ಮುಂಬಯಿ: ಹಿಂದೂಜಾ ಗ್ರೂಪ್‌ನ 14 ಶತಕೋಟಿ ಡಾಲರ್ (ಅಂದಾಜು 1.13 ಲಕ್ಷ ಕೋಟಿ ರೂ.) ಮೌಲ್ಯದ ಉದ್ದಿಮೆ ಸಾಮ್ರಾಜ್ಯದ ವಿಭಜನೆಗೆ ( Hinduja Group) ಇದೇ ನವೆಂಬರ್‌ನಲ್ಲಿ ಗಡುವು ಸಮೀಪಿಸಿದೆ.
ಹಿಂದೂಜಾ ಗ್ರೂಪ್‌ನ ಕುಟುಂಬದ ನಾಲ್ವರು ಸಹೋದರರಾದ ಎಸ್‌ಪಿ, ಜಿಪಿ, ಅಶೋಕ್ ಮತ್ತು ಪ್ರಕಾಶ್ ನಡುವೆ ಉದ್ದಿಮೆ ಸಾಮ್ರಾಜ್ಯ ಪಾಲಾಗಲಿದೆ. ಬ್ರಿಟನ್‌ನ ಸಿರಿವಂತ ಆಂಗ್ಲೋ-ಇಂಡಿಯನ್ ಬಿಸಿನೆಸ್ ಮನೆತನ ಇದಾಗಿದೆ. ಲಂಡನ್, ಮುಂಬಯಿ ಮತ್ತು ಜಿನೇವಾದಲ್ಲಿ ಹಿಂದೂಜಾ ಕುಟುಂಬದ ಮನೆಗಳಿವೆ. 40 ದೇಶಗಳಲ್ಲಿ 1.50 ಲಕ್ಷ ಉದ್ಯೋಗಿಗಳಿದ್ದಾರೆ. ಭಾರತದಲ್ಲಿ 6 ಕಂಪನಿಗಳು ಷೇರು ವಿನಿಮಯ ಕೇಂದ್ರದಲ್ಲಿ ನೋಂದಣಿಯಾಗಿವೆ. ಅಶೋಕ್ ಲೇಲ್ಯಾಂಡ್ ಜಗತ್ತಿನಲ್ಲೇ ಮೂರನೇ ಅತಿ ದೊಡ್ಡ ಬಸ್ ಉತ್ಪಾದಕ ಕಂಪನಿಯಾಗಿದೆ.
ಕಳೆದೊಂದು ವರ್ಷದಿಂದ ಹಿಂದೂಜಾ ಮನೆತನದಲ್ಲಿ ಉದ್ದಿಮೆಗಳ ವಿಭಜನೆಗೆ ಸಂಬಂಧಿಸಿ ಕೌಟುಂಬಿಕ ವಿವಾದ ಉಂಟಾಗಿತ್ತು. ಅದು ಈಗ ಇತ್ಯರ್ಥವಾಗಿದೆ.