Site icon Vistara News

Stock Investment : ಷೇರು ಹೂಡಿಕೆದಾರರು ಉತ್ತಮ ಭವಿಷ್ಯದ ಇಂಡಸ್ಟ್ರಿಗಳನ್ನು ಗುರುತಿಸುವುದು ಹೇಗೆ?

industry

ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಮಾರುಕಟ್ಟೆಯಲ್ಲಿ (Stock Investment) ಮುಂದೇನಾಗಬಹುದು ಎಂಬುದನ್ನು ಮೊದಲೇ ಗ್ರಹಿಸುಕೊಳ್ಳುವುದು ಅವಶ್ಯಕ. ಒಬ್ಬ ವ್ಯಕ್ತಿ ಒಂದು ಕಂಪನಿಯ ಷೇರುಗಳನ್ನು ಖರೀದಿಸಿದ್ದರೆ, ಅದನ್ನು ಮಾರುವ ವೇಳೆಗೆ, ಅದಕ್ಕಿರುವ ಬೇಡಿಕೆಯನ್ನು ಗಮನಿಸಬೇಕಾಗುತ್ತದೆ. ಉತ್ತಮ ಬೆಳವಣಿಗೆ ಇರುವ ಇಂಡಸ್ಟ್ರಿಗಳನ್ನು ಗುರುತಿಸಿ, ಅಲ್ಲಿರುವ ಕಂಪನಿಗಳ ಷೇರುಗಳನ್ನು ಖರೀದಿಸಬೇಕಾಗುತ್ತದೆ.

ನಮ್ಮ ಹೂಡಿಕೆಯು ನಮ್ಮ ಆದಾಯವನ್ನು ಹೆಚ್ಚಿಸುವುದಲ್ಲದೆ ಸ್ಥಿರವಾಗಿಸಬೇಕು ಎಂಬುದು ಎಲ್ಲ ಹೂಡಿಕೆದಾರರ ಅಪೇಕ್ಷೆ. ಆದರೆ ರಿಟರ್ನ್‌ ಮತ್ತು ರಿಸ್ಕ್‌ ನಡುವೆ ನೇರ ಸಂಬಂಧ ಇರುತ್ತದೆ. ಯಾರಾದರೂ ಷೇರು ಮಾರುಕಟ್ಟೆಯಲ್ಲಿ ದಿಢೀರ್‌ ಹಣ ಗಳಿಸಿದರೆ, ಅವರು ಗೊತ್ತಿದ್ದೋ-ಇಲ್ಲದೆಯೋ ರಿಸ್ಕ್‌ ಅನ್ನು ತೆಗೆದುಕೊಂಡಿದ್ದಾರೆ ಎಂದೇ ಅರ್ಥ. ಆದರೆ ದೀರ್ಘಕಾಲೀನವಾಗಿ ದರಗಳು ಆರ್ಥಿಕತೆಯ ಪರಿಸ್ಥಿತಿಯನ್ನು ಬಿಂಬಿಸುತ್ತವೆ. ಆದ್ದರಿಂದ ಇಂಡಸ್ಟ್ರಿಗಳ ಪರಿಸ್ಥಿತಿಗಳನ್ನು ಅರಿತಯಕೊಳ್ಳುವುದು ಮುಖ್ಯವಾಗುತ್ತದೆ. ಇಂಡಸ್ಟ್ರಿಯ ವೆಚ್ಚದ ಸ್ವರೂಪ, ಆರ್ಥಿಕ ಪರಿಸ್ಥಿತಿ, ಸರ್ಕಾರದ ನೀತಿ ನಿಯಮಾವಳಿಗಳು ಒಂದು ಉತ್ಪನ್ನದ ಷೇರುಗಳ ಮೇಲೆ ಪ್ರಭಾವ ಬೀರುತ್ತದೆ. ಇಂಡಸ್ಟ್ರಿಯ ಮೌಲ್ಯಮಾಪನ ಮಾಡುವಾಗ ಪರಿಗಣಿಸಬೇಕಾದ ಅಂಶಗಳು:

