Site icon Vistara News

HDFC Bank : ಎಚ್‌ಡಿಎಫ್‌ಸಿ ಬ್ಯಾಂಕ್‌ ಸಾಲದ ಬಡ್ಡಿ ಇಳಿಕೆ, ಸಾಲಗಾರರಿಗೆ ನಿರಾಳ

Stock market fells and HDFC Bank Wipes Off Rs 93,000 Crore In Market Value

ಮುಂಬಯಿ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಎಂಸಿಎಲ್‌ಆರ್‌ (Marginal cost based lending rate -MCLR) ದರವನ್ನು 0.85%ರಷ್ಟು ಕಡಿತಗೊಳಿಸಿದೆ. ಏಪ್ರಿಲ್‌ 10ರಿಂದ ಪರಿಷ್ಕೃತ ಬಡ್ಡಿ ದರಗಳು ಅನ್ವಯಿಸಲಿವೆ. ಬ್ಯಾಂಕಿನ ಓವರ್‌ನೈಟ್ ಎಂಸಿಎಲ್‌ಆರ್‌ ದರ 8.65%ರಿಂದ 7.95%ಕ್ಕೆ ಇಳಿಕೆಯಾಗಿದೆ. ಒಂದು ತಿಂಗಳಿನ ಎಂಸಿಎಲ್‌ಆರ್‌ ದರವು 8.65%ರಿಂದ 7.95%ಕ್ಕೆ ತಗ್ಗಿದೆ. (HDFC Bank) ಮೂರು ತಿಂಗಳಿನ ಎಂಸಿಎಲ್‌ಆರ್‌ ದರದಲ್ಲಿ 0.40% ಕಡಿತವಾಗಿದ್ದು, 8.30%ಕ್ಕೆ ತಗ್ಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌ನ 6 ತಿಂಗಳಿನ ಎಂಸಿಎಲ್‌ಆರ್‌ 8.80%ರಿಂದ 8.7%ಕ್ಕೆ ಇಳಿಕೆಯಾಗಿದೆ.

ಅವಧಿ2023ರ ಮಾರ್ಚ್‌ ಎಂಸಿಎಲ್‌ಆರ್‌2023ರ ಏಪ್ರಿಲ್‌ 10ರಿಂದ
1 ತಿಂಗಳು8.65%7.95%
3 ತಿಂಗಳು8.70%8.30%
6 ತಿಂಗಳು8.80%8.70%
1 ವರ್ಷ8.95%8.85%
2 ವರ್ಷ9.05%9.55%
3 ವರ್ಷ9.15%9.15%

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಳೆದ ಏಪ್ರಿಲ್‌ 6ರಂದು ತನ್ನ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ರೆಪೊ ದರವನ್ನು 6.5%ರ ಯಥಾಸ್ಥಿತಿಯಲ್ಲಿ ಇರಿಸಿತ್ತು.

ಏನಿದು ಎಂಸಿಎಲ್‌ಆರ್‌ ಹಾಗೂ ಸಾಲದ ಮೇಲೆ ಪರಿಣಾಮವೇನು?

ಮಾರ್ಜಿನಲ್‌ ಕಾಸ್ಟ್‌ ಬೇಸ್ಡ್‌ ಲೆಂಡಿಂಗ್‌ ರೇಟ್‌ (MCLR) ಎಂದರೆ ಬ್ಯಾಂಕಿಗೆ ಸಾಲ ವಿತರಣೆಗೆ ತಗಲುವ ಕನಿಷ್ಠ ವೆಚ್ಚ. ಸಾಲದ ಕನಿಷ್ಠ ಬಡ್ಡಿ ದರವನ್ನು ಇದು ಬಿಂಬಿಸುತ್ತದೆ. ಠೇವಣಿ ದರ, ರೆಪೊ ದರ, ನಿರ್ವಹಣಾ ವೆಚ್ಚ, ನಗದು ಮೀಸಲು ಅನುಪಾತವನ್ನು ಆಧರಿಸಿ ಎಂಸಿಎಲ್‌ಆರ್‌ ನಿರ್ಧಾರಿತವಾಗುತ್ತದೆ. ರೆಪೊ ದರದಲ್ಲಿನ ಬದಲಾವಣೆಗಳು ಎಂಸಿಎಲ್‌ಆರ್‌ ದರವನ್ನು ಪ್ರಭಾವಿಸುತ್ತದೆ. ಎಂಸಿಎಲ್‌ಆರ್‌ ಆಧಾರಿತ ಗೃಹ, ವಾಹನ , ಕಾರ್ಪೊರೇಟ್‌ ಸಾಲಗಳಿವೆ. ರೆಪೊ ದರ ಆಧರಿತ ಸಾಲಗಳೂ ಇವೆ. ಇವೆರಡನ್ನು ಹೋಲಿಸಿ ಆಯ್ಕೆ ಮಾಡುವುದು ಸೂಕ್ತ.

Exit mobile version