Site icon Vistara News

Repo rate hike effect | 25 ವರ್ಷದ ಗೃಹಸಾಲವನ್ನು 12 ವರ್ಷದಲ್ಲೇ ಸುಲಭವಾಗಿ ತೀರಿಸುವುದು ಹೇಗೆ?

loan

ಶರತ್‌ ಎಂ.ಎಸ್, ಎಕ್ಸಿಕ್ಯುಟಿವ್‌ ಎಡಿಟರ್‌, ವಿಸ್ತಾರ ನ್ಯೂಸ್

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ರೆಪೊ ದರವನ್ನು ಬುಧವಾರ 6.25%ಕ್ಕೆ ಏರಿಸಿದೆ. ರೆಪೊ ದರದಲ್ಲಿ ಕಳೆದ ಮೇ ಬಳಿಕ ಇಲ್ಲಿಯವರೆಗೆ ಒಟ್ಟು 2.25% ಹೆಚ್ಚಳವಾಗಿದ್ದು, 7%ರಿಂದ 9.25%ಕ್ಕೆ ವೃದ್ಧಿಸಿದೆ. (Repo rate hike effect) ಇದರ ಪರಿಣಾಮ ಗೃಹ ಸಾಲಗಾರರಿಗೆ ಸಮಾನ ಮಾಸಿಕ ಕಂತಿನ (EMI) ಹೊರೆ ಏರಿಕೆಯಾಗಿದೆ.

ನೀವು 30 ಲಕ್ಷ ರೂ. ಗೃಹ ಸಾಲ ಪಡೆದಿದ್ದೀರಿ ಎಂದಿಟ್ಟುಕೊಳ್ಳಿ. 20 ವರ್ಷಗಳಿಗೆ ಮೊದಲಿದ್ದ ಬಡ್ಡಿ ದರ 7% ಹಾಗೂ 23,258 ರೂ. ಇಎಂಐ ಇರುತ್ತದೆ. ಆದರೆ ರೆಪೊ ದರ ಪರಿಷ್ಕರಣೆಯಿಂದಾಗಿ ಇನ್ನು ಮುಂದೆ ಕಟ್ಟಬೇಕಾಗುವ ಸಾಲದ ಮೇಲಿನ ಬಡ್ಡಿ ದರ 27,387 ರೂ.ಗೆ ಏರಿಕೆಯಾಗುತ್ತದೆ. ಅಂದರೆ ಇಎಂಐ 27,387 ರೂ.ಗೆ ಏರಿಕೆಯಾಗುತ್ತದೆ. 4,129 ರೂ. ಹೆಚ್ಚಳವಾಗುತ್ತದೆ.

ನಿಮ್ಮಲ್ಲೂ ಅನೇಕ ಮಂದಿಗೆ ಸುದೀರ್ಘ ಗೃಹ ಸಾಲದ ಅವಧಿ ಇರಬಹುದು. ಹಾಗಾದರೆ, ಬಡ್ಡಿ ದರ ಏರಿಕೆಯ ಹೊರೆಯನ್ನು ಇಳಿಸಿ ಶೀಘ್ರ ಸಾಲ ಮುಕ್ತರಾಗುವುದು ಹೇಗೆ? 25 ವರ್ಷದ ಗೃಹ ಸಾಲವನ್ನು 12 ವರ್ಷಗಳಲ್ಲಿಯೇ ಮರು ಪಾವತಿಸಿ, ನಿಶ್ಚಿಂತೆಯಿಂದ ಸಾಲಮುಕ್ತರಾಗುವುದು ಹೇಗೆ? ಇಲ್ಲಿದೆ ವಿವರ

೨೦ ಲಕ್ಷ ರೂ. ಸಾಲ ತೀರಿಸಲು ಒಟ್ಟು 40 ಲಕ್ಷ ವೆಚ್ಚ!

