ಚಂಡೀಗಢ: ದೇಶದಲ್ಲಿ ಉತ್ಪಾದನೆಯಾಗುವ ಬಸ್ಮತಿಅಕ್ಕಿಯಲ್ಲಿ 60% ಪಾಲು ಹರಿಯಾಣದಿಂದ ಬರುತ್ತಿದೆ. ಆದರೆ ಹರಿಯಾಣದಲ್ಲಿ ಈ ವರ್ಷ ಭಾರಿ ಮಳೆಯಾಗಿರುವ ಪರಿಣಾಮ ಬಾಸ್ಮತಿ (Basmati rice) ಬೆಳೆಗೆ ಹಾನಿಯಾಗಿದ್ದು, ಅಕ್ಕಿಯ ದರದಲ್ಲಿ ಗಣನೀಯ ಏರಿಕೆಯಾಗುವ ಸಾಧ್ಯತೆ ಇದೆ.
ಎಲ್ಲ ವಿಧದ ಅಕ್ಕಿಯ ದರಗಳು ಏರಿಕೆಯಾಗಿರುವ ಸಂದರ್ಭದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದ ಅಕ್ಕಿಯ ಗುಣಮಟ್ಟ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ.
ಹರಿಯಾಣದಲ್ಲಿ ಭಾರಿ ಮಳೆಯ ಪರಿಣಾಮ ಬಾಸ್ಮತಿ ಬೆಲೆಗೆ ಹಾನಿಯಾಗಿದೆ ಎಂದು ಆಲ್ ಇಂಡಿಯಾ ರೈಸ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಶನ್‌ನ ಕಾರ್ಯಕಾರಿ ನಿರ್ದೇಶಕ ವಿನೋದ್ ಕೌಲ್ ತಿಳಿಸಿದ್ದಾರೆ.
ಹರಿಯಾಣದ ಸೋನಿಪತ್‌ನಿಂದ ಕರ್ನಾಲ್, ಕುರುಕ್ಷೇತ್ರ ಮತ್ತು ಅಂಬಾಲದಲ್ಲಿ ಈ ವರ್ಷ ಅತಿ ವೃಷ್ಟಿ ಸಂಭವಿಸಿದ್ದು, ಬಾಸ್ಮತಿ ಬೆಳೆ ಹಾನಿ ಉಂಟಾಗಿದೆ. ಭಾರತ ವಾರ್ಷಿಕ 85-90 ಲಕ್ಷ ಟನ್ ಬಾಸ್ಮತಿ ಅಕ್ಕಿ ಉತ್ಪಾದಿಸುತ್ತದೆ. 2021-22ರಲ್ಲಿ ಅಮೆರಿಕ, ಇರಾನ್, ಇರಾಕ್, ಸೌದಿ ಅರೇಬಿಯಾ, ಯೆಮೆನ್‌ಗೆ 39 ಲಕ್ಷ ಟನ್ ಬಾಸ್ಮತಿ ಅಕ್ಕಿ ರಫ್ತಾಗಿತ್ತು.