Site icon Vistara News

Home loan : SBI ಗೃಹ ಸಾಲ ಬಡ್ಡಿ ಏರಿಕೆ, ಸಾಲಗಾರರು ಏನು ಮಾಡಬಹುದು?

homeloan

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State bank of India -SBI) ತನ್ನ ಮಾರ್ಜಿನಲ್‌ ಕಾಸ್ಟ್‌ ಆಫ್‌ ಫಂಡ್ಸ್‌ ಬೇಸ್ಡ್‌ ಸಾಲದ ದರವನ್ನು (MCLR) ಅನ್ನು 5 ಬೇಸಿಸ್‌ ಅಂಕದಷ್ಟು ( 0.05%) ಏರಿಸಿದೆ. 2023ರ ಜುಲೈ 15ರಿಂದ ಇದು ಜಾರಿಯಾಗಲಿದೆ. ಎಸ್‌ಬಿಐ ವೆಬ್‌ಸೈಟ್‌ ಈ ವಿಷಯ ತಿಳಿಸಿದೆ. (cost based lending rate) ಎಂಸಿಎಲ್‌ಆರ್‌ ಬ್ಯಾಂಕ್‌ ಗ್ರಾಹಕರಿಗೆ ಕೊಡಬಹುದಾದ ಕನಿಷ್ಠ ಸಾಲ ಬಡ್ಡಿ ದರ.

ಎಸ್‌ಬಿಐನಲ್ಲಿ (SBI) ಎಂಸಿಎಲ್‌ಆರ್‌ ಈಗ 8% ಮತ್ತು 8.75% ನಡುವೆ ಇರಲಿದೆ. ಓವರ್‌ನೈಟ್‌ ಎಂಸಿಎಲ್‌ಆರ್‌ 8%ರಿಂದ 7.90% ತನಕ ನಿಗದಿಯಾಗಿದೆ. 1 ಮತ್ತು 3 ತಿಂಗಳಿನ ಎಂಸಿಎಲ್‌ಆರ್‌ 8.15%ಕ್ಕೆ ಏರಿದೆ. 6 ತಿಂಗಳಿನ ಎಂಸಿಎಲ್‌ಆರ್‌ 8.45%ಕ್ಕೆ ವೃದ್ಧಿಸಿದೆ. ಒಂದು ವರ್ಷದ MCLR 8.55%ಕ್ಕೆ ವೃದ್ಧಿಸಿದೆ. 2 ಮತ್ತು 3 ವರ್ಷದ ಎಂಸಿಎಲ್‌ಆ ಅನುಕ್ರಮವಾಗು 8.65% ಮತ್ತು 8.75%ಕ್ಕೆ ಏರಿಕೆಯಾಗಿದೆ.

ಅವಧಿಹಾಲಿ MCLR (%)ಪರಿಷ್ಕೃತ MCLR(%)
ದಿನ7.958
1 ತಿಂಗಳು8.18.15
3 ತಿಂಗಳು8.18.15
6 ತಿಂಗಳು8.48.45
1 ವರ್ಷ8.58.55
2 ವರ್ಷ8.68.65
3 ವರ್ಷ8.78.75

SBI EBLR/ RLLR: ಎಸ್‌ಬಿಐ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್‌ ರೇಟ್‌ (EBLR) ಯಥಾಸ್ಥಿತಿಯಲ್ಲಿದೆ. 9.15% ಹಾಗೂ RLLR 8.75% ದರದಲ್ಲಿದೆ.

ಬೇಸ್‌ ರೇಟ್:‌ ಎಸ್‌ಬಿಐ ಬೇಸ್‌ ರೇಟ್‌ 10.10% ಕ್ಕೆ ಪರಿಷ್ಕರಣೆಯಾಗಿದ್ದು, 2023ರ ಜೂನ್ 15ರಿಂದ ಜಾರಿಯಾಗಿದೆ. ಎಸ್‌ಬಿಐ ಬಿಪಿಎಲ್‌ಆರ್:‌ ಇದು ಜೂನ್‌ 15ರಿಂದ 14.85% ಇದೆ.

