Site icon Vistara News

Home loan Interest| ಗೃಹ ಸಾಲ ಬಡ್ಡಿ ಏರಿಕೆ, ಡೆವಲಪರ್‌ಗಳಿಂದ ಡಿಸ್ಕೌಂಟ್‌ ನಿರೀಕ್ಷೆ

homeloan

ನವದೆಹಲಿ: ಆರ್‌ಬಿಐ ಹಣದುಬ್ಬರವನ್ನು ನಿಯಂತ್ರಿಸಲು ರೆಪೊ ದರವನ್ನು ಏರಿಸಿದ ಬೆನ್ನಲ್ಲೇ ಪ್ರಮುಖ ಬ್ಯಾಂಕ್‌ಗಳು ನಿರೀಕ್ಷೆಯಂತೆ ಗೃಹ ಸಾಲದ ಬಡ್ಡಿ ದರವನ್ನು (Home loan Interest) ಏರಿಸಿವೆ. ಮತ್ತೊಂದು ಕಡೆ ಗ್ರಾಹಕರನ್ನು ಸೆಳೆಯಲು ರಿಯಾಲ್ಟಿ ಡೆವಲಪರ್‌ಗಳು ಡಿಸ್ಕೌಂಟ್‌ಗಳನ್ನು, ವಿನಾಯಿತಿ ಮತ್ತು ಕೆಲ ಕೊಡುಗೆಗಳನ್ನು ಘೋಷಿಸುವ ನಿರೀಕ್ಷೆಯೂ ಉಂಟಾಗಿದೆ. ಐಸಿಐಸಿಐ ಬ್ಯಾಂಕ್‌, ಎಚ್‌ಡಿಎಫ್‌ಸಿ, ಬ್ಯಾಂಕ್‌ ಆಫ್‌ ಬರೋಡಾ, ಕೆನರಾ ಬ್ಯಾಂಕ್‌ ಈಗಾಗಲೇ ಗೃಹ ಸಾಲ ಬಡ್ಡಿದರವನ್ನು ಏರಿಸಿವೆ.

ಐಸಿಐಸಿಐ ಬ್ಯಾಂಕ್:‌ ಆರ್‌ಬಿಐ ರೆಪೊ ದರ ಏರಿಸಿದ ಕೆಲ ಗಂಟೆಗಳಲ್ಲಿಯೇ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್‌ ಐಸಿಐಸಿಐ ಬ್ಯಾಂಕ್‌ ತನ್ನ External benchmark lending rate (EBLR) ಅನ್ನು 9.10%ಕ್ಕೆ ಏರಿಸಿದೆ. EBLR ಏರಿಕೆಯ ಪರಿಣಾಮ ಇಎಂಐಗಳ ಸಂಖ್ಯೆ ಹೆಚ್ಚಲಿದೆ. ಉದಾಹರಣೆಗೆ ೩೦ ಲಕ್ಷ ರೂ. ಗೃಹ ಸಾಲದ ಬಡ್ಡಿ ದರ ೮.೬೦% ರಿಂದ ೯.೧೦%ಕ್ಕೆ ಏರಿಕೆಯಾದಾಗ, ಇಎಂಐನಲ್ಲಿ ೯೬೦ ರೂ. ಏರಿಕೆಯಾಗಲಿದೆ. ಬ್ಯಾಂಕ್‌ಗಳು ಸಾಮಾನ್ಯವಾಗಿ ತಾವಾಗಿಯೇ ಇಎಂಐ ಮೊತ್ತವನ್ನು ಏರಿಸುವುದಿಲ್ಲ. ಬದಲಿಗೆ ಇಎಂಐ ಸಂಖ್ಯೆಯನ್ನು ಹೆಚ್ಚಿಸುತ್ತವೆ.

ಗೃಹ ಸಾಲ ವಿವರಮೊತ್ತ
ಸಾಲದ ಮೊತ್ತ (ರೂ.ಗಳಲ್ಲಿ)30 ಲಕ್ಷ ರೂ.
ಹಳೆಯ ಬಡ್ಡಿ ದರ8.60%
ಅವಧಿ20 ವರ್ಷಗಳು
ಇಎಂಐ (ರೂ.ಗಳಲ್ಲಿ)26,225 ರೂ.
ಹೊಸ ಬಡ್ಡಿ ದರ9.10%
ಹೊಸ ಇಎಂಐ27,185 ರೂ.
ಇಎಂಐನಲ್ಲಿ ಏರಿಕೆ960 ರೂ.

ಎಚ್‌ಡಿಎಫ್‌ಸಿ ಬಡ್ಡಿ ದರ ಏರಿಕೆ: ಎಚ್‌ಡಿಎಫ್‌ಸಿ ಬ್ಯಾಂಕ್‌ ತನ್ನ ಗೃಹ ಸಾಲ ಬಡ್ಡಿ ದರದಲ್ಲಿ 0.25% ಏರಿಸಿದ್ದು, ಆಗಸ್ಟ್‌ ೯ರಿಂದ ಜಾರಿಯಾಗಿದೆ. ಈ ವರ್ಷ ಮೇನಿಂದ ಬ್ಯಾಂಕ್‌ ಸಾಲದ ಬಡ್ಡಿ ದರದಲ್ಲಿ ೧.೪೦% ಹೆಚ್ಚಳ ಮಾಡಿದೆ. ಇದರೊಂದಿಗೆ ಆರ್‌ಬಿಐ ರೆಪೊ ದರದ ಹೆಚ್ಚಳದ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರಿಗೆ ವರ್ಗಾಯಿಸಿದೆ. ಹೊಸ ಸಾಲಗಾರರಿಗೆ ಗೃಹ ಸಾಲದ ಬಡ್ಡಿ ದರ ೮.೦೫%ರಿಂದ ೮.೫೫%ಕ್ಕೆ ಏರಿಕೆಯಾಗಿದೆ.

ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಬಡ್ಡಿ ದರ ಹೆಚ್ಚಳ: ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಗೃಹ ಸಾಲದ ಬಡ್ಡಿ ದರ ೭.೯೫%-೯.೩೦% ಶ್ರೇಣಿಯಲ್ಲಿ ಏರಿಕೆಯಾಗಿದೆ.

ಕೆನರಾ ಬ್ಯಾಂಕ್‌ ಸಾಲ ದುಬಾರಿ: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ತನ್ನ ಗೃಹ ಸಾಲದ ಬಡ್ಡಿ ದರವನ್ನು ೭.೮೦%ರಿಂದ ೮.೦೫%ಕ್ಕೆ ಏರಿಕೆ ಮಾಡಿದೆ.

ಡೆವಲಪರ್‌ಗಳಿಂದ ಡಿಸ್ಕೌಂಟ್‌ ನಿರೀಕ್ಷೆ: ಗೃಹ ಸಾಲ ಬಡ್ಡಿ ದರ ಏರಿಕೆಯ ಪರಿಣಾಮ ಅದಕ್ಕೆ ಬೇಡಿಕೆ ಕುಸಿಯುವ ಸಾಧ್ಯತೆ ಇದೆ. ಹೀಗಾಗಿ ಗ್ರಾಹಕರನ್ನು ಆಕರ್ಷಿಸಲು ರಿಯಾಲ್ಟಿ ವಲಯದ ಡೆವಲಪರ್‌ಗಳು ಬಡ್ಡಿ ದರವನ್ನು ಏರಿಸುವ ನಿರೀಕ್ಷೆ ಇದೆ.

Exit mobile version