Site icon Vistara News

Cash transactions | ಆಸ್ಪತ್ರೆ, ಪಾರ್ಟಿ ಹಾಲ್‌ಗಳಲ್ಲಿ ನಗದು ಬಳಸಿದರೆ ಐಟಿ ನಿಗಾ ಸಂಭವ

cash

ನವ ದೆಹಲಿ: ನಗದು ವರ್ಗಾವಣೆಗಳ ಮೇಲೆ ನಿಗಾ ವಹಿಸಲು ಆದಾಯ ತೆರಿಗೆ ಇಲಾಖೆಯು ಆಸ್ಪತ್ರೆ, ಪಾರ್ಟಿ ಹಾಲ್‌ಗಳಲ್ಲಿ ನಡೆಯುವ ನಗದು ವರ್ಗಾವಣೆಗಳ ಮೇಲೆ (Cash transactions) ಕಣ್ಣಿಟ್ಟಿದೆ. ಹೀಗಾಗಿ ಆಸ್ಪತ್ರೆ, ಪಾರ್ಟಿ ಹಾಲ್‌ಗಳಲ್ಲಿ ನಗದು ಬಳಸಿದರೆ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬೀಳುವ ಸಾಧ್ಯತೆ ಇದೆ.

ಆಸ್ಪತ್ರೆಗಳಲ್ಲಿ ಮತ್ತು ಪಾರ್ಟಿ ಹಾಲ್‌ಗಳಲ್ಲಿ ಗ್ರಾಹಕರಿಂದ ಪ್ಯಾನ್‌ ವಿವರಗಳನ್ನು ಸಂಗ್ರಹಿಸದೆ ಇರುವ ಹಾಗೂ ನಗದು ಬಳಕೆ ವ್ಯಾಪಕವಾಗಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಗಮನ ಹರಿಸಿದೆ.

ಆಲ್ವಾರ್‌, ಕೋಟಾ, ಜಲ್ನಾ ಮೊದಲಾದ ಸಣ್ಣ ಪಟ್ಟಣಗಳಲ್ಲಿಯೂ ಆದಾಯ ತೆರಿಗೆ ಇಲಾಖೆಯ ದಾಳಿಯ ಸಂದರ್ಭ, ಆಸ್ಪತ್ರೆ, ಪಾರ್ಟಿ ಹಾಲ್‌ಗಳಲ್ಲಿ ಭಾರಿ ಪ್ರಮಾಣದ ನಗದು ಜಪ್ತಿಯಾಗಿದೆ. ಮುಂಬಯಿ, ನಾಸಿಕ್‌, ಔರಾಂಗಾಬಾದ್‌ನಲ್ಲಿ ಉಕ್ಕಿನ ಕಂಬಿಗಳ ಉತ್ಪಾದಕರ ಮಳಿಗೆ, ಕಚೇರಿಗಳ ಮೇಲೆ ದಾಳಿ ನಡೆದ ವೇಳೆಯಲ್ಲೂ ಅಪಾರ ಪ್ರಮಾಣದ ನಗದನ್ನು ವಶಪಡಿಸಿಕೊಳ್ಳಲಾಗಿತ್ತು.

ಸಣ್ಣ ಪಟ್ಟಣಗಳಲ್ಲಿ ಆದಾಯ ತೆರಿಗೆ ಇಲಾಖೆಗಳ ಅಸ್ತಿತ್ವ ಸೀಮಿತವಾಗಿರುವುದರಿಂದ ಅಲ್ಲಿ ತೆರಿಗೆ ವಂಚನೆ ಭಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಇದನ್ನು ತಡೆಯಲು ಇಲಾಖೆ ಗಮನ ಹರಿಸಿದೆ. ಮತ್ತೊಂದು ಕಡೆ ಆಸ್ಪತ್ರೆಗಳು ತುರ್ತು ಸಂದರ್ಭಗಳಲ್ಲಿ ರೋಗಿಗಳಿಂದ ಪ್ಯಾನ್‌ ಕಾರ್ಡ್‌ ವಿವರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿವೆ.

Exit mobile version