ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI MPC Meet 2023) ಫೆ.8ರಂದು ರೆಪೊ ದರವನ್ನು 6.25%ರಿಂದ 6.50%ಕ್ಕೆ ಏರಿಸಿದೆ. (Home loan EMI Calculation) ಇದರ ಪರಿಣಾಮ ನಿಮ್ಮ ಗೃಹ ಸಾಲ ದುಬಾರಿಯಾಗಲಿದೆ. ಬಡ್ಡಿ ದರದಲ್ಲಿ ೦.೨೫% ಏರಿಕೆಯಾದರೆ, EMI ಮೊತ್ತದಲ್ಲಿ ಎಷ್ಟು ಹೆಚ್ಚಳವಾಗಲಿದೆ ಎಂಬುದಕ್ಕೆ ಇಲ್ಲಿದೆ ಲೆಕ್ಕಾಚಾರ.
ಸಾಲದ ಮೊತ್ತ (ಮೊತ್ತ ರೂ.ಗಳಲ್ಲಿ) | ವರ್ಷ | 8.25% EMI | 8.50% EMI | 8.50 EMI | 8.75% EMI | 8.75% EMI | 9.00% EMI |
2000000 | 20 | 17041 | 17356 | 17356 | 17674 | 17674 | 17995 |
3000000 | 20 | 25562 | 26035 | 26035 | 26511 | 26511 | 26992 |
4000000 | 20 | 34083 | 34713 | 34713 | 35348 | 35348 | 35989 |
ನಿಮ್ಮ ಗೃಹ ಸಾಲ 20 ಲಕ್ಷ ರೂ.ಗಳಾಗಿದ್ದು, ಇನ್ನೂ 20 ವರ್ಷಗಳ ಅವಧಿ ಹಾಗೂ 8.25% ಬಡ್ಡಿ ದರ ಇದೆ ಎಂದಿಟ್ಟುಕೊಳ್ಳಿ. ಅದು ಈಗ 8.50%ಕ್ಕೆ ಏರಲಿದೆ. ಇಎಂಐ 17,041 ರೂ.ಗಳಿಂದ 17,356 ರೂ.ಗೆ ಏರಿಕೆಯಾಗಲಿದೆ. 315 ರೂ. ಏರಿಕೆಯಾಗಲಿದೆ. ಬಡ್ಡಿ ದರ 8.50% ಇದ್ದರೆ, 8.75%ಕ್ಕೆ ಏರಿಕೆಯಾಗಲಿದೆ. ಇಎಂಐ 17356 ರೂ.ಗಳಿಂದ 17674 ರೂ.ಗೆ ಏರಿಕೆಯಾಗಲಿದೆ. ಅಂದರೆ 318 ರೂ. ಹೆಚ್ಚಳವಾಗಲಿದೆ. ಬಡ್ಡಿ 8.75%ರಿಂದ ೯%ಕ್ಕೆ ಏರಿದರೆ ಇಎಂಐ 35348 ರೂ.ಗಳಿಂದ 35989 ರೂ.ಗೆ ಏರಿಕೆಯಾಗಲಿದೆ. ಅಂದರೆ ೩೨೧ ರೂ. ಏರಿಕೆಯಾಗಲಿದೆ.