Site icon Vistara News

How to apply Gruha Jyothi : ಉಚಿತ ವಿದ್ಯುತ್‌ ಪಡೆಯಲು 5 ನಿಮಿಷದಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ

bulbs

ರಾಜ್ಯ ಸರ್ಕಾರ ಒಂದು ಮನೆಗೆ 200 ಯುನಿಟ್‌ ಉಚಿತ ವಿದ್ಯುತ್‌ (Free Electricity) ನೀಡುವ ಗೃಹ ಜ್ಯೋತಿ ಯೋಜನೆಗೆ ಇತ್ತೀಚೆಗೆ ಚಾಲನೆ ನೀಡಿದೆ. ಪ್ರತಿಯೊಬ್ಬರೂ ಈಗ ಅರ್ಜಿ ಸಲ್ಲಿಸುತ್ತಿದ್ದಾರೆ. ನೀವು ಇನ್ನೂ ಅರ್ಜಿ ಹಾಕಿರದಿದ್ದರೆ, ಆನ್‌ಲೈನ್‌ ಮೂಲಕ ಕೇವಲ ಐದೇ ನಿಮಿಷದಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಇದು ಹೇಗೆ ? ಬೇಕಾಗಿರುವ ದಾಖಲೆಗಳೇನು? ಈಗ ಸ್ಟೆಪ್‌ ಬೈ ಸ್ಟೆಪ್‌ ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಕರೆಂಟ್‌ ಬಿಲ್‌ ತೆಗೆದುಕೊಳ್ಳಿ. ಇದರ ಎರಡನೇ ಸಾಲಿನಲ್ಲಿ ಖಾತೆ ಸಂಖ್ಯೆ ಅಥವಾ ಅಕೌಂಟ್‌ ಐಡಿ ಇರುತ್ತದೆ. ಇದು 10 ಅಂಕಿಗಳನ್ನು ಹೊಂದಿರುತ್ತದೆ. ಇದನ್ನು ನೀವು ಅರ್ಜಿ ಸಲ್ಲಿಸುವಾಗ ಹಾಕಬೇಕಾಗುತ್ತದೆ. ಅಕೌಂಟ್‌ ಐಡಿ, ನಿಮ್ಮ ಆಧಾರ್‌ ನಂಬರ್‌, ಮೊಬೈಲ್‌ ನಂಬರ್‌ ಜತೆಗೆ ಇಟ್ಟುಕೊಳ್ಳಿ.

1. ಗೂಗಲ್‌ನಲ್ಲಿ ರಾಜ್ಯ ಸರ್ಕಾರದ ಸೇವಾ ಸಿಂಧು ವೆಬ್‌ ಪೋರ್ಟಲ್‌ ತೆರೆಯಿರಿ. ಸೇವಾ ಸಿಂಧು ಪೋರ್ಟಲ್‌ನಲ್ಲಿ ರಿಜಿಸ್ಟರ್‌ ಮಾಡಿದರೆ, ಗೃಹ ಜ್ಯೋತಿಗೆ ಅರ್ಜಿಯನ್ನು ಸುಲಭವಾಗಿ ಲಾಗಿನ್‌ ಆಗಿ ಸಲ್ಲಿಸಬಹುದು. https://sevasindhugs.karnataka.gov.in/

2. ಅಪ್ಲೈ ಫಾರ್‌ ಸರ್ವೀಸ್‌ ವಿಭಾಗದಲ್ಲಿ ಗೆಟ್‌ ಒಟಿಪಿ ಸಿಲೆಕ್ಟ್‌ ಮಾಡಿ

3. ಆಗ ತೆರೆದುಕೊಳ್ಳುವ ಪೇಜ್‌ನಲ್ಲಿ ಸೀರಿಯಲ್‌ ನಂಬರ್‌ 1 ನಲ್ಲಿ ಗೃಹ ಜ್ಯೋತಿ ಸ್ಕೀಮ್‌ ಅರ್ಜಿ ಕಾಣಿಸುತ್ತದೆ.

4. ಕನ್ನಡ- ಇಂಗ್ಲಿಷ್‌ ಭಾಷೆಯ ಆಯ್ಕೆ ಸಿಗುತ್ತದೆ.

5. ಎಸ್ಕಾಂ ಹೆಸರು ಕಾಣಿಸುತ್ತದೆ. ಬೆಸ್ಕಾಂ, ಹೆಸ್ಕಾಮ್‌, ಮೆಸ್ಕಾಮ್‌ ಮೊದಲಾದ ವಲಯಗಳನ್ನು ತೋರಿಸುತ್ತದೆ. ನಿಮ್ಮ ವಲಯವನ್ನು ಸಿಲೆಕ್ಟ್‌ ಮಾಡಿ.

