Site icon Vistara News

HDFC Home loan | ಎಚ್‌ಡಿಎಫ್‌ಸಿ ಗೃಹ ಸಾಲ ಬಡ್ಡಿ ದರದಲ್ಲಿ 0.35% ಏರಿಕೆ

HDFC BANK

HDFC-HDFC Bank July 1 marks HDFC merger, Deepak Parekh

ನವ ದೆಹಲಿ: ಹೌಸಿಂಗ್‌ ಡೆವಲಪ್‌ಮೆಂಟ್‌ ಫೈನಾನ್ಸ್‌ ಕಾರ್ಪೊರೇಷನ್‌ ಲಿಮಿಟೆಡ್‌ (HDFC) ತನ್ನ ಗೃಹ ಸಾಲ ಬಡ್ಡಿ ದರದಲ್ಲಿ 0.35% ಏರಿಸಿದೆ.

ಬ್ಯಾಂಕ್‌ ತನ್ನ ರಿಟೇಲ್‌ ಪ್ರೈಮ್‌ ಲೆಂಡಿಂಗ್‌ ರೇಟ್‌ ( RPLR) ಅನ್ನು ಏರಿಸಿದ್ದು, 2022ರ ಡಿಸೆಂಬರ್‌ 20ರಿಂದ ಅನ್ವಯವಾಗುತ್ತದೆ. ಎಚ್‌ಡಿಎಫ್‌ಸಿಯಲ್ಲಿ 800 ಮತ್ತು ಹೆಚ್ಚು ಸ್ಕೋರ್‌ ಇರುವ ಹೊಸ ಗೃಹ ಸಾಲಗಾರರು 8.65% ಬಡ್ಡಿ ದರವನ್ನು ನೀಡಬೇಕಾಗುತ್ತದೆ.

ಬ್ಯಾಂಕ್‌ನಿಂದ ಗೃಹ ಸಾಲ ಪಡೆಯುವವರು ಎರಡು ಮಾದರಿಯ ಆಯ್ಕೆಯನ್ನು ಪಡೆಯಬಹುದು. ಫ್ಲೋಟಿಂಗ್‌ ಅಥವಾ ವ್ಯತ್ಯಾಸವಾಗುವ Adjustable rate home loan (ARHL) ಹಾಗೂ TruFixed Loan (ಟ್ರೂ ಫಿಕ್ಸೆಡ್‌ ಲೋನ್)‌ ವಿಧದಲ್ಲಿ ಪಡೆಯಬಹುದು. ಟ್ರೂ ಫಿಕ್ಸೆಡ್‌ ಮಾದರಿಯಲ್ಲಿ 2-3 ವರ್ಷಗಳ ಅವಧಿಗೆ ನಿಶ್ಚಿತ ಬಡ್ಡಿ ದರವನ್ನು ಗಳಿಸಬಹುದು. ಎಚ್‌ಡಿಎಫ್‌ಸಿಯು ಪ್ರಸ್ತುತ 2-3 ವರ್ಷಗಳ ಅವಧಿಗೆ ಟ್ರೂ ಫಿಕ್ಸೆಡ್‌ ಬಡ್ಡಿ ದರವನ್ನು ನೀಡುತ್ತದೆ.

ರಿಸರ್ವ್‌ ಬ್ಯಾಂಕ್‌ ಕಳೆದ ಡಿಸೆಂಬರ್‌ 7ರಂದು ತನ್ನ ರೆಪೊ ದರವನ್ನು 6.25%ಕ್ಕೆ ಏರಿಸಿದ ಬಳಿಕ ಹಲವಾರು ಬ್ಯಾಂಕ್‌ಗಳು ತಮ್ಮ ಸಾಲದ ದರಗಳನ್ನು ಪರಿಷ್ಕರಿಸಿವೆ.

Exit mobile version