Site icon Vistara News

ICICI FD interest rate : ಐಸಿಐಸಿಐ ಎಫ್‌ಡಿ ಬಡ್ಡಿ ದರ ಏರಿಕೆ, ಹಿರಿಯರಿಗೆ 7.6%, ಇತರರಿಗೆ 7.1%

ICICI Bank

ನವ ದೆಹಲಿ: ಎಸ್‌ಬಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಬಳಿಕ ಐಸಿಐಸಿಐ ಬ್ಯಾಂಕ್‌ ತನ್ನ ನಿಶ್ಚಿತ ಠೇವಣಿಗಳ (fixed deposit) ಮೇಲಿನ ಬಡ್ಡಿ ದರವನ್ನು ಏರಿಸಿದೆ. ಎರಡು ಕೋಟಿ ರೂ. ತನಕದ ಎಫ್‌ಡಿಗೆ ಇದು ಅನ್ವಯವಾಗಲಿದೆ. ಬಡ್ಡಿಯನ್ನು 0.50% ತನಕ ವೃದ್ಧಿಸಲಾಗಿದೆ. (Interest rate) ಐಸಿಐಸಿಐ ಬ್ಯಾಂಕ್‌ ಇದೀಗ 7 ದಿನಗಳಿಂದ 10 ವರ್ಷ ತನಕದ ಅವಧಿಯ ಎಫ್‌ಡಿ ಬಡ್ಡಿ ದರವನ್ನು 3.5%ರಿಂದ 7.10% ತನಕ ಏರಿಸಿದೆ.

2023ರ ಫೆಬ್ರವರಿ 24ರಿಂದ ಹೊಸ ಬಡ್ಡಿ ದರಗಳು ಅನ್ವಯವಾಗಲಿದೆ ಎಂದು ಐಸಿಐಸಿಐ ಬ್ಯಾಂಕ್‌ ವೆಬ್‌ಸೈಟ್‌ ತಿಳಿಸಿದೆ.

ಐಸಿಐಸಿಐ ಬ್ಯಾಂಕ್‌ 7ದಿನಗಳಿಂದ 29 ದಿನಗಳ ಅವಧಿಯ ಠೇವಣಿಗೆ 3% ಬಡ್ಡಿ ನೀಡುತ್ತದೆ. 30-45 ದಿನಗಳಿಗೆ 3.50%, ೪೬-೬೦ ದಿನಗಳಿಗೆ ೪.೨೫% ಬಡ್ಡಿ ನೀಡುತ್ತದೆ. 1 ವರ್ಷಕ್ಕಿಂತ ಕಡಿಮೆ ಅವಧಿಗೆ 6% ಬಡ್ಡಿ ಲಭ್ಯವಿದೆ. ಹಿರಿಯ ನಾಗರಿಕರಿಗೆ 15 ತಿಂಗಳಿನಿಂದ ೧೮ ತಿಂಗಳಿನ ಅವಧಿಯ ಠೇವಣಿಗೆ 7.60% ಬಡ್ಡಿ ಸಿಗುತ್ತದೆ. ಇತರರಿಗೆ 18 ತಿಂಗಳಿನಿಂದ 2 ವರ್ಷ ಅವಧಿಯ ಠೇವಣಿಗೆ 7.10% ಬಡ್ಡಿ ಸಿಗುತ್ತದೆ.

Exit mobile version