Site icon Vistara News

National pension scheme : ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌ ಜನರಿಗೆ ಹೇಗೆ ಇಳಿ ವಯಸ್ಸಿನಲ್ಲಿ ಪಿಂಚಣಿ ಒದಗಿಸುತ್ತದೆ?

National Pension Scheme

#image_title

ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌ ( National pension scheme ) ಸರ್ಕಾರಿ ಪ್ರಾಯೋಜಿತ ಪಿಂಚಣಿ ಯೋಜನೆಯಾಗಿದೆ. ಎಲ್ಲರಿಗೂ ವೃದ್ಧಾಪ್ಯದಲ್ಲಿ ಪಿಂಚಣಿ ಸಹಿತ ಆರ್ಥಿಕ ಭದ್ರತೆಗೆ ಸಹಕರಿಸುವುದು, ದೀರ್ಘಕಾಲೀನ ಅವಧಿಗೆ ಮಾರುಕಟ್ಟೆ ಆಧರಿತ ಉತ್ತಮ ರಿಟರ್ನ್‌ ದೊರಕಿಸಿಕೊಡುವುದು ಇದರ ಉದ್ದೇಶವಾಗಿದೆ.

ಇದು ಆರಂಭದಲ್ಲಿ ಸರ್ಕಾರಿ ನೌಕರರಿಗೆ ಸಿಗುತ್ತಿತ್ತು. ಬಳಿಕ 20೦9 ರಲ್ಲಿ ಎಲ್ಲ ಭಾರತೀಯ ನಾಗರಿಕರಿಗೂ ವಿಸ್ತರಿಸಲಾಯಿತು. ಇದರಲ್ಲಿ ಜನತೆ ತಮ್ಮ ದುಡಿಯುವ ಅವಧಿಯಲ್ಲಿ ಪಿಂಚಣಿ ಖಾತೆಗೆ ತಮ್ಮ ನಿಯಮಿತ ಕೊಡುಗೆ ಸಲ್ಲಿಸಬೇಕು. ಅವಧಿಗೂ ಮುನ್ನ ಭಾಗಶಃ ವಿತ್‌ ಡ್ರಾವಲ್ಸ್‌ಗೂ ಅವಕಾಶ ಇದೆ. ಕೊನೆಗೆ ಲಂಪ್ಸಮ್‌ ಆಗಿ ಸಿಗುವ ಹಣದ ಜತೆಗೆ, ಬಾಕಿ ಉಳಿಯುವ ಮೊತ್ತದಿಂದ ಪಿಂಚಣಿ ಕೂಡ ಸಿಗುತ್ತದೆ. ಆದರೆ ಇದು ದೀರ್ಘಕಾಲೀನ ಉಳಿತಾಯ ಯೋಜನೆಯಾಗಿದೆ. ಪೆನ್ಷನ್‌ ಫಂಡ್‌ ರೆಗ್ಯುಲೇಟರಿ ಆಂಡ್‌ ಡೆವಲಪ್‌ಮೆಂಟ್‌ ಅಥಾರಿಟಿ (ಪಿಎಫ್‌ಆರ್‌ಡಿಎ) ಈ ಪಿಂಚಣಿ ಯೋಜನೆಯನ್ನು ನಿರ್ವಹಿಸುತ್ತದೆ.

ಕೇಂದ್ರ ಸರ್ಕಾರ ಎನ್‌ಪಿಎಸ್‌ ಅನ್ನು 2004ರ ಜನವರಿ 1ರಂದು ಪರಿಚಯಿಸಿತು. ಸಶಸ್ತ್ರ ಸೇನಾಪಡೆ ಹೊರತುಪಡಿಸಿ ಉಳಿದ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಅನ್ವಯಿಸಿತು. ಹಲವಾರು ರಾಜ್ಯ ಸರ್ಕಾರಗಳೂ ಎನ್‌ಪಿಎಸ್‌ ಅನ್ನು ಅಳವಡಿಸಿವೆ. ಖಾಸಗಿ ವಲಯದಲ್ಲೂ ಎನ್‌ಪಿಎಸ್‌ ಕಾರ್ಪೊರೇಟ್‌ ಸೆಕ್ಟರ್‌ ಮಾಡೆಲ್‌ ಇದೆ. ಈ ಮೂರು ಸೆಕ್ಟರ್‌ಗಳಿಂದ ಹೊರತಾಗಿರುವ ಎಲ್ಲ ಭಾರತೀಯ ನಾಗರಿಕರೂ 2009ರ ಮೇ 1ರ ಬಳಿಕ ಎನ್‌ಪಿಎಸ್‌ಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಪಿಂಚಣಿ ವಿತರಣೆ ಹೇಗೆ? ಎನ್‌ಪಿಎಸ್‌ನಲ್ಲಿ ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಿಂಚಣಿ ಸಿಗುತ್ತದೆ. ಖಾತೆಯಲ್ಲಿ ಜಮೆಯಾಗುವ ಮೊತ್ತದಲ್ಲಿ 40% ಅನ್ನು ಕಡ್ಡಾಯವಾಗಿ ಪಿಂಚಣಿ ಉತ್ಪನ್ನ ಖರೀದಿಗೆ ಬಳಸಬೇಕಾಗುತ್ತದೆ. Annuity service provider ಗೆ ಇದನ್ನು ಕೊಡಬೇಕಾಗುತ್ತದೆ.