ಸಾಲಗಾರರು ಏನು ಮಾಡಬಹುದು? ಹೋಮ್ ಮೋರ್ಟಗೇಜ್‌ ಸಾಲಗಾರರಿಗೆ ಬಡ್ಡಿ ದರಗಳ ಮೇಲೆ ತಮ್ಮ ನಿಯಂತ್ರಣ ಇರುವುದಿಲ್ಲ. ಆದರೆ ಕನಿಷ್ಠ ಸೂಕ್ತ ಟರ್ಮ್ಸ್‌ ದೊರೆಯುವಂತೆ ನೋಡಿಕೊಳ್ಳಬಹುದು. ಬಡ್ಡಿ ದರಗಳು ಉನ್ನತ ಮಟ್ಟದಲ್ಲಿ (loan base rate) ಇದ್ದಾಗ ಬಹುತೇಕ ಸಾಲಗಾರರು ಹೆಚ್ಚಿನ ಬಡ್ಡಿ ನೀಡಬೇಕಾಗುತ್ತದೆ. ಕಳೆದ ಮೂರು ವರ್ಷಗಳಿಂದ ಬಡ್ಡಿ ದರ ಉನ್ನತ ಮಟ್ಟದಲ್ಲಿದೆ. ಹೀಗಿದ್ದರೂ ಹಳೆ ಸಾಲಗಾರರು ನೂತನ EBLR ಪದ್ಧತಿಗೆ ಬದಲಾಗುವುದು ಸೂಕ್ತ ಎನ್ನುತ್ತಾರೆ ತಜ್ಞರು. ಎಂಸಿಎಲ್‌ಆರ್‌ ಅಥವಾ ಬೇಸ್‌ ರೇಟ್‌ ರಿಜಿಮ್‌ಗಿಂತ ಇದು ಸೂಕ್ತ ಎನ್ನಲಾಗುತ್ತಿದೆ.

ಗೃಹ ಸಾಲ ಪಡೆಯುವ ಸಂದರ್ಭ ಬ್ಯಾಂಕ್‌ಗಳು ಸಾಲಗಾರರಿಂದ ಪ್ರಾಪರ್ಟಿಯ ಮೂಲ ದಾಖಲೆಗಳನ್ನು ಕೋರುತ್ತವೆ. ಒಂದು ವೇಳೆ ಆ ದಾಖಲಾತಿಗಳನ್ನು ಬ್ಯಾಂಕ್‌ ಕಳೆದರೆ? ಆರ್‌ಬಿಐ ಸಮಿತಿ ನೀಡಿರುವ ಸಲಹೆಯ ಪ್ರಕಾರ ಅಂಥ ಸಂದರ್ಭ ಬ್ಯಾಂಕ್‌ಗೆ ದಂಡ ವಿಧಿಸಬಹುದು. ಬಿಪಿ ಕಾನುನ್‌ಗೊ ಸಮಿತಿ ಈ ಸಲಹೆ ನೀಡಿದೆ. ಪ್ರಾಪರ್ಟಿಯನ್ನು ರಿಸೇಲ್‌ ಮಾಡಲು, ಮಾಲಿಕತ್ವ ವರ್ಗಾವಣೆಗೆ, ಅಡಮಾನ ಸಾಲ ಪಡೆಯಲು ಮೂಲ ದಾಖಲೆ ಅವಶ್ಯಕ. ಈ ಹಿನ್ನೆಲೆಯಲ್ಲಿ ಸಾಲದಾತರು ಇಂಥ ದಾಖಲೆಗಳನ್ನು ಕಳೆದರೆ ದಂಡ ವಿಧಿಸುವುದು ಸೂಕ್ತ ಎನ್ನುತ್ತಾರೆ ತಜ್ಞರು. ಆರ್‌ಬಿಐ 2022ರ ಮೇನಲ್ಲಿ 6 ಸದಸ್ಯರನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಿತ್ತು.

ಇದನ್ನೂ ಓದಿ: ITR Filing : ಆನ್‌ಲೈನ್‌ನಲ್ಲಿ ಉಚಿತವಾಗಿ ITR filing ಮಾಡೋದು ಹೇಗೆ?‌ Part-1 ವೀಕ್ಷಿಸಿ ವಿಸ್ತಾರ ಮನಿ ಪ್ಲಸ್

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಲಾಕರ್‌ ಅಗ್ರಿಮೆಂಟ್‌ ಕುರಿತ ನಿಯಮಾವಳಿಗಳನ್ನು ಪರಿಷ್ಕರಿಸಿದೆ. ಹಾಲಿ ಬಳಕೆದಾರರು ಲಾಕರ್‌ ಹೋಲ್ಡಿಂಗ್‌ ಬ್ರಾಂಚ್‌ ಅನ್ನು ಸಂಪರ್ಕಿಸಿ ಒಪ್ಪಂದವನ್ನು ಪರಿಷ್ಕರಿಸಿಕೊಳ್ಳಲು ಬ್ಯಾಂಕ್‌ ಮನವಿ ಮಾಡಿದೆ. ಕನಿಷ್ಠ 50% ಲಾಕರ್‌ಗಳು ಹೊಸ ಅಗ್ರಿಮೆಂಟ್‌ ವ್ಯಾಪ್ತಿಗೆ ಬರಬೇಕು ಎಂದು ಆರ್‌ಬಿಐ ಎಲ್ಲ ಬ್ಯಾಂಕ್‌ಗಳಿಗೆ ತಿಳಿಸಿದೆ. ಸೆಪ್ಟೆಂಬರ್‌ 30ರ ವೇಳೆಗೆ 30%, ಡಿಸೆಂಬರ್‌ 30 ವೇಳೆಗೆ 100% ಆಗಬೇಕು ಎಂದು ಆರ್‌ಬಿಐ ತಿಳಿಸಿದೆ.

Exit mobile version