ಭವಿಷ್ಯದ ಬೇಡಿಕೆ ಹೇಗಿರಬಹುದು? ಯಾವುದೇ ಇಂಡಸ್ಟ್ರಿಯ ಭವಿಷ್ಯದ ಆಶೋತ್ತರಗಳನ್ನು ಮೌಲ್ಯ ಮಾಪನ ಮಾಡುವಾಗ, ಆ ಇಂಡಸ್ಟ್ರಿ ತಯಾರಿಸುವ ಉತ್ಪನ್ನಗಳಿಗೆ ಭವಿಷ್ಯದ ದಿನಗಳಲ್ಲಿಯೂ ಬೇಡಿಕೆ ಇರುತ್ತದೆಯೇ ಎಂಬುದನ್ನು ಗಮನಿಸಬೇಕು. ಬೇಡಿಕೆ ಮತ್ತು ಪೂರೈಕೆಯ ನಡುವಣ ಅಂತರವನ್ನು ನೋಡಬೇಕು. ಯೋಜನಾ ಆಯೋಗ, ಎಫ್‌ಕೆಸಿಸಿಐ, ನ್ಯಾಶನಲ್‌ ಕೌನ್ಸಿಲ್‌ ಆಫ್‌ ಅಪ್ಲ್ಯೈಡ್‌ ಎಕನಾಮಿಕ್‌ ರಿಸರ್ಚ್‌ ( ಎನ್‌ಸಿ ಎ ಇ ಆರ್)‌ ಬಿಡುಗಡೆಗೊಳಿಸುವ ಇಂಡಸ್ಟ್ರಿ ಬೆಳವಣಿಗೆ ಕುರಿತ ವರದಿಗಳನ್ನು ಓದಬೇಕು. ಇಂಡಸ್ಟ್ರಿಯಲ್ಲಿನ ಉತ್ಪಾದನೆ, ತ್ವರಿತ ಬೆಳವಣಿಗೆ, ಮೆಚ್ಯೂರಿಟಿ, ಸಾಂದ್ರತೆ ಮತ್ತು ಇಳಿಕೆಯ ಗತಿಯನ್ನು ಗುರುತಿಸಬೇಕು.

ಇದನ್ನೂ ಓದಿ: Gold Price: ಚಿನ್ನದ ಮೇಲೆ ಹೂಡಿಕೆಗೆ ಇದು ‘ಬಂಗಾರ’ದ ಸಮಯ; 10 ಗ್ರಾಂಗೆ 70 ಸಾವಿರ ರೂ.!?

ಲಾಭ ಗಳಿಸುವ ಸಾಮರ್ಥ್ಯ: ಯಾವುದೇ ಉದ್ಯಮದ ಯಶಸ್ಸಿಗೆ ಪ್ರಮುಖ ಮಾನದಂಡವೇ ಅದರ ಲಾಭ ಗಳಿಕೆ. ಹೂಡಿಕೆಯ ಮೇಲಿನ ರಿಟರ್ನ್‌ ಅನ್ನು ನಿರ್ಧರಿಸುವಾಗ ಉದ್ಯಮ ಗಳಿಸುವ ಲಾಭ ಎಷ್ಟೆಂಬುದು ಮುಖ್ಯವಾಗುತ್ತದೆ.