ಇದನ್ನೂ ಓದಿ: Ram Mandir: ಜ.22ರಂದು ಅಮೆರಿಕದಲ್ಲೂ ರಾಮನ ಜಪ; ನ್ಯೂಯಾರ್ಕ್‌ನಲ್ಲಿ ಲೈವ್‌ ಟೆಲಿಕಾಸ್ಟ್‌

ಎನ್‌ ಪಿಎಸ್‌ ಖಾತೆಯನ್ನು ತೆರೆಯುವುದು ಹೇಗೆ? ಸಾರ್ವಜನಿಕ, ಖಾಸಗಿ ಕ್ಷೇತ್ರದ ಬಹುತೇಕ ಬ್ಯಾಂಕ್‌ಗಳು , ಸರ್ವೀಸ್ ಫೈನಾನ್ಷಿಯಲ್‌ ಇನ್‌ಸ್ಟಿಟ್ಯೂಶನ್ಸ್‌ಗಳಲ್ಲಿ ಪಡೆಯಬಹುದು. ವರ್ಷಕ್ಕೆ ಕನಿಷ್ಠ 1000 ರೂ. ಕಾಂಟ್ರಿಬ್ಯೂಷನ್‌ ಇಲ್ಲಿ ಅಗತ್ಯ. ಕಾಂಟ್ರಿಬ್ಯೂಟರ್‌ ಉದ್ಯೋಗಿಯಾಗಿದ್ದರೆ, ಮೊತ್ತವು ತೆರಿಗೆ ಕಡಿತದ ಅನುಕೂಲ ಪಡೆಯುತ್ತದೆ.

ಎನ್‌ಪಿಎಸ್‌ನಲ್ಲಿ ಟೈರ್ I ಮತ್ತು ಟೈರ್ II ಎಂಬ ಎರಡು ವಿಧದ ಅಕೌಂಟ್‌ಗಳು ಇವೆ. ಟೈರ್‌ I ಕಡ್ಡಾಯವಾಗಿರುತ್ತದೆ. ಟೈರ್‌ II ಸ್ವಯಂ ಪ್ರೇರಿತ ಅಕೌಂಟ್‌ ಆಗಿದ್ದು, ಎಲ್ಲ ಭಾರತೀಯ ನಿವಾಸಿಗಳು ತೆರೆಯಬಹುದು. ಎನ್ನಾರೈಗಳಿಗೆ ಟೈಪ್‌ II ಇರುವುದಿಲ್ಲ. ಉದ್ಯೋಗ ಬದಲಾವಣೆ ಮಾಡಿದಾಗ ಎನ್‌ಪಿಎಸ್‌ ಖಾತೆಯನ್ನು ರಿ-ಓಪನ್‌ ಮಾಡಬೇಕಾದ ಅಗತ್ಯ ಇರುವುದಿಲ್ಲ. ಎನ್‌ಪಿಎಸ್‌ ಕಡಿಮೆ ವೆಚ್ಚದ ಪಿಂಚಣಿ ಉತ್ಪನ್ನವಾಗಿದೆ. ವೈಯಕ್ತಿಕವಾಗಿ ಹೂಡಿಕೆ ಮಾಡುವ ನಾಗರಿಕರು, ಉದ್ಯೋಗಿಗಳು ಮತ್ತು ಉದ್ಯೋಗದಾತರು ಇದರಲ್ಲಿ ತೆರಿಗೆ ಅನುಕೂಲ ಪಡೆಯಬಹುದು. ಅನುಭವಿ ಪಿನ್ಷನ್‌ ಫಂಡ್‌ಗಳು ಇದನ್ನು ನಿರ್ವಹಿಸುತ್ತವೆ. 18-70 ವರ್ಷ ವಯಸ್ಸಿನವರು ಎನ್‌ಪಿಎಸ್‌ಗೆ ಸೇರ ಬಹುದು. ಒಬ್ಬನೇ ವ್ಯಕ್ತಿ ಹಲವಾರು ಎನ್‌ಪಿಎಸ್‌ ಖಾತೆಗಳನ್ನು ತೆರೆಯುವಂತಿಲ್ಲ. ಜಂಟಿಯಾಗಿ ಈ ಖಾತೆಯನ್ನು ತೆರೆಯಲು ಆಗುವುದಿಲ್ಲ. ಎನ್‌ಪಿಎಸ್‌ ಖಾತೆಯನ್ನು ನ್ಯಾಶನಲ್‌ ಪೆನ್ಷನ್‌ ಸಿಸ್ಟಮ್‌ನ ವೆಬ್‌ ಪೋರ್ಟಲ್‌ ಮೂಲಕ, ಆನ್‌ ಲೈನ ಮೂಲಕವೂ ತೆರೆಯಬಹುದು.

Exit mobile version