ನವ ದೆಹಲಿ: ಭಾರತೀಯ ಸಕ್ಕರೆ ಉದ್ದಿಮೆ 2023ರಲ್ಲಿ ಉತ್ತಮ ಸಾಧನೆಯನ್ನು ದಾಖಲಿಸಬಹುದು. ಕಬ್ಬಿನ ಬೆಳೆ, ಸಕ್ಕರೆ ಉತ್ಪಾದನೆ, ರಫ್ತು ಮತ್ತು ಎಥೆನಾಲ್ ಉತ್ಪಾದನೆಯಲ್ಲಿ ಗಣನೀಯ ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ವಲಯದ ಷೇರುಗಳ ದರಗಳಲ್ಲಿ (Sugar stocks) ಈ ವರ್ಷ 25% ತನಕ ಏರಿಕೆಯಾಗಬಹುದು ಎಂದು ತಜ್ಞರು ನಿರೀಕ್ಷಿಸಿದ್ದಾರೆ.
ಸರ್ಕಾರ 2023-24ರಲ್ಲಿ ಸಕ್ಕರೆ ರಫ್ತು ಕೋಟಾವನ್ನು ಈಗಿನ 60 ಲಕ್ಷ ಟನ್ನುಗಳಿಗಿಂತ ಏರಿಸುವ ಸಾಧ್ಯತೆ ಇದೆ. ಇದು ಸಕ್ಕರೆ ಕಂಪನಿಗಳಿಗೆ ಅನುಕೂಲಕರವಾಗುವ ಸಾಧ್ಯತೆ ಇದೆ.
ದ್ವಾರಕೀಶ್ ಶುಗರ್ (106 ರೂ.), ಬಲರಾಂಪುರ್ ಚಿನಿ ಮಿಲ್ಸ್ (402 ರೂ.), ತ್ರಿವೇಣಿ ಎಂಜಿನಿಯರಿಂಗ್ & ಇಂಡಸ್ಟ್ರೀಸ್ ಷೇರು ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹೀಗಿದ್ದರೂ, ಷೇರು ಹೂಡಿಕೆದಾರರು ತಾವಾಗಿಯೇ ಕಂಪನಿಯ ಬಗ್ಗೆ ಅಧ್ಯಯನ ನಡೆಸಿ ಸ್ವಂತ ನಿರ್ಧಾರ ಕೈಗೊಳ್ಳುವುದು ಸೂಕ್ತ. ಏಕೆಂದರೆ ಷೇರು ಮಾರುಕಟ್ಟೆಯ ಏರಿಳಿತಗಳನ್ನು ಆಧರಿಸಿ ಷೇರು ದರ ನಿಗದಿಯಾಗುತ್ತದೆ.