Site icon Vistara News

ಹುರುನ್ ಇಂಡಿಯಾ ಶ್ರೀಮಂತರ ಪಟ್ಟಿಯಲ್ಲಿ ಅದಾನಿಯನ್ನು ಹಿಂದಿಕ್ಕಿದ ಮುಕೇಶ್ ಅಂಬಾನಿ!

Hurun India Rich List 2023: Mukesh Ambani tops list

ಮುಂಬೈ: ಪ್ರಸಕ್ತ ಸಾಲಿನ 360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ (360 ONE Wealth Hurun India Rich List 2023) ಪ್ರಕಟವಾಗಿದ್ದು, ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ (Adani Group Chairman Gautam Adani) ಅವರನ್ನು ಹಿಂದಿಕ್ಕಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ (Reliance Industries Chairman Mukesh Ambani) ಅವರು ಮೊದಲನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಮುಕೇಶ್ ಅಂಬಾನಿ ಅವರ ಸಂಪತ್ತಿನಲ್ಲಿ ಶೇ.2ರಷ್ಟು ಏರಿಕೆಯಾಗಿದೆ. ಅಂಬಾನಿ ಆಸ್ತಿ ಮೌಲ್ಯ ಈಗ 808700 ಕೋಟಿ ರೂ.ನಷ್ಟಿದೆ.

ಹುರುನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ಈಗ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತಿನಲ್ಲಿ ಶೇ. 57 ಕಡಿಮೆಯಾಗಿದೆ. ಅಂದರೆ, 474,800 ಕೋಟಿ ರೂ. ಸಂಪತ್ತು ಹೊಂದಿದ್ದಾರೆ. ಮೂರನೇ ಸ್ಥಾನವನ್ನು, ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರವರ್ತಕರಾಗಿರುವ 82 ವರ್ಷದ ಪುಣೆ ಮೂಲದ ಸೈರಸ್ ಎಸ್ ಪೂನಾವಾಲಾ ಮತ್ತು ಕುಟುಂಬ ಉಳಿಸಿಕೊಂಡಿದೆ. ಅವರ ವಹಿವಾಟು ಕಳೆದ ವರ್ಷಕ್ಕೆ ಹೋಲಿಸಿದರೆ 36% ರಷ್ಟು ಏರಿಕೆಯಾಗಿದ್ದು, 278,500 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಕ್ರಮವಾಗಿ ಶಿವ ನಾಡರ್(228900 ಕೋಟಿ ರೂ.) ಮತ್ತು ಲಂಡನ್ ಮೂಲದ ಗೋಪಿಚಂದ ಹಿಂದುಜಾ(176500 ಕೋಟಿ ರೂ.) ಅವರಿದ್ದಾರೆ. ಸನ್ ಫಾರ್ಮಸಿಟಿಕಲ್ ಇಂಡಸ್ಟ್ರೀ ಚೇರ್ಮನ್ ದಿಲೀಪ್ ಸಾಂಘ್ವಿ ಅವರಿದ್ದಾರೆ. ಇವರು ಸಂಪತ್ತಿನ ಮೌಲ್ಯ 164,300 ಕೋಟಿ ರೂಪಾಯಯಾಗಿದೆ.

ಈ ಸುದ್ದಿಯನ್ನೂ ಓದಿ: Mukesh Ambani | ಅರ್ಸೆನಲ್ ಫುಟ್ಬಾಲ್ ಕ್ಲಬ್ ಖರೀದಿಸಲು ಮುಂದಾದ ಮುಕೇಶ್ ಅಂಬಾನಿ!

ಫೋರ್ಬ್ಸ್ ಪಟ್ಟಿಯಲ್ಲೂ ಅದಾನಿಯನ್ನು ಹಿಂದಿಕ್ಕಿದ್ದ ಅಂಬಾನಿ

ಆರು ತಿಂಗಳ ಹಿಂದೆ ಫೋರ್ಬ್ಸ್ ಬಿಡುಗಡೆ ಮಾಡಿದ ಪಟ್ಟಿಯಲ್ಲೂ ಅದಾನಿ ಅವರನ್ನು ಅಂಬಾನಿ ಅವರು ಹಿಂದಿಕ್ಕಿದ್ದರು. ಫೋರ್ಬ್ಸ್‌ ಸಂಸ್ಥೆ ಬಿಡುಗಡೆಗೊಳಿಸಿದ್ದ 2023ರ ವಿಶ್ವದ ಪ್ರಮುಖ ಬಿಲಿಯನೇರ್‌ಗಳ (forbes Worlds Billionaires List 2023) ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿದ್ದಾರೆ. ಅದಾನಿ ಸಮೂಹದ ಸಂಸ್ಥಾಪಕ ಗೌತಮ್‌ ಅದಾನಿ ಅವರು 24ಕ್ಕೆ ಕುಸಿದಿದ್ದಾರೆ. ಈ ಪಟ್ಟಿ ಪ್ರಕಾರ ಮುಕೇಶ್‌ ಅಂಬಾನಿ ಅವರ ಸಂಪತ್ತು 6.83 ಲಕ್ಷ ಕೋಟಿ ರೂ. (83.4 ಶತಕೋಟಿ ಡಾಲರ್)‌ ಕಳೆದ ವರ್ಷ ಅವರ ಸಂಪತ್ತು 90.7 ಶತಕೋಟಿ ಡಾಲರ್‌ ಇತ್ತು (7.43 ಲಕ್ಷ ಕೋಟಿ ರೂ.)

ಗೌತಮ್‌ ಅದಾನಿ ಅವರು ಭಾರತದ ಎರಡನೇ ಅತಿ ದೊಡ್ಡ ಶ್ರೀಮಂತರಾದರೂ ವಿಶ್ವ ಬಿಲಿಯನೇರ್‌ಗಳ ಪಟ್ಟಿಯಲ್ಲಿ 24ನೇ ಸ್ಥಾನದಲ್ಲಿ ಇದ್ದಾರೆ. ಇತ್ತೀಚಿನ ಅದಾನಿ ಷೇರುಗಳ ಪತನ ಅವರ ಸಂಪತ್ತಿನ ಗ್ರಾಫ್‌ ಮೇಲೆ ಕೂಡ ಪ್ರತಿಕೂಲ ಪ್ರಭಾವ ಬೀರಿತ್ತು. ಅದಾನಿ ಅವರ ನಿವ್ವಳ ಸಂಪತ್ತು 47.2 ಶತಕೋಟಿ ಡಾಲರ್‌ (3.87 ಲಕ್ಷ ಕೋಟಿ ರೂ.) ವಿಶ್ವದ ಮೊದಲ 55 ಬಿಲಿಯನೇರ್‌ಗಳಲ್ಲಿ ಭಾರತದ ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಶಿವ್‌ ನಡಾರ್‌ ಇದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version