6. 10 ಅಂಕಿಗಳ ಕರೆಂಟ್‌ ಬಿಲ್ ಅಕೌಂಟ್‌ ಐಡಿ ನಮೂದಿಸಿ.‌

7. ಓನರ್‌, ಟೆನೆಂಟ್‌ ಯಾರು ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಧಾರ್‌ ನಂಬರ್‌ ನಮೂದಿಸಿ.

8. ಆಧಾರ್‌ ಅಥೆಂಟಿಕೇಶನ್‌ ಮೇಲೆ ಕ್ಲಿಕ್‌ ಮಾಡಬೇಕು. ಅಲ್ಲಿ ಇ-ಕೆವೈಸಿ ಪೇಜ್‌ ಕಾಣಿಸುತ್ತದೆ. ಇದರಲ್ಲಿ ಡಿಪಾರ್ಟ್‌ಮೆಂಟ್‌, ಬೆನಿಫೀಶಿಯರ್‌ ಐಡಿ ಇತ್ಯಾದಿ ವಿವರ ಸಿಗುತ್ತದೆ. ಬಳಿಕ ಆಧಾರ್‌ ನಂಬರ್‌ ನಮೂದಿಸಿ. ಐ ಅಗ್ರಿ ಟು ಶೇರ್‌ ಮೈ ಆಧಾರ್‌ ಡಿಟೇಲ್ಸ್‌ ಕ್ಲಿಕ್‌ ಮಾಡಿ. ಬಳಿಕ ಜನರೇಟ್‌ ಒಟಿಪಿಯನ್ನು ಕ್ಲಿಕ್‌ ಮಾಡಿ. ಒಟಿಪಿಯನ್ನು ಮೊಬೈಲ್‌ಗೆ ಕಳಿಸುತ್ತಾರೆ. ಬಳಿಕ ಒಟಿಪಿ ನಮೂದಿಸಿ ಸಬ್‌ಮಿಟ್‌ ಬಟನ್‌ ಕ್ಲಿಕ್‌ ಮಾಡಿ. ಆಗ ಆಧಾರ್‌ ದೃಢೀಕರಣ ಆಗುತ್ತದೆ.

ಇದನ್ನೂ ಓದಿ: Gruhalakshmi scheme : ಗೃಹಿಣಿಯರೇ 2000 ರೂ.ಗಾಗಿ ಅರ್ಜಿ ಹಾಕಲು ರೆಡಿನಾ? Just Wait

9. ಅರ್ಜಿದಾರರ ಹೆಸರನ್ನು ನಮೂದಿಸಬೇಕು. ಆಧಾರ್‌ ಡಿಟೇಲ್ಸ್‌ ಕ್ಲಿಕ್‌ ಮಾಡಿದರೆ ತಾನಾಗಿಯೇ ಹೆಸರನ್ನು ತೆಗೆದುಕೊಳ್ಳುತ್ತದೆ. ಬಳಿಕ ಮತ್ತೊಂದು ಒಟಿಪಿ ಬರುತ್ತದೆ. ವ್ಯಾಲಿಡೇಟ್‌ ಆಯ್ಕೆ ಮಾಡಿ.

10. ಕೊನೆಯದಾಗಿ ಡಿಕ್ಲರೇಶನ್‌ ಇರುತ್ತದೆ. ಅಂದರೆ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ ಎಂಬುದನ್ನು ಡಿಕ್ಲರೇಶನ್‌ ಮೂಲಕ ತಿಳಿಸುದು. ಐ ಅಗ್ರಿ ಎನ್ನುವುದನ್ನು ಕ್ಲಿಕ್ಕಿಸಿ. ಆಗ ಅರ್ಜಿದಾರರ ಸಂಪೂರ್ಣ ತೆರೆದುಕೊಳ್ಳುತ್ತದೆ. ವಿವರಗಳನ್ನು ಚೆಕ್‌ ಮಾಡಿ, ಎಲ್ಲವೂ ಸರಿ ಇದ್ದರೆ ಸಬ್‌ ಮಿಟ್‌ ಮೇಲೆ ಕ್ಲಿಕ್ಕಿಸಿ. ಆಗ ಸ್ವೀಕೃತಿ ಎಂಬ ಅಕ್ನಾಲೆಜ್‌ಮೆಂಟ್‌ ಸಿಗುತ್ತದೆ. ಇದನ್ನು ಪ್ರಿಂಟ್‌ ತೆಗೆಯಬಹುದು.

Exit mobile version