ಇಂಡಸ್ಟ್ರಿಯ ವಿಶೇಷತೆ: ಪ್ರತಿಯೊಂದು ಇಂಡಸ್ಟ್ರಿಗೂ ಅದರದ್ದೇ ಆದ ವಿಶೇಷತೆ ಇರುತ್ತದೆ. ಅದನ್ನು ಷೇರು ಹೂಡಿಕೆದಾರರು ಆಳವಾಗಿ ಅರಿತುಕೊಳ್ಳಬೇಕು. ಹಾಗೂ ಅದರ ಪರಿಣಾಮಗಳನ್ನು ತಿಳಿದುಕೊಳ್ಳಬೇಕು. ನಿರ್ದಿಷ್ಟ ಇಂಡಸ್ಟ್ರಿಗಳು ತಂತ್ರಜ್ಞಾನದ ಪರಿಣಾಮ ಏರಿಳಿತಗಳಿಗೆ ಸಾಕ್ಷಿಯಾಗುತ್ತದೆ. ಕೆಲವು ಇಂಡಸ್ಟ್ರಿಗಳು ಕಣ್ಮರೆಯಾಗಿ ಹೋಗಬಹುದು. ಹೊಸ ರೂಪವನ್ನೂ ತಾಳಬಹುದು. ಈ ಬೆಳವಣಿಗೆಗಳ ಬಗ್ಗೆ ನಿಗಾ ವಹಿಸಬೇಕಾಗುತ್ತದೆ.

ಕಾರ್ಮಿಕರ ನಿರ್ವಹಣೆ: ಕಾರ್ಮಿಕರು ಮತ್ತು ಕಂಪನಿಯ ಆಡಳಿತ ಮಂಡಳಿ ನಡುವಣ ಸಂಬಂಧ ಕೂಡ ಹೇಗಿದೆ ಎಂಬುದನ್ನು ಷೇರುದಾರರು ಗಮನಿಸಬೇಕು. ಇದು ಭವಿಷ್ಯದ ವಹಿವಾಟುಗಳ ಮೇಲೆ ಪ್ರಭಾವ ಬೀರುತ್ತದೆ. ಒಂದು ಸಲ ಇಂಡಸ್ಟ್ರಿಯನ್ನು ಗುರುತಿಸಿದ ಬಳಿಕ, ಇಂಡಸ್ಟ್ರಿಯಲ್ಲಿ ಕಂಪನಿಯ ಪ್ರದರ್ಶನ ಹೇಗಿದೆ ಎಂಬುದನ್ನು ತಿಳಿಯಬೇಕು.‌

ಕಂಪನಿಯ ವಿಶ್ಲೇಷಣೆ: ಕಂಪನಿಯ ಬೆಳವಣಿಗೆಯ ಸಾಧ್ಯತೆಯನ್ನು ಅದರ ಹಿಂದಿನ ಪರ್‌ ಫಾರ್ಮೆನ್ಸ್‌ ನೋಡಿ ತಿಳಿದುಕೊಳ್ಳಬಹುದು. ಹೀಗಿದ್ದರೂ, ಭವಿಷ್ಯದ ಟ್ರೆಂಡ್‌ ಬಗ್ಗೆ ಅರಿಯುವುದೂ ನಿರ್ಣಾಯಕ. ಇಂಡಸ್ಟ್ರಿಯಲ್ಲಿ ಕಂಪನಿಯ ಸೈಜ್‌ ಮತ್ತು ರ‍್ಯಾಂಕಿಂಗ್‌ ಎಷ್ಟಿದೆ ಎಂದು ತಿಳಿಯಿರಿ. ಕಂಪನಿಯ ಸೇಲ್ಸ್‌, ನಿವ್ವಳ ಆದಾಯ, ನಿವ್ವಳ ಬಂಡವಾಳ, ನಿವ್ವಳ ಲಾಭದ ವಿವರ ತಿಳಿಯಿರಿ. ಪ್ರೈಸ್‌ ಟು ಅರ್ನಿಂಗ್‌ ರೇಶಿಯೊ, ವಾರ್ಷಿಕ ಬೆಳವಣಿಯ ಪ್ರಮಾಣ ತಿಳಿದುಕೊಳ್ಳಿ. ಕಂಪನಿಯ ಆಡಳಿತ ಮಂಡಳಿ, ಉತ್ಪನ್ನಗಳ ಗುಣಮಟ್ಟ, ಉತ್ಪಾದನಾ ಘಟಕ ಇರುವ ಸ್ಥಳ, ಸ್ಟಾಕ್‌ ಹೋಲ್ಡಿಂಗ್‌ ಸ್ವರೂಪದ ಬಗ್ಗೆ ತಿಳಿಯಿರಿ.

Exit mobile version