ಗೃಹ ಸಾಲವನ್ನು ತೆಗೆದುಕೊಂಡ ಬಹುತೇಕ ಎಲ್ಲರೂ ಅದರ ಕಷ್ಟವನ್ನು ವಿವರಿಸಬಲ್ಲರು. ನಿಜ, ನಾವು ಸ್ವಂತ ಮನೆ ಕಟ್ಟಿ ಜೀವಮಾನದ ಸಾಧನೆ ಮಾಡಬೇಕು, ತಲೆಯ ಮೇಲೊಂದು ಸೂರು ಬೇಕು ಎನ್ನುವುದು ಒಪ್ಪತಕ್ಕದ್ದೇ. ಆದರೆ ಗೃಹ ಸಾಲ ತೆಗೆದುಕೊಳ್ಳುವುದರಿಂದ ಬ್ಯಾಂಕಿನವರನ್ನು ಉದ್ಧಾರ ಮಾಡುತ್ತಿರುತ್ತೇವೆ. ಉದಾಹರಣೆಗೆ ಒಬ್ಬ ವ್ಯಕ್ತಿ 20 ಲಕ್ಷ ರೂ. ಸಾಲವನ್ನು 8 ಪರ್ಸೆಂಟ್‌ ಬಡ್ಡಿಯಲ್ಲಿ 20 ವರ್ಷಕ್ಕೆ ತೆಗೆದುಕೊಂಡರೆ, 20 ಲಕ್ಷ ಅಸಲು ಮತ್ತು 20 ಲಕ್ಷ ಬಡ್ಡಿ ಸೇರಿ 40 ಲಕ್ಷ ರೂ. ಕಟ್ಟಬೇಕಾಗುತ್ತದೆ. ಹೀಗಾಗಿಯೇ ಗೃಹ ಸಾಲಗಾರರ ಆಯುಷ್ಯ ಸಾಲದ ಇಎಂಐ ಕಟ್ಟುವುದರಲ್ಲಿಯೇ ಮುಗಿಯುತ್ತದೆ. ಆದರೆ ಜಾಣ್ಮೆಯಿಂದ ಈ ಸಾಲದ ಶೂಲವನ್ನು ಪಕ್ಕಕ್ಕಿಡಬಹುದು! ಇನ್ನಿಲ್ಲದಂತೆ ಕಾಡುವ ಇಎಂಐ ಸುಳಿಯಿಂದ ಪಾರಾಗಬಹುದು! ಅದಕ್ಕಾಗಿ ಅಕ್ಷರಶಃ ಬುದ್ಧಿವಂತಿಕೆಯನ್ನು ಉಪಯೋಗಿಸಿದರೆ ಸಾಕು. ಖಡಾಖಂಡಿತವಾಗಿ ಕನಿಷ್ಠ 10ರಿಂದ 20 ಲಕ್ಷ ರೂ. ಉಳಿತಾಯದ ಲಾಭ ನಿಮ್ಮದಾಗುತ್ತದೆ!

ಸಾಮಾನ್ಯವಾಗಿ ಬ್ಯಾಂಕ್‌ಗಳು ನಿಮ್ಮ ಅರ್ಜಿಯನ್ನು ಪರಿಗಣಿಸಿ ಗೃಹ ಸಾಲವನ್ನು ಮಂಜೂರು ಮಾಡುತ್ತವೆ. ಬಳಿಕ ಪ್ರತಿ ತಿಂಗಳು ಇಎಂಐ ಹೊರೆ ನಿಮ್ಮ ಹೆಗಲೇರುತ್ತದೆ. ಅದನ್ನು ಹೇಗೆ ನಿಗದಿತ ಅವಧಿಗಿಂತ ಮೊದಲೇ ತೀರಿಸಿ, ಸಾಲದ ಶೂಲದಿಂದ ಹೇಗೆ ಪಾರಾಗಬಹುದು ಎಂಬುದನ್ನು ಬ್ಯಾಂಕ್‌ಗಳು ಕಲಿಸುವುದಿಲ್ಲ. ಹೀಗಾಗಿ ಈ ಬಗ್ಗೆ ಹಣಕಾಸು ಸಾಕ್ಷರತೆ ಅತ್ಯಂತ ಮುಖ್ಯ. ಇಲ್ಲದಿದ್ದರೆ ಗೃಹಸಾಲದ ಬವಣೆ ತಪ್ಪದು.

ಗೃಹ ಸಾಲದ ಇಎಂಐ ಹೇಗೆ ಇರುತ್ತದೆ? ಅದರ ಅವಧಿ ಎಷ್ಟು? ಅದು ನಿಮ್ಮ ಸಾಲದ ಮೇಲೆ ಬೀರುವ ಪರಿಣಾಮವೇನು? ಸಾಲದ ಅವಧಿಯನ್ನು ಕಡಿಮೆ ಮಾಡುವು ಮೂಲಕ ಬಡ್ಡಿಯ ಹೊರೆಯನ್ನು ಮತ್ತು ಸಾಲದ ಕಂತುಗಳನ್ನು ಇಳಿಸುವುದು ಹೇಗೆ? ಲೋನ್‌ ಕ್ಯಾಲ್ಕುಲೇಟರ್‌ ಬಳಸಿಕೊಂಡು ಲೆಕ್ಕಾಚಾರ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅವಶ್ಯಕ.

