ಬೆಂಗಳೂರು: ಇ-ಕಾಮರ್ಸ್ ದಿಗ್ಗಜ ಫ್ಲಿಪ್ ಕಾರ್ಟ್ (Flipkart service) ಗೃಹ ಬಳಕೆಯ ಉಪಕರಣಗಳ ದುರಸ್ತಿ, ನಿರ್ವಹಣೆ ಮತ್ತು ಅನುಷ್ಠಾನದ ಸೇವೆಯನ್ನು ಆರಂಭಿಸಿದೆ.
ದೇಶಾದ್ಯಂತ ಒಟ್ಟು 19,000 ಪಿನ್ ಕೋಡ್‌ಗಳಲ್ಲಿ ಫ್ಲಿಪ್ ಕಾರ್ಟ್‌ನ ಈ ಸೇವೆಯು ಗ್ರಾಹಕರ ಮನೆ ಬಾಗಿಲಿಗೆ ಲಭಿಸಲಿದೆ.
ಉತ್ಪನ್ನಗಳನ್ನು ಫ್ಲಿಪ್ ಕಾರ್ಟ್ ತೆಗೆದುಕೊಂಡು ದುರಸ್ತಿಗೊಳಿಸಿ ಮನೆ ಬಾಗಿಲಿಗೇ ಹಿಂತಿರುಗಿಸಲಿದೆ. ಕೆಲ ತಿಂಗಳಿನ ಹಿಂದೆ ಕಂಪನಿ ಪ್ರಾಯೋಗಿಕವಾಗಿ ಈ ಯೋಜನೆಗೆ ಚಾಲನೆ ನೀಡಿತ್ತು.
ಗ್ರಾಹಕರು ಫ್ಲಿಪ್ ಕಾರ್ಟ್ ಮಾತ್ರವಲ್ಲದೆ ಇತರ ಆನ್ ಲೈನ್ ಅಥವಾ ಆಫ್ ಲೈನ್ ವಿಧಾನದಲ್ಲಿ ಗೃಹೋಪಕರಣಗಳನ್ನು ಖರೀದಿಸಿದ್ದರೂ, ಫ್ಲಿಪ್ ಕಾರ್ಟ್ ಮೂಲಕ ರಿಪೇರಿ, ನಿರ್ವಹಣೆ ಸೇವೆಯನ್ನು ಪಡೆಯಬಹುದು.