ನವ ದೆಹಲಿ: ಕೇಂದ್ರ ಸರ್ಕಾರ ಐಡಿಬಿಐ ಬ್ಯಾಂಕ್‌ನಲ್ಲಿ ( IDBI Bank ) ವಿದೇಶಿ ಮೂಲದ ಫಂಡ್‌ಗಳು ಮತ್ತು ಇನ್ವೆಸ್ಟ್‌ಮೆಂಟ್ ಕಂಪನಿಗಳಿಗೆ 51% ಷೇರುಗಳನ್ನು ಖರೀದಿಸಲು ಅವಕಾಶ ಕಲ್ಪಿಸಿದೆ.
ಸಾರ್ವಜನಿಕ ವಲಯದ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾವನ್ನು 1964ರಲ್ಲಿ ಸ್ಥಾಪಿಸಲಾಗಿತ್ತು. ಭಾರತೀಯ ಜೀವ ವಿಮಾ ನಿಗಮ (49.24%), ಭಾರತ ಸರ್ಕಾರ (45.5%) ಐಡಿಬಿಐನಲ್ಲಿ ಷೇರು ಪಾಲನ್ನು ಹೊಂದಿದೆ.
ಐಡಿಬಿಐ ಬ್ಯಾಂಕ್ ಖಾಸಗೀಕರಣ ಪ್ರಕ್ರಿಯೆಯು, 2023ರ ಸೆಪ್ಟೆಂಬರ್ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇದೆ. ಖಾಸಗಿ ವಲಯದ ಬ್ಯಾಂಕ್‌ಗಳು, ವಿದೇಶಿ ಬ್ಯಾಂಕ್‌ಗಳು ಕೂಡ ಬಿಡ್ ಸಲ್ಲಿಸಬಹುದು.