ಕೆಲ ಹೆಚ್ಚುವರಿ ಕಂತುಗಳಿಂದ ಸಾಲದ ಬಾಕಿ, ಬಡ್ಡಿಯಲ್ಲಿ ಭಾರಿ ಇಳಿಕೆ : ಸಾಲದ ಇಎಂಐ ಇವತ್ತು ಕೇವಲ ಗೃಹ ಸಾಲಗಳಿಗೆ ಸೀಮಿತವಾಗಿಲ್ಲ. ಮನೆ, ಕಾರು, ಬೈಕ್‌, ಸ್ಕೂಟರ್, ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಇತ್ಯಾದಿಗಳನ್ನು ಇಎಂಐ ಮೂಲಕ ಖರೀದಿಸಬಹುದು. ಸಾಲದ ಮೊತ್ತ ಮತ್ತು ಬಡ್ಡಿ ದರ ವ್ಯತ್ಯಾಸ ಇರಬಹುದು. ಆದರೆ ಕೆಲವು ಪ್ರಾಥಮಿಕ ಸೂತ್ರಗಳು ಒಂದೇ. ವಾರ್ಷಿಕ ಹೆಚ್ಚುವರಿ ಕಂತುಗಳನ್ನು ಕಟ್ಟುವ ಮೂಲಕ ಗೃಹ ಸಾಲದ ಒಟ್ಟಾರೆ ಬಾಕಿ ಮತ್ತು ಬಡ್ಡಿಯಲ್ಲಿ ಲಕ್ಷಾಂತರ ರೂ.ಗಳನ್ನು ಕಡಿಮೆ ಮಾಡಬಹುದು! ಹೀಗಾಗಿ ಕೆಳ ಕಂಡ ಸೂತ್ರಗಳು ಅಥವಾ ಕಾರ್ಯತಂತ್ರಗಳು ಗೃಹಸಾಲ ಮಾತ್ರವಲ್ಲದೆ, ಇತರ ಸಾಲಗಳ ಮರು ಪಾವತಿಯಲ್ಲೂ, ಸಾಲದ ಹೊರೆಯನ್ನು ಶೀಘ್ರ ಇಳಿಸಿ ನಿಶ್ಚಿಂತೆಯಿಂದಿರಲು ಸಹಕಾರಿ. ಈಗ ಗೃಹ ಸಾಲದ ಹೊರೆಯಿಂದ ಶೀಘ್ರ ಪಾರಾಗುವುದು ಹೇಗೆ ಎಂಬುದನ್ನು ನೋಡೋಣ.

ಆರಂಭಿಕ ಹಂತದಲ್ಲಿ ಗೃಹ ಸಾಲದ ಇಎಂಐ ಕಟ್ಟುವಾಗ ಅಸಲಿಗಿಂತ ಹೆಚ್ಚಾಗಿ ಬಡ್ಡಿಗೆ ನಮ್ಮ ಮೊತ್ತ ಹೋಗುತ್ತದೆ.

