Site icon Vistara News

HPCL : ಎಚ್‌ಪಿಸಿಎಲ್‌ನಿಂದ ಶೀಘ್ರದಲ್ಲಿಯೇ ಎಥೆನಾಲ್‌ ಅಡುಗೆ ಒಲೆ ಬಿಡುಗಡೆ

stove

stove

ನವ ದೆಹಲಿ: ಎಲ್ಪಿಜಿ ಆಧರಿತ ಅಡುಗೆ ಒಲೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಲುವಾಗಿ ಸಾರ್ವಜನಿಕ ವಲಯದ ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ (HPCL) ಶೀಘ್ರದಲ್ಲಿಯೇ ಎಥೆನಾಲ್‌ ಅಡುಗೆ ಒಲೆಯನ್ನು ಬಿಡುಗಡೆಗೊಳಿಸಲಿದೆ. ಗುವಾಹಟಿಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (IIT) ಸಹಭಾಗಿತ್ವದಲ್ಲಿ ಈ ಒಲೆಯನ್ನು ಅಭಿವೃದ್ಧಿಪಡಿಸಿದೆ.

ಬಯೊ-ಎಥೆನಾಲ್‌ (Bio-ethanol) ಪರಿಸರಸ್ನೇಹಿಯಾಗಿದ್ದು, ಆಹಾರೋತ್ಪನ್ನಗಳು, ಸಕ್ಕರೆ ತಯಾರಿಕೆಯ ಹಂತದಲ್ಲಿ ತಯಾರಿಸಬಹುದು. ಎಚ್‌ಪಿಸಿಎಲ್‌ ತನ್ನ ರಿಟೇಲ್‌ ಸ್ಟೋರ್‌ಗಳಲ್ಲಿ ಗ್ರಾಹಕರಿಗೆ ಎಥೆನಾಲ್‌ ಪೂರೈಸಲಿದೆ. ಇದರಿಂದ ದೇಶದ ಎಲ್ಪಿಜಿ ಆಮದು ವೆಚ್ಚವೂ ತಗ್ಗಲಿದೆ.

ಇಂಧನ ಉಳಿತಾಯಕ್ಕೂ, ರೈತರಿಗೆ ಹೆಚ್ಚಿನ ಆದಾಯಕ್ಕೂ ಇದು ಸಹಕಾರಿಯಾಗಲಿದೆ. ಪರಿಸರ ಮಾಲಿನ್ಯ ನಿಯಂತ್ರಣದ ಉದ್ದೇಶವನ್ನೂ ಈಡೇರಿಸುತ್ತದೆ ಎನ್ನುತ್ತಾರೆ ತಜ್ಞರು.

Exit mobile version