ಆಧಾರ್ ಕಾರ್ಡ್ ಭಾರತದಲ್ಲಿ ಒಂದು ಪ್ರಮುಖ ದಾಖಲೆ. ಇದರಲ್ಲಿ ವ್ಯಕ್ತಿಯ ಬೆರಳಿನ ಗುರುತು, ವಿಳಾಸ ಸೇರಿದಂತೆ ಮಹತ್ವದ ಅಂಶಗಳಿರುತ್ತದೆ. ಆಧಾರ್ ಎನ್‌ರೋಲ್‌ಮೆಂಟ್ ಸೆಂಟರ್, ಬ್ಯಾಂಕ್, ಅಂಚೆ ಕಚೇರಿಗಳು ಆಧಾರ್ ಕಾರ್ಡ್‌ಗಳನ್ನು ನೀಡುತ್ತವೆ. ಇಲ್ಲಿ ಆಧಾರ್ ಮಾಹಿತಿಯನ್ನು ಪರಿಷ್ಕರಣೆ ಕೂಡ ಮಾಡಬಹುದು. ನಿಮ್ಮ ಆಧಾರ್ ಕಾರ್ಡ್ ಎನ್‌ರೋಲ್‌ಮೆಂಟ್‌ನ ಸ್ಟೇಟಸ್ ಅನ್ನು ಆನ್‌ಲೈನ್‌ನಲ್ಲಿಯೂ ಪರಿಶೀಲಿಸಬಹುದು. ಇದು ಹೇಗೆ ಎನ್ನುತ್ತೀರಾ? ಇಲ್ಲಿದೆ ವಿವರ.
ಆಧಾರ್ ಕಾರ್ಡ್ ಎನ್‌ರೋಲ್‌ಮೆಂಟ್ ಸ್ಟೇಟಸ್ ಪರಿಶೀಲನೆ ಹೇಗೆ?
ಯುಐಡಿಎಐ (UIDAI) ವೆಬ್‌ಸೈಟ್‌ಗೆ (https://uidai.gov.in ) ಲಾಗಿನ್ ಆಗಿ. ವೆಬ್‌ಸೈಟ್‌ನಲ್ಲಿ Check Aadhaar Status ಆಯ್ಕೆ ಮಾಡಿ. ನಿಮ್ಮ ಎನ್‌ರೋಲ್‌ಮೆಂಟ್ ಐಡಿಯನ್ನು (Enrolment ID) ಹಾಗೂ captcha code ಅನ್ನು ಎಂಟರ್ ಮಾಡಿ. ಆಧಾರ್ ಸ್ಟೇಟಸ್ ಡಿಸ್‌ಪ್ಲೇ ಆಗುತ್ತದೆ.
ಎನ್‌ರೋಲ್‌ಮೆಂಟ್ ನಂಬರ್ ಇಲ್ಲದೆಯೇ ಎನ್‌ರೋಲ್‌ಮೆಂಟ್ ಸ್ಟೇಟಸ್ ಪರಿಶೀಲನೆ ಹೇಗೆ?
ಯುಐಡಿಎಐ (UIDAI) ವೆಬ್‌ಸೈಟ್‌ಗೆ (https://uidai.gov.in ) ಲಾಗಿನ್ ಆಗಿ. ವೆಬ್‌ಸೈಟ್‌ನಲ್ಲಿ retrive your adhaar or enrolment number ಆಯ್ಕೆ ಮಾಡಿಕೊಳ್ಳಿ. ಹೆಸರು, ಇ-ಮೇಲ್ ವಿಳಾಸ ನಮೂದಿಸಿ. ನಿಮ್ಮ ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರುತ್ತದೆ. ಒಟಿಪಿ ನಮೂದಿಸಿ. ಬಳಿಕ ಎನ್‌ರೋಲ್ ಮೆಂಟ್ ನಂಬರ್ ನಿಮ್ಮ ಮೊಬೈಲ್ ಅಥವಾ ಇ-ಮೇಲ್ ಮೂಲಕ ನಿಮಗೆ ಸಿಗುತ್ತದೆ.