Site icon Vistara News

HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ಗೃಹ ಸಾಲ ಬಡ್ಡಿ ದರ ಏರಿಕೆ, ಹೊಸ ರೇಟ್‌ ಎಷ್ಟಿದೆ?

HDFC BANK

HDFC-HDFC Bank July 1 marks HDFC merger, Deepak Parekh

ನವ ದೆಹಲಿ: ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಗೃಹ ಸಾಲದ ಬಡ್ಡಿ ದರವನ್ನು ( HDFC Bank) ಏರಿಸಿದೆ. ಬ್ಯಾಂಕ್‌ ತನ್ನ ಎಂಸಿಎಲ್‌ಆರ್‌ (Marginal Cost Based Lending Rate) ದರವನ್ನು 0.15% ತನಕ ವೃದ್ಧಿಸಿದೆ. 2023ರ ಮೇ 8 ರಿಂದ ಪರಿಷ್ಕೃತ ದರಗಳು ಜಾರಿಯಾಗಿದೆ. (Latest HDFC Bank rates)

ಎಚ್‌ಡಿಎಫ್‌ಸಿ ಬ್ಯಾಂಕ್‌ ವೆಬ್‌ಸೈಟ್‌ ಪ್ರಕಾರ ಈಗ ಎಂಸಿಎಲ್‌ಆರ್‌ ದರ 7.80%ರಿಂದ 7.95%ಕ್ಕೆ ಏರಿಕೆಯಾಗಿದೆ. ಒಂದು ತಿಂಗಳಿನ ಅವಧಿಯ ಎಂಸಿಎಲ್‌ಆರ್‌ 7.95%ರಿಂದ 8.10%ಕ್ಕೆ ವೃದ್ಧಿಸಿದೆ. ಮೂರು ತಿಂಗಳು ಮತ್ತು 6 ತಿಂಗಳಿನ ಎಂಸಿಎಲ್‌ಆರ್‌ 8.40% ಮತ್ತು 8.80% ಆಗಿದೆ.

ಒಂದು ವರ್ಷದ ಎಂಸಿಎಲ್‌ಆರ್‌ ಈಗ 8.95%ರಿಂದ 9.05% ಆಗಿದೆ. ಎರಡು ವರ್ಷದ ಎಂಸಿಎಲ್‌ಆರ್‌ 9.10% ಆಗಿದೆ. ಮೂರು ವರ್ಷದ ಎಂಸಿಎಲ್‌ಆರ್‌ 9.20% ಆಗಿದೆ.

2023, ಮೇ 8. 2023
ಅವಧಿಎಂಸಿಎಲ್‌ಆರ್
1 ದಿನ7.95%
1 ತಿಂಗಳು8.10%
3 ತಿಂಗಳು8.40%
6 ತಿಂಗಳು8.80%
1 ವರ್ಷ9.05%
2 ವರ್ಷ9.10%
3 ವರ್ಷ9.20%

ಎಚ್‌ಡಿಎಫ್‌ಸಿ ಬ್ಯಾಂಕ್‌ ಬೇಸ್‌ ರೇಟ್‌, ಬಿಪಿಎಲ್‌ಆರ್:

ಎಚ್‌ಡಿಎಫ್‌ಸಿ ಬ್ಯಾಂಕ್‌ನ ಪರಿಷ್ಕೃತ ಮೂಲ ದರ (base rate) 9.15% ಆಗಿದ್ದು 2023ರ ಮಾರ್ಚ್‌ 07ರಿಂದ ಅನ್ವಯವಾಗಲಿದೆ.

ಇದನ್ನೂ ಓದಿ: HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಬಡ್ಡಿ ಇಳಿಕೆ, ಸಾಲಗಾರರಿಗೆ ನಿರಾಳ

Exit mobile version