸಿ ಬ್ಯಾಂಕ್‌ 2 ಕೋಟಿ ರೂ.ಗಿಂತ ಕೆಳಗಿನ ಠೇವಣಿಗೆ ಈ ಬಡ್ಡಿ ದರಗಳನ್ನು ನೀಡಲಿದೆ. 7-29 ದಿನಗಳಿಗೆ 3% ಬಡ್ಡಿ ನೀಡಲಿದೆ. 30-45 ದಿನಗಳಿಗೆ 3.50% ಬಡ್ಡಿ ಒದಗಿಸಲಿದೆ. 1 ವರ್ಷದಿಂದ 15 ತಿಂಗಳಿನ ಅವಧಿಯ ಠೇವಣಿಗೆ 6.60% ಬಡ್ಡಿ ನೀಡಲಿದೆ. ಸಾಮಾನ್ಯ ನಾಗರಿಕರಿಗೆ 15 ತಿಂಗಳುಗಳಿಂದ 10 ವರ್ಷ ಅವಧಿಯ ಠೇವಣಿಗೆ 7.00% ಬಡ್ಡಿ ಒದಗಿಸಲಿದೆ.

Exit mobile version