Site icon Vistara News

IBM halts hiring : ಐಬಿಎಂನಲ್ಲಿ ಎಐ ಹವಾ, 7800 ಉದ್ಯೋಗ ನಷ್ಟ ಸಂಭವ

IBM halts hiring AI revolution effect in IBM may 7800 job cuts

ಬೆಂಗಳೂರು: ಐಟಿ ದಿಗ್ಗಜ ಐಬಿಎಂ (International Business Machines- IBM) ಮುಂಬರುವ ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು (Artificial Intelligence) ವ್ಯಾಪಕವಾಗಿ ಅಳವಡಿಸಿಕೊಳ್ಳಲಿದ್ದು, ಇದರ ಪರಿಣಾಮ 7800 ಮಂದಿ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ. 7800 ಹುದ್ದೆಗಳನ್ನು ಎಐ ಬದಲಿಸಲಿದೆ ಎಂದು ಬ್ಲೂಮ್‌ ಬರ್ಗ್‌ ನ್ಯೂಸ್‌ ಏಜೆನ್ಸಿಗೆ ನೀಡಿದ ಸಂದರ್ಶನದಲ್ಲಿ ಐಬಿಎಂ ಸಿಇಒ ಅರವಿಂದ್‌ ಕೃಷ್ಣ ತಿಳಿಸಿದ್ದಾರೆ.

ಕಚೇರಿಯ ಬ್ಯಾಕ್ – ಆಫೀಸ್‌ ಚಟುವಟಿಕೆಗಳಾದ ಮಾನವ ಸಂಪನ್ಮೂಲ (human resources) ಇತ್ಯಾದಿ ವಿಭಾಗಗಳು ಕ್ರಮೇಣ ತೆರವಾಗಲಿದೆ ಎಂದು ಐಬಿಎಂ ಸಿಇಒ ಅರವಿಂದ್‌ ಕೃಷ್ಣ ತಿಳಿಸಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಗ್ರಾಹಕರ ಜತೆಗೆ ನೇರವಾಗಿ ವ್ಯವಹರಿಸದ ವಿಭಾಗಗಳಲ್ಲಿ 30% ಹುದ್ದೆಗಳು (non-customer-facing) ತೆರವಾಗಲಿದೆ. ಅವುಗಳ ಬದಲಿಗೆ ಎಐ ಮತ್ತು ಆಟೊಮೇಶನ್‌ (automation) ತಂತ್ರಜ್ಞಾನ ವಹಿಸಲಿದೆ ಎಂದು ಕೃಷ್ಣ ವಿವರಿಸಿದ್ದಾರೆ.

ಮೈಕ್ರೊಸಾಫ್ಟ್‌ ಕಾರ್ಪ್‌ ಬೆಂಬಲಿತ ಓಪನ್‌ಎಐ (OpenAI) ಅಭಿವೃದ್ಧಿಪಡಿಸಿರುವ ಚಾಟ್‌ಬೋಟ್‌, ಚಾಟ್‌ಜಿಪಿಟಿ (ChatGPT) ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ಇದು ಅನೇಕ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಂಬ ಆತಂಕದ ನಡುವೆ ಐಬಿಎಂ ಸಿಇಒ ನೀಡಿರುವ ಹೇಳಿಕೆ ಗಮನ ಸೆಳೆದಿದೆ.

ಐಬಿಎಂ ಈ ವರ್ಷ ಜನವರಿಯಲ್ಲಿ 3900 ಉದ್ಯೋಗ ಕಡಿತವನ್ನು ಘೋಷಿಸಿತ್ತು. ಕಂಪನಿಯು 2.60 ಲಕ್ಷ ಉದ್ಯೋಗಿಗಳನ್ನು ಹೊಂದಿದೆ. ಐಬಿಎಂ ಅನ್ನು 1911ರಲ್ಲಿ ಸ್ಥಾಪಿಸಲಾಗಿತ್ತು. ಸಿಇಒ ಅರವಿಂದ್‌ ಕೃಷ್ಣ 2020ರಿಂದ ಸಿಇಒ ಆಗಿದ್ದಾರೆ.

ಉದ್ಯಮಿ ಎಲಾನ್‌ ಮಸ್ಕ್‌ ಅವರು ಎಐ ಕುರಿತ ಸಂಶೋಧನೆಗಳನ್ನು 2023ರಲ್ಲಿ ತಡೆ ಹಿಡಿಯಬೇಕು. ಇದನ್ನು ನಿಯಂತ್ರಿಸಲು ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಹೇಳಿದ್ದಾರೆ. ಮತ್ತೊಂದು ಕಡೆ ಗೂಗಲ್‌ ಸಿಇಒ ಸುಂದರ್‌ ಪಿಚೈ ಮತ್ತು ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಳ್ಳಾ ಎಐ ಪರಿಣಾಮ ಕೆಲ ಉದ್ಯೋಗಗಳು ಹೋಗಬಹುದು. ಆದರೆ ಉದ್ಯೋಗಿಗಳ ಸಮಯ ಉಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

Exit mobile version