ಸಾಲದ ಮೊತ್ತಬಡ್ಡಿ ದರಅವಧಿಮಾಸಿಕ ಕಂತು ಇಎಂಐತಿಂಗಳುಅಸಲಿಗೆ ಜಮೆ ಆಗುವ ಮೊತ್ತಬಡ್ಡಿಗೆ ಜಮೆ ಆಗುವ ಮೊತ್ತಸಾಲದ ಬಾಕಿ ಮೊತ್ತ
35 ಲಕ್ಷಶೇ 825 ವರ್ಷರೂ. 27,0141ರೂ. 3,680ರೂ. 23,33334,96,320
35 ಲಕ್ಷಶೇ 825 ವರ್ಷರೂ. 27,0142ರೂ. 3,705ರೂ. 23,30934,92,615
35 ಲಕ್ಷಶೇ 825 ವರ್ಷರೂ. 27,0143ರೂ. 3,729ರೂ. 23,28434,88,886
35 ಲಕ್ಷಶೇ 825 ವರ್ಷರೂ. 27,0144ರೂ. 3,754ರೂ. 23,25934,85,131
35 ಲಕ್ಷಶೇ 825 ವರ್ಷರೂ. 27,0145ರೂ. 3,779ರೂ. 23,23434,81,352
35 ಲಕ್ಷಶೇ 825 ವರ್ಷರೂ. 27,0146ರೂ. 3,805ರೂ. 23,20934,77,547
35 ಲಕ್ಷಶೇ 825 ವರ್ಷರೂ. 27,0147ರೂ. 3,830ರೂ. 23,18434,73,717
35 ಲಕ್ಷಶೇ 825 ವರ್ಷರೂ. 27,0148ರೂ. 3,855ರೂ. 23,15834,69,862
35 ಲಕ್ಷಶೇ 825 ವರ್ಷರೂ. 27,0149ರೂ. 3,881ರೂ. 23,13234,65,981
35 ಲಕ್ಷಶೇ 825 ವರ್ಷರೂ. 27,01410ರೂ. 3,907ರೂ. 23,10734,62,074
35 ಲಕ್ಷಶೇ 825 ವರ್ಷರೂ. 27,01411ರೂ. 3,933ರೂ. 23,08034,58,141
35 ಲಕ್ಷಶೇ 825 ವರ್ಷರೂ. 27,01412ರೂ. 3,959ರೂ. 23,05434,54,181
ಒಟ್ಟು ಲೆಕ್ಕಚಾರ ರೂ. 3,24,168ರೂ. 45,817ರೂ.2,78,351  
ಸಾಲದ ಅವಧಿ ಹೆಚ್ಚಾದಂತೆ ನಾವು ಅಸಲು ಮೊತ್ತಕ್ಕಿಂತ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ
ಸಾಲದ ಮೊತ್ತಬಡ್ಡಿ ದರಅವಧಿಮಾಸಿಕ ಕಂತು ಇಎಂಐಪಾವತಿಸುವ ಅಸಲಿನ ಮೊತ್ತಪಾವತಿಸುವ ಬಡ್ಡಿ ಮೊತ್ತಅಸಲು+ ಬಡ್ಡಿ ಸೇರಿಸಿ ಪಾವತಿಸುವ ಒಟ್ಟು ಮೊತ್ತ
35 ಲಕ್ಷಶೇ 825 ವರ್ಷರೂ. 27,01435 ಲಕ್ಷರೂ. 46,04,070ರೂ. 81,04,070
35 ಲಕ್ಷಶೇ 820ವರ್ಷರೂ. 29,27535 ಲಕ್ಷರೂ. 35,26,097ರೂ. 70,26,097
35 ಲಕ್ಷಶೇ 815 ವರ್ಷರೂ. 33,44835 ಲಕ್ಷರೂ. 25,20,608ರೂ. 60,20,608
35 ಲಕ್ಷಶೇ 810 ವರ್ಷರೂ. 42,46535 ಲಕ್ಷರೂ. 15,95,759ರೂ. 50,95,759

25 ವರ್ಷದ ಅವಧಿಯ ಸಾಲವನ್ನು 12 ವರ್ಷಗಳಲ್ಲೇ ಪಾವತಿಸುವುದು ಹೇಗೆ?

ಸಾಲದ ಮೊತ್ತ ಸಾಲ ಪಡೆದಿರುವ ಅವಧಿಮಾಸಿಕ ಕಂತು (ಇಎಂಐ)ಪಾವತಿಸಬೇಕಿರುವ ಅಸಲಿನ ಮೊತ್ತಪಾವತಿಸಬೇಕಿರುವ ಬಡ್ಡಿ ಮೊತ್ತಅಸಲು+ ಬಡ್ಡಿ ಸೇರಿಸಿ ಪಾವತಿಸುವ ಒಟ್ಟು ಮೊತ್ತವಾರ್ಷಿಕ ಹೆಚ್ಚುವರಿ ಕಂತುಹೆಚ್ಚುವರಿ ಕಂತು ಪಾವತಿಸಿದಾಗ ಕಡಿಮೆಯಾಗುವ ಬಡ್ಡಿ ಹೊರೆಇಳಿಕೆಯಾಗವ ಸಾಲ ಮರುಪಾವತಿ ವರ್ಷಗಳು
35 ಲಕ್ಷ25 ವರ್ಷ27,01435 ಲಕ್ಷರೂ.46,04,070ರೂ.81,04,0027,014*1 (1ಹೆಚ್ಚುವರಿ ಕಂತು)34,80,93104
27,014*2 (ಹೆಚ್ಚುವರಿ ಕಂತು)  28,25,20707
27,014*3 (ಹೆಚ್ಚುವರಿ ಕಂತು)  23,85,13410
27,014*4 (ಹೆಚ್ಚುವರಿ ಕಂತು)  20,66,12011
27,014*5 (ಹೆಚ್ಚುವರಿ ಕಂತು)  18,22,20013
Exit mobile version